ಯಾವ ಮಗುವೂ ಮಾಡದ್ದನ್ನು ಯಶ್‌ ಮಗ ಮಾಡಿದ್ದಾದರೂ ಏನು?

ಸ್ಯಾಂಡಲ್‌ವುಡ್‌ ನಟ​ ಯಶ್​ ಮತ್ತು ನಟಿ ರಾಧಿಕಾ ಪಂಡಿತ್​ ತಮ್ಮ 2ನೇ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ಎರಡನೇ ಮಗು ಹುಟ್ಟಿದ ಆರು ತಿಂಗಳ ಬಳಿಕ ರಾಧಿಕಾ​ ದಂಪತಿ ತಮ್ಮ ಮಗನ ಜೊತೆಗಿರುವ ಫೋಟೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಜ್ಯೂನಿಯರ್​ ಯಶ್​ ಹುಟ್ಟಿದ ಸಂದರ್ಭದಲ್ಲಿ ರಾಕಿಂಗ್​ ಸ್ಟಾರ್​ ಮತ್ತು ರಾಧಿಕಾ ಯಾವ ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಈಗ ಮಗನ ಮುಖ ತೋರಿಸಿ ಫೋಟೋ ಹಂಚಿಕೊಂಡಿರುವ ಯಶ್‌ ತಮ್ಮ ಮಗನ ಬಗ್ಗೆ ಶಾಂಕಿಂಗ್‌, ಬ್ರೇಕಿಂಗ್‌, ಸಸ್ಪೆನ್ಸಿವ್‌ ವಿಚಾರವನ್ನು ಹೇಳಿಕೊಂಡಿದ್ದಾರೆ. ಅದರ ಬಗ್ಗೆ ನಮ್ಮ ಹಲವಾರು ಸುದ್ದಿ ತಾಣಗಳು ಈ ಬಗ್ಗೆ ಯಶ್‌ ಮಗ ಹಾಗಂತೆ, ಹೀಗಂತೆ ಎಂತೆಲ್ಲಾ ಸುದ್ದಿ ಮಾಡಿದ್ದವು.

ಅದನ್ನ ನೋಡಿ ಅಂತದ್ದೇನಿರಬಹುದು ಎಂದು ಕೂತೂಹಲದಿಂದ ನೋಡಿದರೆ, ಯಶ್‌ ಹೀಗೆ ಹೇಳಿದ್ದಾರೆ:  ‘ನನ್ನ ಮಗ ತುಂಬ ಡಿಮ್ಯಾಂಡ್ ಮಾಡುತ್ತಾನೆ. ನಾನು ಮಲಗುವವರೆಗೆ ಅವನು ಮಲಗುವುದಿಲ್ಲ. ನಾನು ಮತ್ತು ರಾಧಿಕಾ ಅವನ ಜೊತೆಗೆ ಮಲಗಬೇಕು. ನಾವು ಬೆಡ್‌ ಹತ್ತಿರ ಹೋಗುವವರೆಗೂ ಅವನು ಎಚ್ಚರವಾಗಿರುತ್ತಾನೆ. ಆಮೇಲೆ ರಾತ್ರಿ ಪುನಃ ಎಚ್ಚರಗೊಳ್ಳುತ್ತಾನೆ’ ಎಂದು ಹೇಳಿದ್ದಾರೆ ಅಷ್ಟೆ.

ಇದರಲ್ಲೇನಿದೆ ವಿಷೇಶ ಅನ್ನಿಸುತ್ತಿಯಲ್ಲಾ. ಎಲ್ಲಾ ಮಕ್ಕಳು ಮಧ್ಯಾಹ್ನ ನಿದ್ರೆ ಮಾಡೋದು, ರಾತ್ರಿ ಹೆಚ್ಚುಕಾಲ ಎಚ್ಚರವಾಗಿರೋದು, ನಿದ್ರೆಯ ಮಧ್ಯೆ ಎಚ್ಚರವಾಗುವುದು ಇದೆಲ್ಲಾ ಸಾಮಾನ್ಯ ಸಂಗತಿಗಳೇ.

ಅದೇನೇ ಇರಲಿ, ಲಾಕ್​ಡೌನ್​ನಿಂದಾಗಿ ಯಶ್​ ಮನೆಯಲ್ಲಿಯೇ ಉಳಿಯುವಂತಾಗಿದ್ದು, ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ರಾಧಿಕಾ ಪಂಡಿತ್‌ ಒಬ್ಬರೇ ಇಬ್ಬರು ಮಕ್ಕಳನ್ನು ಸಂತೈಸುವ ಶ್ರಮ ಕಡಿಮೆಯಾಗಿದ್ದು, ಅವರಿಗೂ ಸ್ವಲ್ಪ ರಿಲೀಫ್‌ ಸಿಕ್ಕಿದೆ. ಇದರಿಂದಾಗಿ ಜೂನಿಯರ್‌ ರಾಧಿಕಾ (ಆರ್ಯಾ) ಕೂಡ ಖುಷಿಯಾಗಿದ್ದಾಳೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights