ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿ ಎಂಟ್ರಿ – ನ್ಯೂ ಗೆಸ್ಟ್ ಗೆ ವೆಲ್ ಕಮ್ ಮಾಡಿದ ಸಚಿವರು

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿ ಎಂಟ್ರಿ ಕೊಟ್ಟಿದ್ದು ಇದನ್ನ ನೋಡಲು ಇಂದು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಹೌದು..  ಮೃಗಾಲಯದಲ್ಲಿ ಸಾರ್ವಜನಿಕ ವಿಕ್ಷಣೆಗೆ ವೆಸ್ಟ್ರನ್ ಹೂಲಕ್ ಗಿಬ್ಬನ್ ಕೋತಿ ಲಭ್ಯವಾಗಿದೆ. ಹೂಲಕ್ ಗಿಬ್ಬನ್ ಉದ್ದನೇಯ ತೋಳುಗಳುಳ್ಳ, ಜೋರಾದ ಸದ್ದು ಮಾಡುವ ಹೂಲಕ್ ಗಿಬ್ಬನ್ ಕೋತಿಯನ್ನ ಸಾರ್ವಜನಿಕ ವಿಕ್ಷಣೆಗೆ ಅರಣ್ಯ ಸಚಿವ ಸಿಸಿ ಪಾಟೀಲ್ ಉದ್ಘಾಟನೆ ಮಾಡಿದರು. ಟೇಪ್ ಕತ್ತರಿಸುವ ಮೂಲಕ, ಹಸಿರು ಬಾವುಟ ಹಾರಿಸಿ ನೂತನ ಗೇಜ್ ಉದ್ಘಾಟನೆ ಮಾಡಿದರು. ಈ ವೇಳೆ ಸಚಿವ ಸಿಸಿ ಪಾಟೀಲ್‌ಗೆ ಶಾಸಕ ರಾಮ್‌ದಾಸ್ ಸಾಥ್ ಉಪಸ್ಥತರಿದ್ದರು.
ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಮನರಂಜನೆ ನೀಡಬಲ್ಲ ಕೋತಿ ಹೂಲಕ್ ಗಿಬ್ಬನ್ ಆಗಿದ್ದರು ತನ್ನ ಉದ್ದನೇಯ ತೋಳುಗಳನ್ನು ಬಳಸುತ್ತ ಮರದಿಂದ ಮರಕ್ಕೆ ಜಿಗಿಯುತ್ತ, ಜೋರಾದ ಸದ್ದು ಮಾಡುವ ಚುರುಕಿನ ಕೋತಿಗಳಿವು. ನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಒಂದು ಗಂಡು ಒಂದು ಹೆಣ್ಣು ಹೂಲಕ್ ಗಿಬ್ಬನ್ ಆಟ ಕಂಡು ಪ್ರವಾಸಿಗರು ಖುಷಿಪಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಅರಣ್ಯ ಸಚಿವ ಸಿಸಿ ಪಾಟೀಲ್ ,ಬೆಳಗಾವಿ ಇಂದು ಮತ್ತು ನಾಳೆಯೂ ನಮ್ಮದೆ. ಠಾಕ್ರೆ ನೂತನವಾಗಿ ಸಿಎಂ ಆಗಿದ್ದಾರೆ. ಅವರು ಓಲೈಕೆ ಮಾಡಲು ಯತ್ನಿಸುತ್ತಿದ್ದಾರೆ. ಆದ್ರೆ ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದಿದ್ದಾರೆ ಹೇಳಿದ್ದಾರೆ.

ಕಳೆದ ವರ್ಷ ಬಂಡೀಪುರದಲ್ಲಿ ಬೆಂಕಿ ಅವಘಡ ವಿಚಾರಕ್ಕೆ ಮಾತನಾಡಿದ ಅವರು ಈ ಬಾರಿ ಮುಂಜಾಗ್ರತವಾಗಿ ವಿಶೇಷ ಸೇನಾ ಹೆಲಿಕಾಪ್ಟರ್ ಬಳಸಲು ಚಿಂತಿಸಲಾಗಿದೆ. ಇದಕ್ಕೆ ಹೆಚ್ಚು ಹಣ ಖರ್ಚಾಗಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೇ‌ಂದ್ರ ಸಚಿವ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೆವೆ. ಕಳೆದ ಬಾರಿ ಬೆಂಕಿ ರೇಖೆ ನಿರ್ಮಾಣವಾಗದೆ ಅವಘಡ ಸಂಭವಿಸಿತ್ತು. ಆದ್ರೆ ಈ ಬಾರಿ ಸಂಪೂರ್ಣ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ ಎಂದು ಮೈಸೂರಿನಲ್ಲಿ ಅರಣ್ಯ ಸಚಿವ ಸಿಸಿ ಪಾಟೀಲ್ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ‌ವಾಗಿ ಮಾತನಾಡಿ, ಇದು ಸಿಎಂಗೆ ಬಿಟ್ಟ ವಿಚಾರ. ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಇನ್ನು ಡಿಸಿಎಂ ಹುದ್ದೆ ಬೇಕು ಬೇಡ ಎನ್ನುವ ವಿಚಾರಕ್ಕು ಪ್ರತಿಕ್ರಿಯೆ ನೀಡಲ್ಲ. ಕೆಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದರು.

ಅರಣ್ಯ ಸಿಬ್ಬಂದಿಗಳಿಗೆ ಸಿಎಂ ಪದಕ ನೀಡದ ವಿಚಾರಕ್ಕೆ ಮಾತನಾಡಿದ ಅವರು ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನಿಸಲು ಸಾಧ್ಯವಾಗಿರಲಿಲ್ಲ. ಆದಷ್ಟು ಬೇಗ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕ ನಿಗದಿ ಪಡಿಸುತ್ತೇನೆ.

ಮಾನವ ಮತ್ತು ವನ್ಯಜೀವಿ ಸಂಘರ್ಷ ವಿಚಾರ. ಇದನ್ನು ತಪ್ಪಿಸಲು100 ಕೋಟಿ ವೆಚ್ಚದಲ್ಲಿ ಆನೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತೆ. ಕಾಡಂಚಿನ ಪ್ರದೇಶಲ್ಲಿ ಆನೆ ತಡೆಗೋಡೆ ನಿರ್ಮಾಣ. ರೈಲ್ವರ ಕಂಬಿಗಳು, ಸೋಲಾರ್ ಫೆನ್ಸ್ ಹಾಗೂ ಕಂದಗಳ ಮೂಲಕ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ ಸಂಘರ್ಷ ಇರುವ ಕಡೆ ಮಾಡಲಾಗುತ್ತೆ‌. ನಂತರ ಉಳಿದಂತ ಸ್ಥಳಗಳಲ್ಲಿ ನಿರ್ಮಾಣ ಮಾಡಲಾಗುವುದು‌ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights