ವಲಸೆ ಸಚಿವರ 100 ದಿನ : BSY ಸರಕಾರದಲ್ಲಿ ಅನರ್ಹ ಸಚಿವರೇ ಹೆಚ್ಚು ಸಕ್ರಿಯ….

ಒಂದಡೇ ಕರೋನಾ ಸಂಕಟ, ಇನ್ನೊಂದಡೆ ಲಾಕ್ ಡೌನ್ ನಿಂದ ಅಪಾರ ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರ ಮತ್ತು ಬಡವರಗೆ ಸೌಲಬ್ಯ ಒದಗಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಹರ ಸಶಹಸ ಪಡುತ್ತಿದೆ. ಹೈಕಮಾಂಡನ ಅಸಹಕಾರ, ಕಾಬಿನೆಟ್ ನಲ್ಲಿನ ಮೂಲತ ಬಿಜೆಪಿ ಸಚಿವರ ನಿರುತ್ಸಾಹದ ಮಧ್ಯಯೂ ಬಿಎಸ್ ವೈ ಸರಕಾರ ತಕ್ಕಮಟ್ಟಿನ ಕೆಲಸ ಮಾಡಿದೆ ಆಂದ್ರೆ ಅದಕ್ಕೆ ಸತ: CM BSY ಮತ್ತು ಕೆಲ ಬೆರಳೆಣಿಕೆಯ ಸಚಿವರು ಕಾರಣ ಅಂದ್ರೆ ತಪ್ಪಾಗಲಾರದು..

ಕೊರೋನಾ ಕಾಲದಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಹೆಚ್ಚು ಸಕ್ರಿಯರಾಗಿರುವುದೆಂದರೆ ಅದು ಸರಕಾರದ ಅಸ್ತಿತ್ವಕ್ಕೆ ಕಾರಣರಾದ ವಲಸೆ ಸಚಿವರು, ಅನರ್ಹತೆಯೊಂದ ಅರ್ಹತೆ ಪಡೆದು ಕಾದು ಕಾದು ಸುಸ್ತಾಗಿ ಮಂತ್ರಿಪದವಿ ಗಿಟ್ಟಿಸಿರುವ ವಲಸೆ ಸಚಿವರು ಕಾರ್ಯವೈಕರಿ ಮೆಚ್ಚುಗೆಗೆ ಪಾತ್ರವಾಗದಿದ್ದರು, ಕಟುಟಿಕೆಗೆ ಒಳಗಾಗಿಲ್ಲ ಎನ್ನುವುದನ್ನು ಮರೆಯುವಹಾಗಿಲ್ಲ..

ಇದ್ದ ಪಕ್ಷಗಳನ್ನು ತೊರೆದು ಚುನಾವಣೆ ಗೆದ್ದು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾದವರು ಈಗ ಅಧಿಕಾರದಲ್ಲಿ ನೂರು ದಿನ ಪೂರೈಸಿದ್ದು ಅವರ ಕಾರ್‍ಯವೈಖರಿ ಚರ್ಚೆಗೆ ಬಂದಿದೆ.

ಕಳೆದ ಫೆಬ್ರುವರಿಯಲ್ಲಿ ಸಚಿವರಾದ ಇತರ ಪಕ್ಷಗಳಿಂದ ಬಂದವರು ಇನ್ನೂ ಕುರ್ಚಿಗೆ ಒಗ್ಗಿಕೊಳ್ಳುವ ಮುನ್ನವೇ ಕೊರೋನಾ ಲಾಕ್‌ಡೌನ್ ಎದಿರಾಗಿತ್ತು.

ಪ್ರಮುಖ ಖಾತೆಗಳೆಲ್ಲವೂ ಇವರ ಕೈಗಳಲ್ಲಿಯೇ ಇದ್ದುದರಿಂದ ಸಹಜವಾಗಿಯೇ ಪಕ್ಷ ಇವರ ಕಾರ್‍ಯ ವಯಖರಿ ಮೇಲೆ ಕಣ್ಣಿಟ್ಟಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಇವರೆಲ್ಲರ ಕಾರ್‍ಯ ವಿಧಾನದ ಬಗ್ಗೆ ಖುದ್ದು ಸಿಎಂ ಯಡಿಯೂರಪ್ಪನವರೇ ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಅದರಲ್ಲಿಯೂ ವೈದ್ಯ ಶಿಕ್ಷಣ ಸಚಿವ ಸುಧಾಕರ್‍, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಕೃಷಿ ಸಚಿವ ಬಿಸಿ ಪಾಟೀಲ್ ಹೆಚ್ಚು ಚುರುಕಾಗಿರುವುದು ಸಿಎಂ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಲಾಗಿದೆ.

ಹಾಗೆ ನೋಡಿದರೇ ಹಿರಿಯ ಸಚಿವರಿಗೆ ಹೋಲಿಸಿದರೆ ಮೊದಲ ಬಾರಿಗೆ ಸಚಿವರಾದರೂ ಬೇರೆ ಪಕ್ಷದಿಂದ ಬಂದವರು ಉತ್ತಮವಾಗಿಯೇ ಕೆಲಸ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಬೇರೆ ಪಕ್ಷಗಳಿಂದ ಬಂದವರ ಪೈಕಿ ರಮೇಶ್ ಜಾರಕಿಹೊಳಿ ಹೊರತಾಗಿ ಉಳಿದವರಿಗೆ ಇದೇ ಮಂತ್ರಿಗಿರಿಯ ಮೊದಲ ಅನುಭವವಾಗಿತ್ತು.

ಈ ಮಧ್ಯೆ ಕೊರೋನಾ ಲಾಕ್‌ಡೌನ್ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದ್ದು ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸುವಂತೆ ಯಡಿಯೂರಪ್ಪ ತಮ್ಮ ಸಂಪುಟ ಸದಸ್ಯರಿಗೆ ತಾಕೀತು ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights