ರಾಜ್ಯದಲ್ಲಿ ಮನೆ ಮನೆಗಳಿಗೆ ತೆರಳಿ ಹೇರ್ ಕಟ್ಟಿಂಗ್, ಶೇವಿಂಗ್ ಮಾಡಲು ಮುಂದಾದ ಕ್ಷೌರಿಕರು..

ಕೊರೊನಾ ಹರಡುವ ಭೀತಿಯಲ್ಲಿ ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಸೆಲೂನ್ ಸೆಂಟರ್ ಗಳಲ್ಲಿ ಯಾವ ರೀತಿ ಅಂತರ ಕಾಯ್ದುಕೊಳ್ಳಲಾಗಿತ್ತು ಅನ್ನೋ ದೃಶ್ಯಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೀಗ ರಾಜ್ಯದಲ್ಲಿ ಜನ ಸೆಲೂನ್ ಗಳಿಗೆ ಹೋಗಲು ಹೆದರುತ್ತಿದ್ದಾರೆ. ಹೀಗಾಗಿ ಕ್ಷೌರಿಕರೇ ಮನೆ ಮನೆಗಳಿಗೆ ತೆರಳಿ ಶೇವಿಂಗ್, ಕಟ್ಟಿಂಗ್ ಮಾಡುತ್ತಿದ್ದಾರೆ.

ಹೌದು… ಜನ ಗುಂಪು ಸೇರುವುದರಿಂದ ಕೊರೊನಾ ವೈಸರ್ ಹರಡುವ ಭಯ ಶುರುವಾಗಿದ್ದು ಗದಗ, ಕೊಪ್ಪಳ, ಬಳ್ಳಾರಿಯ ಕೆಲವು ಕಡೆ ಕ್ಷೌರಿಕರು ಮನೆ ಮನೆಗಳಿಗೆ ತೆರಳಿ ಹೇರ್ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.

ಕೊರೊನಾ ಎಫೆಕ್ಟ್ ಎಲ್ಲಾ ಮಳಿಗೆ, ಮಾರುಕಟ್ಟೆ, ಶಾಪ್ ಗಳಿಗೆ ತಗುಲಿದ್ದು ದೇಶವ್ಯಾಪಿ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಜನ ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಕಟ್ಟಿಂಗ್ ಶಾಪ್ ಗಳಿಗೆ ಎಲ್ಲರೂ ಒಟ್ಟಿಗೆ ತೆರಳಿದರೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಕ್ಷೌರಿಕರೇ ಮನೆ ಮನೆಗಳಿಗೆ ತೆರಳಿ ಜನರಿಗೆ ಹೇರ್ ಕಟ್ ಹಾಗೂ ಶೇವಿಂಗ್ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಸುರಕ್ಷತೆಯ ದೃಷ್ಟಿಯಿಂದ ಕ್ಷೌರಿಕ ಮಾಸ್ಕ್ ಹಾಕಿರಬೇಕು. ಜೊತೆಗೆ ಹ್ಯಾಂಡ್ ಗ್ಲೌಸ್ ಹಾಕಿರಬೇಕು. ಇದರಿಂದಿಗೆ ಒಬ್ಬರಿಗೆ ಬಳಕೆ ಮಾಡಿದ ಬ್ಲೇಡ್ ಮತ್ತೊಬ್ಬರಿಗೆ ಬಳಕೆ ಮಾಡುವಂತ್ತಿಲ್ಲ.ಇನ್ನೂ ಕತ್ತರಿ, ಇನ್ನಿತರ ಸಾಮಾಗ್ರಿಗಳನ್ನ ಬಿಸಿ ನೀರಿನಿಂದ ತೊಳೆದು ಬಳಕೆ ಮಾಡಬೇಕು. ಇಂತೆಲ್ಲಾ ಮುಂಜಾಗೃತ ಕ್ರಮಗಳನ್ನು ವಹಿಸಿದಲ್ಲಿ ಮಾತ್ರ ಕ್ಷೌರಿಕನಿಗೆ ಸಾರ್ವಜನಿಕರು ಹೇರ್ ಕಟ್ಟಿಂಗ್, ಶೇವಿಂಗ್ ಅವಕಾಶ ನೀಡಬೇಕು ಎಂದು ಜಿಲ್ಲಾಡಳಿ ಮನವಿ ಮಾಡಿಕೊಂಡಿದೆ.

ಈ ಮೂಲಕ ರಾಜ್ಯದಲ್ಲಿ ಮರಳಿ ಐತಿಹಾಸಿಕ ಪದ್ಧತಿ ಜಾರಿಯಾದಂತೆ ಕಾಣುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights