ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಕ್ಕೆ lock down ಮಧ್ಯೆಯೂ ಶತಕೋಟಿ ಆದಾಯ…

ದೇಶದ ಶ್ರೀಮಂತ ದೇವಸ್ಥಾನಗಳಪಟ್ಟಿಯಲ್ಲಿ ತೊರುವನಂತಪುರದ ಪದ್ಮನಧಭ, ತಿರುಪತಿಯ ತಿಮ್ಮಪ್ಪ, ಮತ್ತು ಶಿರಡಿಯ ಸಾಯುಬಾಬಾ ದೇವಸ್ಥಾನಗಳು ಬಂದರೆ ರಾಜ್ಯದಲ್ಲಿ  ಶ್ರೀಮಂತ ದೇಗುಲ ಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸಲ್ಲುತ್ತದೆ.. ಕರೋನಾ ವೈರಸ್ ಮತ್ತು lock down ಮಧ್ಯೆಯೂ ಕುಕ್ಕೆ ದೇವಸ್ಥಾನಕ್ಕೆ ಶತಕೋಟಿ ಆದಾಯ ಗಳಿಸುವಲ್ಲಿ ಯಶಸ್ವುಯಾಗಿದೆ..

ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನವೂ ಆಗಿದೆ. ಕುಕ್ಕೆ ದೇಗುಲ ಮಾರ್ಚ್‌ 31ಕ್ಕೆ ಕೊನೆಗೊಂಡ ವಿತ್ತೀಯ ವರ್ಷದಲ್ಲಿ ಶತಕೋಟಿ ರೂ ಸಮೀಪ ಆದಾಯ ಗಳಿಸಿದೆ. 2019-20ರ ಸಾಲಿನ ವಿತ್ತೀಯ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲವು 98.92 ಕಟಿ ರೂ ಆದಾಯ ಗಳಿಸುವ ಮೂಲಕ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.

ದೇಗುಲಗಳ ಬೀಡಾಗಿರುವ ದಕ್ಷಿಣ ಕನ್ನಡದ ಈ ಸುಪ್ರಸಿದ್ಧ ದೇವಾಲಯವು ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ. ಮಾರ್ಚ್‌ 20ರಿಂದ ಲಾಕ್‌ಡೌನ್ ಜಾರಿಗೆ ಬಮದು ದೇಗುಲದ ಬಾಗಿಲು ಮುಚ್ಚದೇ ಹೋಗಿದ್ದರೇ ದೇಗುಲದ ಗಳಿಕೆ ಶತಕೋಟಿ ಮೀರುತ್ತಿತ್ತು ಎನ್ನಲಾಗಿದೆ.

ಸರ್ಪ ಸಂಸ್ಕಾರ, ಸರ್ಪದೋಷ ನಿವಾರಣೆ ಸೇರಿದಂತೆ ವಿವಿಧ ಸೇವೆಗಳಿಮದಲೇ ಕುಕ್ಕೆ ದೇವಾಲಯಕ್ಕೆ 42.5 ಕೋಟಿ ರೂ ಆದಾಯ ಸಂದಾಯವಾಗಿದೆ. ಇನ್ನು ಭಕ್ತರು ಹುಂಡಿಗೆ ಹಾಕಿದ ಕಾಣಿಕೆ ಸ್ವರೂಪದ ಹಣ 18 ಕೋಟಿ ಇದ್ದರೇ ವಿರಕು ಠೇವಣಿಗಳಿಂದ ದೇವಾಲಯಕ್ಕೆ 22 ಕೋಟಿ ರೂ ಆದಾಯ ಆಕರವಾಗಿದೆ.

ಸಾಮಾನ್ಯವಾಗಿ ಮಾರ್ಚ್ ಮತ್ತು ಮೇ ತಿಂಗಳ ಅವಧಿಯಲ್ಲಿ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ತೀರಾ ಹೆಚ್ಚಿರುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಕಾರಣ ಈ ಅವಧಿಯಲ್ಲಿ ಭಕ್ತರ ಸಂಖ್ಯೆ ಸೊನ್ನೆಯಾಗಿದ್ದು ದೇಗುಲದ ಬಾಗಿಲು ತೆರೆಯಲು ಆಡಳಿತ ಮಂಡಳಿಯು ಸರಕಾರದ ಆದೇಶಕ್ಕಾಗಿ ಕಾಯುವಂತಾಗಿದೆ.

ಕೇಂದ್ರ ಸರಕಾರ ದೊಡ್ಡ ಮನಸ್ಸು ಮಾಡಿದರೇ ಜೂನ್ ಒಂದರಿಂದ ದೇಗುಲಗಳ ಬೀಗ ತೆರೆಯುವ ನಿರೀಕ್ಷೆ ಇದೆ. ರಾಜ್ಯ ಸರಕಾರ ಸಹ ದೇವಸ್ಥಾನಗಳ ಬೀಗ ತೆರವಿಗೆ ಕೇಂದ್ರಕ್ಕೆ ಮೊರೆ ಇಟ್ಟಿದೆ. ಜೊತೆಗೆ ಮಡೆಸ್ನಾನ ಎಂಬ ಮೂಡನಂಬಿಕೆಯು ಇಲ್ಲಿ ಆಚರಣೆಯಲ್ಲಿದೆ… ಸಿದ್ದರಾಮಯ್ಯ ಮುಖ್ಯಮಂತ್ತಿಯಾಗಿದ್ದಾಗ ಈ ಮೂಡನಂಬಿಕೆಯನ್ನು ನಿಷೇದಿಸಲು ಪ್ರಯತ್ನಿಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights