ಮೊಬೈಲ್, ಟ್ಯಾಬ್ಲೆಟ್ ಗಳಂತಹ ಯುಗದಲ್ಲಿ ಹಳೆಯ ವಸ್ತುಗಳ ಪ್ರದರ್ಶನ

ಮೊಬೈಲ್ ಟ್ಯಾಬ್ಲೆಟ್, ಕಂಪ್ಯೂಟರ್ ಯುಗದಲ್ಲಿ, ಬದುಕುತ್ತಿರುವ ನಮ್ಮ ನಿಮ್ಮೆಲ್ಲರ ಜೀವನ ಇದು ನಮ್ಮ ಪೂರ್ವಜರು ಹೀಗೆ ಬದುಕ್ತಾ ಇದ್ರಾ ಖಂಡಿತಾ ಇಲ್ಲಾ ನಮ್ಮ ಪೂರ್ವಜರ ಬದುಕೆ ಬೇರೆ ಅಬರು ಬಳಸುತ್ತಿದ್ದ ವಸ್ತುಗಳೆ ನಮ್ಮ ಪೂರ್ವಜರು ಬಳಸುತ್ತಿದ್ದ ವಸ್ತುಗಳ ಪ್ರದರ್ಶನ ಪ್ರದರ್ಶನಕ್ಕೆ ಇಟ್ಟಿದ್ದ ವಸ್ತುಗಳನ್ನ ಕಂಡು ಹೀಗೂ ನಮ್ಮ ಪೂರ್ವಜರು ಬದುಕುತ್ತಿದ್ದರಾ ಎಂದು ನೋಡುಗರು ಆಶ್ಚರ್ಯ ಪಟ್ಟಿದ್ದಾರೆ.

ಹಳೆಯ ಕಾಲದ ವಸ್ತೂಗಳು ತಾಮ್ರದ ಪಾತ್ರೆಗಳು.. ಮಣ್ಣಿನ ಮಡಿಕೆ ಜೊತೆಗೆ ಮಕ್ಕಳೆ ತಮ್ಮ ಕೈಯಾರೆ ರೇಡಿ ಮಾಡಿದ ಹ್ಯಾಂಡ ಕ್ರಾಪ್ಟ ವಸ್ತುಗಳು ಇದನ್ನೆಲ್ಲಾ ನೋಡಿದರೆ ಇಂತಹ ವಸ್ತುಗಳು ಇದಾವಾ ಅನ್ನೊ ಭಾವನೆ ನಿಮಗೆ ಬರಬಹುದು ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಇಂತಹದೊಂದು ವಸ್ತು ಪ್ರದರ್ಶನ ನಡೆಯುತ್ತಿದೆ.. ಜೊಲ್ಲೆ ಉದ್ಯೋಗ ಸಮೂಹ ಹಮ್ಮಿಕೊಂಡಿರುವ 8 ನೇ ಪ್ರೇರಣಾ ಉತ್ಸವದ ನಿಮಿತ್ಯ ಹಳೆಯ ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.. ಇನ್ನು ಹಳೆಯ ವಸ್ತೂಗಳ ಪ್ರದರ್ಶನದಲ್ಲಿ ವಿಶೇಷವಾಗಿ ಹಳೆಯ ತಾಮದ್ರದ ವಸ್ತುಗಳು ಹಳೆಯ ಟೇಪ್ ರೆಕಾರ್ಡರ, ಮಣ್ಣಿನ ಒಲೆ. ಮಣ್ಣಿನ ಸಾಮಗ್ರಿಗಳು ನೊಡುಗರ ಗಮನ ಸೇಳೆದಿದೆ ಇದನ್ನು ನೊಡಲು ಆಗಮಿಸಿದವರು ಇವುಗಳನ್ನೆಲ್ಲ ನಿಜಕ್ಕು ನಮ್ಮ ಪೂರ್ವಜರು ಇಂತಹ ವಸ್ತುಗಳನ್ನ ಬಳಸುತ್ತಿದ್ದರಾ.. ಇಂತ ವಿಶೇಷ ವಸ್ತುಳು ನಾವು ಯಾವತ್ತು ನೊಡೆ ಇಲ್ಲಾ ಅನ್ನುವ ಮಾತುಗಳನ್ನ ಆಡುತ್ತಾರೆ..

ಇನ್ನು ಶಾಲಾ ಮಕ್ಕಳಿಗಾಗಿ ಚಿತ್ರಕಲಾ ನಮ್ಮ ಕನಸಿನ ಸ್ಮಾರ್ಟ ಸಿಟಿ ಯೋಜನೆಗಳ ಕುರಿತು ಸ್ಫರ್ಧೆಯನ್ನು ಆಯೋಜನೆ ಮಾಡಲಾಗಿತ್ತು.. ಶಾಲಾ ಮಕ್ಕಳು ಬಿಡಿಸಿದಂತಹ ಹ್ಯಾಂಡ ಕ್ರಾಪ್ಟ ಡಿಸೈನಗಳು.. ಪೇಂಟಿಂಗ, ಹಾಗೂ ನಮ್ಮ ನಮ್ಮ ಗ್ರಾಮ ಸ್ಮಾರ್ಟ ಗ್ರಾಮ ಎನ್ನುವ ಪ್ರೊಜೇಕ್ಟಗಳು ನೊಡುಗರ ಗಮನ ಸೇಳೆದವು ಕಂಪ್ಯೂಟರ್ ಮೊಬೈಲಗಳಲ್ಲಿ ಯಾವತ್ತು ಬಿಜಿಯಾಗುವ ಇಂದಿನ ಪೀಳಿಗೆಗಳಿ ಇಂತಹ ಕಾಂಪೀಟೇಶನಗಳು ಬಹಳ ಮುಖ್ಯ ಇದಂರಿದಾಗಿ ಗ್ಯಾಜೇಟ್ ಸಿನಿಮಾಗಳೆ ಮನರಂಜನೆ ಅಲ್ಲದೆ ಇಂತಹ ಸ್ಪರ್ಧೆಗಳು ಮಕ್ಕಳ ಬುದ್ದಿಮಟ್ಟ ಮತ್ತು ಮನರಂಜನೆಯನ್ನ ಹೆಚ್ಚಿಸಬಲ್ಲದು ಎಂಬುದು ಆಯೋಜಕರ ಮಾತು.

ಒಟ್ಟಿನಲ್ಲಿ ಮೋಬೈಲ ಯುಗದ ಭರಾಟೆಯಲ್ಲಿ ಹಳೆಯ ಜೀವನ ಶೈಲಿಯನ್ನೆ ಮರೆಯುತ್ತಿರುವ ಇಂದಿನ ಪಿಳಿಗೆಗಳಿಗೆ ಹಳ್ಳಿ ಸೊಬಗಿನ ಜೀವನ ಶೈಲಿಯನ್ನ ತೋರಿಸುವ ಈ ಪ್ರದರ್ಶನ ಕಂಡು ಮಕ್ಕಳು ಖುಷಿ ಪಡುತ್ತಿದ್ದಾರೆ..ಇನ್ನು ಇಂತಹ ಸ್ಫರ್ಧೇಗಳನ್ನ ಆಯೋಜನೆ ಮಾಡಲಿ ಎಂಬುದೆ ನಮ್ಮ ಆಶಯ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights