ಮೋದಿ ಮನವಿಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ: ಐದು ಸಲಹೆಗಳು

ದೆಹಲಿಯ ಹೃದಯಭಾಗದಲ್ಲಿ 20,000 ಕೋಟಿ ವೆಚ್ಚದಲ್ಲಿ “self-indulgent”ಅನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸುವ ಯೋಜನೆಯನ್ನು ರದ್ದುಗೊಳಿಸಿ, ಅಧಿಕೃತ ವಿದೇಶ ಪ್ರವಾಸಗಳನ್ನು ಸ್ಥಗಿತಗೊಳಿಸಿ ಮತ್ತು ಸರ್ಕಾರಿ ಜಾಹೀರಾತುಗಳನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಸಲಹೆಗಳನ್ನು ಕೇಳಿದ್ದರು. ಮೋದಿಯವರ ಮನವಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಂಸದರಿಗೆ ಶೇ.30 ರಷ್ಟು ವೇತನ ಕಡಿತ ಮಾಡಲು ಮುಂದಾಗಿರುವ ಕ್ಯಾಬಿನೆಟ್ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

“ಐದು ಕಾಂಕ್ರೀಟ್ ಸಲಹೆಗಳು” ಎಂದು ಪತ್ರ ಬರೆದಿರುವ ಸೋನಿಯಾಗಾಂಧಿಯವರು ಇದು ಸರ್ಕಾರವು ತನ್ನ ಸ್ವಂತ ಖರ್ಚನ್ನು ಎಲ್ಲಿ ಕಡಿತಗೊಳಿಸಬಹುದು ಎಂಬುದನ್ನು ನೆನಪಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

1.     20,000 ಕೋಟಿ ರೂ.ಗಳ “ಸೆಂಟ್ರಲ್ ವಿಸ್ಟಾ” ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. “ಈಗ ಅಸ್ತಿತ್ವದಲ್ಲಿರುವ ಐತಿಹಾಸಿಕ ಕಟ್ಟಡಗಳಲ್ಲಿ ಸಂಸತ್ತು ಆರಾಮವಾಗಿ ಕಾರ್ಯನಿರ್ವಹಿಸಬಲ್ಲದು. ಹಾಗಾಗಿ ಆ ಹಣವನ್ನು COVID-19 ನಿಯಂತ್ರಣಕ್ಕಾಗಿ ಹೊಸ ಆಸ್ಪತ್ರೆಗಳು, ಆಸ್ಪತ್ರೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳು ಹಾಗೂ ಡಯಾಗ್ನೋಷ್ಟಿಕ್‌ ಸೆಂಟರ್‌ಗಳನ್ನು ಸ್ಥಾಪಿಸಲು ಬಳಸಬೇಕು.

2.     ಶೇ.30 ರಷ್ಟು ಕಡಿತವನ್ನು ಪ್ರತಿಯೊಬ್ಬರ ಖರ್ಚಿನ ಪ್ರಮಾಣಕ್ಕೆ ಅನುಸಾರವಾಗಿ ಕಡಿತಗೊಳಿಸಬೇಕು. ಆ ಹಣವನ್ನು ಅಸಂಘಟಿತ ವಲಯದ ವಲಸೆ ಕಾರ್ಮಿಕರು ಮತ್ತು ಇತರರಿಗೆ ಸಹಾಯ ಮಾಡಲು ಬಳಸಿಕೊಳ್ಳಬೇಕು.

3.     ಪ್ರಧಾನಮಂತ್ರಿಗಳು ತಮ್ಮ “ಎಲ್ಲಾ ವಿದೇಶಿ ಭೇಟಿಗಳನ್ನು” ತಡೆಹಿಡಿಯಬೇಕು. “ಈ ಮೊತ್ತವನ್ನು (ಕಳೆದ ಐದು ವರ್ಷಗಳಲ್ಲಿ ಮೋದಿಯವರ ವಿದೇಶಿ ಪ್ರವಾಸಗಳಿಗೆ ಖರ್ಚಾಗಿರುವ ಮೊತ್ತ ಸುಮಾರು 393 ಕೋಟಿ ರೂ.) ಕೋವಿಡ್ -19 ಅನ್ನು ಎದುರಿಸುವ ಯೋಜನೆಗೆಳಲ್ಲಿ ವ್ಯಾಪಕವಾಗಿ ಬಳಸಿಕೊಳ್ಳಬಹುದು.”

4.     ಕೊರೊನಾ ವೈರಸ್‌ ಸಂಬಂಧಿತ ಮಾಹಿತಿಯನ್ನು ಹೊರತುಪಡಿಸಿ ಸರ್ಕಾರವು ಟಿವಿ, ಮುದ್ರಣ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ನೀಡುವ ಜಾಹೀರಾತುಗಳನ್ನು ಎರಡು ವರ್ಷಗಳ ಕಾಲ ನಿಷೇಧಿಸಬೇಕು.

5.     ದಕ್ಷತೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಲೆಕ್ಕಪರಿಶೋಧನೆಗಾಗಿ “ಪಿಎಂ ಕೇರ್ಸ್” ನಿಧಿಯ ಅಡಿಯಲ್ಲಿರುವ ಎಲ್ಲಾ ಹಣವನ್ನು ಪ್ರಧಾನಮಂತ್ರಿಯ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಬೇಕು. ಎರಡು ಪ್ರತ್ಯೇಕ ನಿಧಿಗಳನ್ನು ಸ್ಥಾಪಿಸುವುದು “ಶ್ರಮ ಮತ್ತು ಸಂಪನ್ಮೂಲಗಳ ವ್ಯರ್ಥ” ಎಂದು ಸೋನಿಯಾಗಾಂಧಿ ತಮ್ಮ ಪತ್ರದಲ್ಲಿ ಬರೆದು ಸಲಹೆಗಳನ್ನು ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights