ರಾಜ್ಯದಲ್ಲಿ ಒಂದೇ ದಿನ 17 ಪಾಸಿಟಿವ್ ಕೇಸ್ : ವಿಜಾಪುರದಲ್ಲಿ 6 ಜನರಿಗೆ ಸೋಂಕು ದೃಢ!

ರಾಜ್ಯದಲ್ಲಿ ಒಂದೇ ದಿನ 17 ಪಾಸಿಟಿವ್ ಕೇಸ್ ದಾಖಲಾಗಿದ್ದು, ಲಾಕ್ ಡೌನ್ ನಡುವೆಯೂ ವಿಜಾಪುರದಲ್ಲಿ ಮೊದಲ ಬಾರಿಗೆ ಒಂದೇ ದಿನಕ್ಕೆ 6 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಹೌದು…  ಕಲಬುರಗಿಯಲ್ಲಿ 2 ವರ್ಷದ ಗಂಡು ಮಗು ಸೇರಿ ಮೂವರಿಗೆ ಸೋಂಕು ಪತ್ತೆಯಾಗಿದೆ. ಬೆಳಗಾವಿಯಲ್ಲಿ ನಾಲ್ವರಿಗೆ , ಬೆಂಗಳೂರಿನಲ್ಲಿ ಮೂರು ಜನರಿಗೆ, ಮೈಸೂರಿನಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಆ ಮೂಲಕ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 323ಕ್ಕೆ ಏರಿಕೆಯಾಗಿದೆ.

ಮೊತ್ತೊಂದು ಆತಂಕಕಾರಿ ವಿಚಾರ ಅಂದರೆ ವಿಜಯಪುರದಲ್ಲಿ ಇಲ್ಲಿಯವರೆಗೆ ಯಾವೊಂದು ಸೋಂಕಿತ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೀಗ ಒಂದೇ ದಿನದಲ್ಲಿ 6 ಜನರಿಗೆ ಸೋಂಕು ಕಂಡುಬಂದಿದ್ದು, ಈ ಫೈಕಿ ಮೂವರು ಮಕ್ಕಳಿದ್ದಾರೆ. 10 ಮತ್ತು 13 ವರ್ಷದ ಬಾಲಕರಿಬ್ಬರು ಹಾಗೂ 12 ವರ್ಷದ ಬಾಲಕಿಗೆ ಕೊರೊನಾ ಸೋಂಕು ತಗುಲಿದೆ. 6 ಜನರ ಪೈಕಿ ಐದು ಪ್ರಕರಣಗಳ ಸೋಂಕು ತಗುಲಿದ ಮೂಲ ತಿಳಿದು ಬಂದಿಲ್ಲ. ಇವರಿಗೆಲ್ಲಾ ಸದ್ಯ ಚಿಕಿತ್ಸೆ ಕೊಡಲಾಗುತ್ತಿದೆ.

ಇನ್ನೂ ದೇಶದ ವಿಚಾರಕ್ಕೆ ಬಂದರೆ 24 ಗಂಟೆಯಲ್ಲಿ 34 ಸಾವು ಸಂಭವಿಸಿದ್ದು, 8356 ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, 364 ಜಿಲ್ಲೆಗಳಿಗೆ ಸೋಂಕು ಹರಡಿದೆ. ಈವರೆಗೆ 90 ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights