ಲಾಕ್​ಡೌನ್ ಬಳಿಕ ಮುಂದಿನ ನಿರ್ಧಾರ ಏನು? : ಸಿಎಂಗಳ ಜೊತೆ ಮೋದಿ ಚರ್ಚೆ

ಇನ್ನೇನು ಕೆಲವೇ ದಿನಗಳ ಬಳಿಕ ಲಾಕ್ ಡೌನ್ ಅವಧಿ ಮುಕ್ತಾಯಗೊಳ್ಳುತ್ತದೆ. ಆದರೆ ಕೆಲ ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಈ ಬಗ್ಗೆ ಚರ್ಚೆ ಮಾಡಲು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಚರ್ಚೆ ನಡೆಸಿದರು.

ಇಂದಿನ ಸಭೆಯಲ್ಲಿ ಒಂಭತ್ತು ರಾಜ್ಯಗಳಿಗೆ ಮಾತ್ರ ಪ್ರಧಾನಮಂತ್ರಿ ಜೊತೆಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಮೇಘಾಲಯ, ಮಿಜೋರಾಂ, ಪುದುಚೇರಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಬಿಹಾರ, ಗುಜರಾತ್, ಹರಿಯಾಣ ಮುಖ್ಯಮಂತ್ರಿಗಳು ಸಭೆಯಲ್ಲಿ ಮಾತನಾಡಿದರು ಬಾಕಿ ಎಲ್ಲ ರಾಜ್ಯಗಳ ಸಿಎಂ ಗಳು ಪತ್ರ ಮೂಲಕ ತಮ್ಮ ವರದಿ ಮತ್ತು ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದರು.

ಸಭೆಯಲ್ಲಿ ಬಹುತೇಕ ಮುಖ್ಯಮಂತ್ರಿಗಳು ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್​ಡೌನ್ ಮುಂದುವರೆಸುವುದೇ ಸೂಕ್ತ ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಕೂಡ ಲಾಕ್​ಡೌನ್ ಮುಂದುವರೆಸುವ ಬಗ್ಗೆ ಸುಳಿವು ನೀಡಿದ್ದಾರೆ. ಮೇ 3ರ ಬಳಿಕ ಮತ್ತೆ 2 ವಾರ ಲಾಕ್​ಡೌನ್ ವಿಸ್ತರಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

ಮೇಘಾಲಯ ಮತ್ತು ಹಿಮಾಚಲಪ್ರದೇಶ ಮಾತ್ರ ಲಾಕ್​ಡೌನ್ ಮುಂದುವರಿಸುವ ಬಗ್ಗೆ ಒಲವು ತೋರಿವೆ. ಮಿಕ್ಕ 7 ರಾಜ್ಯಗಳ ಸಿಎಂಗಳು ಮೇ 3ರ ಬಳಿಕ ಲಾಕ್​ಡೌನ್ ಮುಂದುವರಿಸುವುದು ಬೇಡ ಅಂತ ಹೇಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೋದಿ ಅದ್ಯಾವ ನಿರ್ಧಾರ ತೆಗೆದುಕೊಳ್ತಾರೆ..? ಅನ್ನೋದು ಕುತೂಹಲಕಾರಿಯಾಗಿದೆ. ಇನ್ನುಳಿದ ರಾಜ್ಯಗಳ ಅಭಿಪ್ರಾಯ ಕೇಳುವ ಮೂಲಕ ಮೋದಿ  ಲಾಕ್ ಡೌನ್ ಮುಂದುವರೆಸಬೇಕಾ..? ಬೇಡ್ವಾ..? ಅನ್ನೋ ವಿಚಾರ ದೇಶದ ಜನತೆಗೆ ತಿಳಿಸುವ ನಿರೀಕ್ಷೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights