Fact Check: ಆಸ್ಪತ್ರೆಯಲ್ಲಿ 6ರ ಬಾಲಕ ಸ್ಟ್ರೆಚರ್ ತಳ್ಳುವ ಹೃದಯ ವಿದ್ರಾವಕ ವಿಡಿಯೋ ಬಿಹಾರದ್ದಲ್ಲ…
ಬಿಹಾರದಲ್ಲಿ ಮೂರನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆ ನವೆಂಬರ್ 7 ರಂದು ನಡೆಯಲಿದೆ. ಇದರ ಮಧ್ಯೆ ಬಿಹಾರ ಪ್ರದೇಶದ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳು ಸಣ್ಣ ಹುಡುಗನೊಬ್ಬ ಸ್ಟ್ರೆಚರ್ ಅನ್ನು ತಳ್ಳುವ ಎಂಟು ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದು, ಈ ದೃಶ್ಯ ಬಿಹಾರದ ಆಸ್ಪತ್ರೆಯಿಂದ ಬಂದಿದೆ ಎಂದಿವೆ.
ಹಿಂದಿಯಲ್ಲಿರುವ ವೀಡಿಯೊದ ಶೀರ್ಷಿಕೆ, “ಮಾನವೀಯತೆ ನಾಚಿಕೆಪಡಿಸುವ ಈ ವೀಡಿಯೊ ಬಿಹಾರದ ಬಿಜೆಪಿ-ಜೆಡಿಯು ಸರ್ಕಾರದ ನಿರ್ದಯತೆಯನ್ನು ತೋರಿಸುತ್ತದೆ. ಸಾರ್ವಜನಿಕರ ಅಮೂಲ್ಯ ಮತದಿಂದ ಚುನಾವಣೆಯಲ್ಲಿ ಗೆದ್ದ ನಂತರ ಜನರನ್ನು ಆಸ್ಪತ್ರೆಗಳಲ್ಲಿ ಸಾಯುವಂತೆ ಮಾಡಿದ್ದಾರೆ” ಎಂದು ಬರೆಯಲಾಗಿದೆ.
मानवता को शर्मसार करने वाला ये वीडियो बिहार की सत्ता में बैठी भाजपा-जदयू सरकार की निर्ममता को दर्शाता है। चुनाव में जनता के ही कीमती वोट से जीतकर उसे अस्पतालों में मरने के लिए छोड़ देते हैं।#न_भूले_हैं_न_भूलेंगे pic.twitter.com/L8QcvAnJCA
— INCBihar (@INCBihar) November 6, 2020
ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ) ಈ ವಿಡಿಯೋ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲಾ ಆಸ್ಪತ್ರೆಯಿಂದ ಬಂದಿದೆ ಮತ್ತು 2020 ರ ಜುಲೈನಲ್ಲಿ ಈ ವಿಡಿಯೋ ವೈರಲ್ ಆಗಿತ್ತು ಎಂದು ಕಂಡುಹಿಡಿದಿದೆ. ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದ ತನ್ನ ಅಜ್ಜನನ್ನು ವಿವಿಧ ವಾರ್ಡ್ಗಳಿಗೆ ಕರೆದೊಯ್ಯಲು ಅಪ್ರಾಪ್ತ ವಯಸ್ಕ ತನ್ನ ತಾಯಿಗೆ ಸ್ಟ್ರೆಚರ್ ತಳ್ಳಲು ಸಹಾಯ ಮಾಡುತ್ತಿದ್ದ ಬಾಲಕ.
ಕಾಂಗ್ರೆಸ್ ಐಎನ್ಸಿ ಬಿಹಾರದ ಅಧಿಕೃತ ಫೇಸ್ಬುಕ್ ಪುಟದಲ್ಲೂ ಇದೇ ವಿಡಿಯೋ ಹಂಚಿಕೊಂಡಿದೆ. ಜುಲೈ 20, 2020 ರಂದು ಅದೇ ವೀಡಿಯೊವನ್ನು ಆಜ್ ತಕ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಇಂಡಿಯಾ ಟುಡೆ ವರದಿಯ ಪ್ರಕಾರ, ವಿಡಿಯೋ ವೈರಲ್ ಆದ ನಂತರ, ಡಿಯೋರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕಿಶೋರ್ ಆಸ್ಪತ್ರೆಗೆ ಭೇಟಿ ನೀಡಿ, ವಿಡಿಯೋ ಡಿಯೋರಿಯಾ ಜಿಲ್ಲಾ ಆಸ್ಪತ್ರೆಯಿಂದ ಬಂದಿದೆ ಎಂದು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಕುಟುಂಬಕ್ಕೆ ಸಹಾಯ ನಿರಾಕರಿಸಿದ ವಾರ್ಡ್ ಹುಡುಗನನ್ನು ವಾರ್ಡ್ನಿಂದ ತೆಗೆದುಹಾಕಲಾಗಿದೆ ಎಂದೂ ಅವರು ಹೇಳಿದರು. ಈ ಬಗ್ಗೆ ತನಿಖೆಗೆ ಜಿಲ್ಲಾಧಿಕಾರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡಿಯೋರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವಿಡಿಯೋ ಇಲ್ಲಿದೆ –
https://t.co/daKq5GZi6n https://t.co/dserIYGgQM
— DM Deoria (@dmdeoria) July 20, 2020
देवरिया, जहां से उ.प्र. राज्य सरकार में दो मंत्री आते है, वहां के जिला अस्पताल की ये हालत है कि पर्याप्त कर्मचारी नहीं है लोगों को स्ट्रेचर पर ले जाने के लिए। वार्ड भी अलग अलग नहीं बने हैं,जैसे कि ये महामारी इस अस्पताल के लिए मात्र एक साधारण फ्लू हो। ऐसे लड़ेंगे हम कोरोना से? pic.twitter.com/9CtymqFbWN
— Keshav Chand Yadav (@keshavyadaviyc) July 20, 2020
ಹೀಗಾಗಿ ಆರು ವರ್ಷದ ಬಾಲಕ ತನ್ನ ತಾಯಿಯೊಂದಿಗೆ ಸ್ಟ್ರೆಚರ್ ಅನ್ನು ತಳ್ಳುವ ವೀಡಿಯೊ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲಾ ಆಸ್ಪತ್ರೆಯಿಂದ ಬಂದಿದೆ ಬಿಹಾರದಿಂದಲ್ಲ ಎಂಬುದು ಸ್ಪಷ್ಟವಾಗಿದೆ.

