ಲೈಟ್… ಡಾರ್ಕ್… ಡೆವಿಲ್… : 9 ಗಂಟೆ 9 ನಿಮಿಷ ಏನಿದು ಮೋದಿಯ ಸಪ್ತಾಸ್ತ್ರ ರಹಸ್ಯ?

ಏಪ್ರಿಲ್ 3 ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 5 ಭಾನುವಾರ ರಾತ್ರಿ 9ಗಂಟೆಗೆ 9 ನಿಮಿಷ ಮನೆಯ ಲೈಟ್ ಆಫ್ ಮಾಡಿ ಮೇಣದಬತ್ತಿ/ದೀಪ/ಮೊಬೈಲ್ ಟಾರ್ಚ್ ಇಲ್ಲವೇ ಟಾರ್ಚ್ ಹಚ್ಚಬೇಕು ಎಂದು ದೇಶದ 130 ಕೋಟಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆದರೆ ಏಪ್ರಿಲ್ 5 ರ ರಾತ್ರಿ 9 ಗಂಟೆಗೆ 9 ನಿಮಿಷವೇ ಯಾಕೆ ದೀಪ ಹಚ್ಚಬೇಕು ಅನ್ನೋದರ ಅರ್ಥ ಮಾತ್ರ ಯಾರಿಗೂ ಕೂಡ ಆಗಿಲ್ಲ. ಏನಿರಬಹುದು ಇದರ ರಹಸ್ಯ ಅನ್ನೋದೇ ಇಂದಿಗೂ ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಮೋದಿ ಅವರು ಕೊರೊನಾ ವಿರುದ್ಧ ಸಪ್ತಾಸ್ತ್ರ ಯುದ್ಧ ಸಾರಿದ್ದಾರೆ ಎನ್ನಲಾಗುತ್ತಿದೆ.

ಹೌದು… ಮಹಾಮಾರಿ ಕೊರೊನಾ ವಿರುದ್ಧ ಎಲ್ಲಾ ದೇಶಗಳು ಹೋರಾಡುತ್ತಿವೆ. ದಿನದಿಂದ ದಿನಕ್ಕೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮನುಷ್ಯನ ದೇಹ ಹೊಕ್ಕು ರುದ್ರ ನರ್ತನವಾಡುತ್ತಿದೆ. ಸದ್ಯ ಗಾಳಿಯಷ್ಟೇ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ವಿರುದ್ಧ ಪ್ರಧಾನಿ ಸಪ್ರಾಸ್ತ್ರ ಪ್ಲಾನ್ ಮಾಡಿದ್ದಾರೆ. ಕೊರೊನಾ ಮಟ್ಟಾಹಾಕೋಕೆ ಸಪ್ತಾಸ್ತ್ರ ಪ್ರಯೋಗ ಮಾಡಲು ನಿರ್ಧರಿಸಿದ್ದಾರೆ.

ಹಾಗಾದ್ರೆ ಆ ಸಪ್ತಾಸ್ತ್ರ ಯಾವುದು..? ಇದರಿಂದಾಗುವ ಪ್ರಯೋಜನವೇನು..? ಅದಕ್ಕುತ್ತರ ಇಲ್ಲಿದೆ ನೋಡಿ.

ಸಿಕ್ಕ ಸಿಕ್ಕ ಜನರ ದೇಹ ಹೊಕ್ಕಿ ಸರ್ವನಾಶ ಮಾಡುವ ಕೊರೊನಾ ಸೋಂಕಿನ ವಿರುದ್ಧ ವಿಶ್ವವೇ ಹೋರಾಡುತ್ತಿದೆ. ಇದರಲ್ಲಿ ಭಾರತ ಕೂಡ ಒಂದು. ಕೊರೊನಾ ತಡೆಗೆ ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನ ಕೈಗೊಳ್ಳುತ್ತಲೇ ಇದೆ. ಸದ್ಯ ಕೊರೊನಾ ವಿರುದ್ಧ ಹೋರಾಡಲು ಮೋದಿ ಬಿತ್ತಳಿಕೆಯಲ್ಲಿರುವ ಸಪ್ತಾಸ್ತ್ರ ಬಳಕೆಗೆ ದಿನ, ಸಮಯ ಫಿಕ್ಸ್ ಮಾಡಿದ್ದಾರೆ. ಏ.5 ರಾತ್ರಿ 9 ಗಂಟೆ 9 ನಿಮಿಷ ಕೊರೊನಾ ಯುದ್ಧ ನಡೆಯುತ್ತದೆ. ಆ ಯುದ್ಧವೇ ಬೆಳಕಿನ ಯುದ್ಧ. ಈ ಬೆಳಕಿನ ಯುದ್ಧದಲ್ಲಿ ದೇಶದ ಜನ ಪಾಲ್ಗೊಳ್ಳಬೇಕು.

ಹಾಗಾದ್ರೆ ಮೋದಿ ಬೆಳಕಿನ ಸಂದೇಶದ ಸಿಕ್ರೇಟ್ ಏನು…? ದೇಶದ ಜನತೆಗೆ ಏಪ್ರಿಲ್ 5 ರಾತ್ರಿ 9 ಗಂಟೆಗೆ 9 ನಿಮಿಷದ ಜನರ ಅಮೂಲ್ಯ ಸಮಯ ನನಗೆ ಬೇಕು ಎಂದು ಮೋದಿ ಮನವಿ ಮಾಡಿದ್ದಾರೆ. ಆ ಮೂಲಕ ಮಹಾಮಾರಿ ಕೊರೊನಾ ವಿರುದ್ಧ ಬೆಳಕಿನ ಯುದ್ಧ ಸಾರಲು ಮೋದಿ ಮುಂದಾಗಿದ್ದಾರೆ.

ಅಷ್ಟಕ್ಕೂ ಮೋದಿ  ಹೇಳಿದ್ದೇನು..? ಏಪ್ರಿಲ್ 5 ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ದೀಪ ಆರಿಸಿ ಮೇಣದಬತ್ತಿ/ದೀಪ/ಮೊಬೈಲ್ ಟಾರ್ಚ್/ಟಾರ್ಚ್ ಹಚ್ಚಬೇಕು. ಇದರಿಂದ ಮನಸ್ಸು ಜಾಗೃತವಾಗುತ್ತದೆ. ಕೊರೊನಾ ವಿರುದ್ಧ ಹೋರಾಡಲು ಶಕ್ತಿ ತುಂಬುತ್ತೆ ಎಂದಿದ್ದಾರೆ. ಕೊರೊನಾ ವಿರುದ್ಧ ಹೋರಾಡಬೇಕು ಎಂದರೆ ದೇಶದ 130 ಕೋಟಿ ಜನರು ಈ ಸಮಯವನ್ನು ಮೀಸಲಿಡಬೇಕು. ಈ ವೇಳೆ ಸಾಮಾಜಿಕ ಅಂತರ ಮುಖ್ಯ ಯಾವುದೇ ಗುಂಪು ಸೇರದೇ. ನಿಮ್ಮ ಮನೆ ಬಾಗಿಲ ಕಿಟಕಿಗಳ ಮುಂದೆ ಬಂದು ದೀಪ ಹಚ್ಚಿ ಎಂದಿದ್ದಾರೆ.

ಅಷ್ಟಕ್ಕೂ ಕೇವಲ 9 ನಿಮಿಷ ದೀಪ ಬೆಳಗಿದರೆ ಕೊರೊನಾ ತಡೆಗಟ್ಟಲು ಸಾಧ್ಯವಾಗುತ್ತಾ..? ಈ ಪ್ಲಾನ್ ಮೋದಿ ಗೆ ಬಂದಿದ್ದು ಹೇಗೆ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಇಟಲಿಯಲ್ಲೂ ಇದೇ ರೀತಿ ಮಾಡಲಾಗಿತ್ತು. ಆ ಮೂಲಕ ದೇಶದ ಜನ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ಅವತ್ತು ಇಟಲಿ ಜನ ಪ್ರದರ್ಶಸಿದ್ದ ಒಗ್ಗಟ್ಟಿನ ಮಂತ್ರವನ್ನು ಮೋದಿಯವರೂ ಕೂಡ ನೋಡಲು ಬಯಸಿದ್ದಾರೆ.

“ದೀಪಂ ಸರ್ವವಂ ನಮೋಸ್ತುತೆ…” ದೀಪ ಹಚ್ಚೋದ್ರಿಂದ ಕತ್ತಲೆ ಕಳೆದು ಬೆಳಕು ಮೂಡುತ್ತದೆ. ಕತ್ತಲು ನಾಶವಾಗುತ್ತದೆ. ದೀಪ ಹಚ್ಚೋದ್ರಿಂದ ನಾವೆಲ್ಲಾರು ಒಗ್ಗಟ್ಟು ಪ್ರದರ್ಶಿಸಬೇಕು. ಆಗ ಮಾತ್ರ ಕೊರೊನಾ ಕಂಟ್ರೋಲ್ ಗೆ ತರಬಹುದು ಎನ್ನುವುದು ಸಾಕಷ್ಟು ಜನರ ಅಭಿಪ್ರಾಯ.

ಅಷ್ಟಕ್ಕೂ ಮೋದಿಯ ಬತ್ತಳಿಕೆಯಲ್ಲಿರುವ ಸಪ್ತಾಸ್ತ್ರಗಳ ಎಷ್ಟು ಪವರ್ ಫುಲ್? ಏನಿವು..?

ಕೊರೊನಾಗೆ ವಿಶ್ವವೇ ನಡುಗಿ ಹೋಗಿದೆ. ಸೋಂಕು ಹರಡು ಆತಂಕ, ಭಯ ಜನರಲ್ಲಿ ಮನೆ ಮಾಡಿದೆ. ಭಾರತದಲ್ಲೂ ಇದೇ ಭಯ ಕಾಡುತ್ತಿದೆ. ಕೊರೊನಾ ವೈರಸ್ ದಿನದಿಂದ ದಿನಕ್ಕೆ ಕಾಡು ಗಿಚ್ಚಿನಂತೆ ಹರಡುತ್ತಿದೆ. ಹೀಗಾಗಿ ಮೋದಿ ಬೆಳಕಿನ ಅಸ್ತ್ರ ಬಳಕೆ ಮಾಡಿದ್ದಾರೆ. ಏನಿವು ಸಪ್ತಾಸ್ತ್ರಗಳು ಅನ್ನೋದನ್ನ ನೋಡೋದಾದ್ರೆ.

1.ಒಗ್ಗಟ್ಟಿನ ರಣವ್ಯೂಹ- ಒಗ್ಗಟ್ಟು ಸಹಕಾರ ಇಲ್ಲಿ ಮಹತ್ವದಾಗಿದ್ದು ಸದ್ಯಕ್ಕೆ ಕೊರೊನಾ 2ನೇ ಹಂತದಲ್ಲಿದ್ದು ಇದು 3ನೇ ಹಂತದಲ್ಲಿ ಹೋಗದಂತೆ ಜನ ನೋಡಿಕೊಳ್ಳಬೇಕು. ಆ ಮೂಲಕ ಹೆಮ್ಮಾರಿಯನ್ನು ಕಂಟ್ರೋಲ್ ಮಾಡಬೇಕು. ದೀಪ ಬೆಳಗಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಬೇಕು. ಕೊರೊನಾ ಸೋಂಕು 3ನೇ ಹಂತಕ್ಕೆ ಹರಡದಂತೆ ನೋಡಿಕೊಳ್ಳುವುದು ಒಬ್ಬಿಬ್ಬರ ಜವಬ್ದಾರಿ ಅಲ್ಲ. ಸಮಸ್ತ ದೇಶದ 130 ಕೋಟಿ ಜನರ ಕರ್ತವ್ಯ. ಹೀಗಾಗಿ ನಾವೆಲ್ಲರೂ ಸುಖಾ ಸುಮ್ಮನೇ ಮನೆ ಬಿಟ್ಟು ಹೊರಹೋಗದೇ, ಸರ್ಕಾರದ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಕೊರೊನಾ ಸೋಂಕು 3ನೇ ಹಂತ ತಲುಪದಂತೆ ನೋಡಿಕೊಳ್ಳುತ್ತೇವೆಂದು ಒಗ್ಗಟ್ಟು ಪ್ರದರ್ಶಿಸುವುದೇ ಒಗ್ಗಟ್ಟಿನ ರಣವ್ಯೂಹ.

2.ಏಕಾಂಗಿ ಭಾವನೆ ದೂರವಾಗಬೇಕು – ಲಾಕ್ ಡೌನ್ ನಿಂದ ಎಲ್ಲರಲ್ಲೂ ಏಕಾಂಗಿತನ ಕಾಡುತ್ತಿದೆ. ಮನೆಯಲ್ಲಿ ಇರುವವರು ತಾವು ಏಕಾಂಗಿಯಾಗಿ ಇದ್ದೇವೆ, ಏಕಾಂಗಿಯಾಗಿಬಿಟ್ಟಿದ್ದೇವೆ ಎನ್ನುವ ಭಾವನೆ ಎಲ್ಲರಲ್ಲೂ ಮೂಡಿದೆ. ಈ ಭಾವನೆ ಹೋಗಲಾಡಿಸಲು ಎಲ್ಲರೂ ಪರಸ್ಪರ ಜೊತೆಗಿದ್ದೇವೆ ಎನ್ನುವ ಭಾವನೆ ಮೂಡಿಸಲು ಒಟ್ಟಿದೆ ದೀಪ ಬೆಳಗಿಸಬೇಕು.

3.ಆತ್ಮ ವಿಶ್ವಾಸ ವೃದ್ಧಿ – ಮನೆಯೆ ನಾಲ್ಕು ದಿಕ್ಕಿನಲ್ಲಿ ದೀಪ ಹಚ್ಚಬೇಕು ಎನ್ನುವುದರ ಉದ್ದೇಶ ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೊರೊನಾ ವಿರುದ್ಧ ಹೋರಾಡಲು ನಮ್ಮೊಂದಿಗೆ ಎಲ್ಲರೂ ಇದ್ದಾರೆ ಎನ್ನುವ ಆತ್ಮಸ್ಥೈರ್ಯವನ್ನು ತುಂಬುತ್ತದೆ.

4.ಧೈರ್ಯ ತುಂಬುವುದು – ಕೊರೊನಾ ಬಂದರೆ ನಾವು ಸಾವನ್ನಪ್ಪುತ್ತೇವೆ ಎನ್ನುವ ಭಯ ಎಲ್ಲರಲ್ಲೂ ಕಾಡುತ್ತಿದೆ. ಆದರೆ ಕೊರೊನಾ ವಿರುದ್ಧ ನಾವೆಲ್ಲಾರು ಕೈ ಜೋಡಿಸಿ ಹೋರಾಡಿದರೆ ಸಾವನ್ನ ಗೆಲ್ಲಬಹುದು. ಕೊರೊನಾ ಬಂದವರೆಲ್ಲರೂ ಸಾವನ್ನಪ್ಪಿಲ್ಲಾ, ಐಸೋಲೇಷನ್ ನಲ್ಲಿರುವವರಿಗೆ, ಹೋ ಕ್ವಾರೈಂಟೈನಲ್ಲಿರುವವರಿಗೆ, ಸೋಂಕಿತರಿಗೆ ಧೈರ್ಯ ತುಂಬಬೇಕು.

5.ಕೊರೊನಾ ವಾರಿಯರ್ಸೆಗೆ ಧನ್ಯವಾದ – ಕೊರೊನಾ ತಡಗೆ ವೈದ್ಯರು, ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನಿಡುತ್ತಿದ್ದಾರೆ. ಜೀವ ಪಣಕ್ಕಿಟ್ಟು ಮಾದ್ಯಮದವರು, ಪೊಲೀಸರು, ವಾಲಡೆಂಟೀಯರ್ಸ್ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಸಾರಲು ದೀಪ ಹಚ್ಚಬೇಕು.

6.ಕತ್ತಲಾಸುರನಿಗೆ ಬೆಳಕಿನ ಚಾಟಿ– ಬೆಳಕಿನಿಂದ ಕತ್ತಲಾಸೂರನನ್ನು ಹೊಡೆದೋಡಿಸುವುದು. ದೀಪ ಹಚ್ಚುವುದರಿಂದ ಕತ್ತಲಿನಿಂದ ಬೆಳಕಿನ ಕಡೆಗೆ ಬರುವುದು. ಕಷ್ಟಗಳು ನಿವಾರಣೆಯಾಗಿ ಒಳ್ಳೆ ದಿನಗಳು ಬರಲಿ ಎಂದು ನಮಿಸುವುದು.

7.ಕತ್ತಲನ್ನು ಹೊಡೆದೋಡಿಸುವುದು– ದೇಶಕ್ಕೆ ಕೊರೊನಾ ಎನ್ನುವ ಕರಿಕಾರ್ಮೋಡ ಆವರಿಸಿದೆ. ಇದನ್ನ ಹೊಡೆದೋಡಿಸಲು ದೇಶದ ಜನತೆ ಒಗ್ಗೂಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ಒಗ್ಗಟ್ಟಿನಿಂದ ಕೊರೊನಾ ವೈರಸ್ ಹೊಡೆದೋಡಿಸಬಹುದು. ಹೀಗೆ ಮೋದಿ ಕೊರೊನಾ ವಿರುದ್ಧ ಯುದ್ಧ ಸಾರುವ ಮೂಲಕ ದೇಶದಲ್ಲಿ ನವ ಚೈತನ್ಯ ಮೂಡಿಸಿದ್ದಾರೆ.

ಆದರೆ 9 ನಿಮಿಷ ಮಾತ್ರ ದೀಪ ಉರಿಸಲು ಹೇಳಿದ್ದು ಯಾಕೆ? ಆ ವಿಚಾರವನ್ನು ನೋಡೋಣ.

ಮೋದಿ ಸೂಚಿಸಿದ ಬೆಳಗಿನ ಸಮದೇಶದಲ್ಲಿ ಲಾಕ್ ಡೌನ್ ಲೆಕ್ಕಚಾರ ಅಡಗಿದೆ. ದೆಶದಲ್ಲಿ 21 ದಿನ ಲಾಕ್ ಡೌನ್ ಜಾರಿ ಮಾಡಲಾಗಿದೆ. ಏಪ್ರಿಲ್ 5 ರಿಂದ ಏಪ್ರಿಲ್ 14ಕ್ಕೆ ಸರಿಯಾಗಿ 9 ದಿನಗಳಿವೆ. ನವರಾತ್ರಿ ಹಬ್ಬವನ್ನೂ 9 ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ದುರ್ಗಾಮಾತೆಯನ್ನು ಮನದಲ್ಲಿ ನೆನೆದು ಶತ್ರು ಸಂಹರಿಸಿ ಒಳ್ಳೆ ದಿನಗಳನ್ನು ಸ್ವಾಗತಿಸುವುದಾಗಿದೆ.

ಹೀಗೆ ಮೋದಿ ಕೊರೊನಾ ವಿರುದ್ಧ ಯುದ್ಧ ಸಾರಿದ್ಧು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಸಾರ್ವಜನಿಕರ ಅಮೂಲ್ಯವಾದ 9 ನಿಮಿಷಗಳ ಕಾಲಾವಕಾಶ ಕೇಳಿದ್ದಾರೆ. ಕೊರೊನಾ ವಿರುದ್ಧ ಸಾರುತ್ತಿರುವ ಮೋದಿ ಅವರು ಏನೇ ಹೇಳಿದರೂ ಜನ ಮುಕ್ತ ಮನಸ್ಸಿನಿಂದ ಪಾಲಿಸುತ್ತಾರೆ. ಆದರೆ ಯಾರು ಏನೇ ಹೇಳಲಿ ಎಲ್ಲರ ಹಿತದೃಷ್ಟಿಯನ್ನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಇದಕ್ಕೆ ನಾವುಗಳು ಸೋಂಕು ಹರಡದಂತೆ ಜಾಗೃತಿ ವಹಿಸಬೇಕು. ನಮ್ಮನ್ನೂ ಕೊರೊನಾ ದಿಂದ ಕಾಪಾಡಿಕೊಳ್ಳಬೇಕು. ಇದರ ಅರಿವೂ ಪ್ರತಿಯೊಬ್ಬರಿಗೂ ಇದ್ದರೆ ಕೊರೊನಾದಂತಹ ಮಹಾಮಾರಿಯನ್ನು ಹೊಡೆದೋಡಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights