ವಿಂಡೀಸಿಗರನ್ನು ಚಕಿತಗೊಳಿಸಿದ ಬುಮ್ರಾ ಹೊಸ ಅಸ್ತ್ರ…

ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಮಧ್ಯಮ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಬತ್ತಳಿಕೆಗೆ ಹೊಸ ಅಸ್ತ್ರ ಸೇರಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದ ಒಂದು ವರ್ಷದಲ್ಲಿಯೇ ಬುಮ್ರಾ ಕೊಹ್ಲಿ ಪಡೆಯ ಅತಿ ಪ್ರಮುಖ ಹಾಗೂ ಪ್ರಭಾವಶಾಲಿ ದಾಳಿಕಾರ ಎಸಿದ್ದಾರೆ. ಆರಂಭದಲ್ಲಿ ನಿಖರವಾದ ಯಾರ್ಕರ್ ಮತ್ತು ಒಳಬರುವ ಎಸೆತಗಳಿಂದಷ್ಟೇ ಪರಿಣಾಮಕಾರಿಯಾಗಿದ್ದ ಬುಮ್ರಾ ಈಗ ತಮ್ಮ ಬತ್ತಳಿಕೆಗೆ ಮತ್ತೊಂದು ಮಾರಕಾಸ್ತ್ರ ಸೇರಿಸಿದ್ದಾರೆ.

ಹೌದು ತಮ್ಮ ಸಾಂಪ್ರದಾಯಿಕ ಅಸ್ತ್ರಗಳ ಜೊತೆಗೆ ಈಗ ಬುಮ್ರಾ ಈಗ ವಿಕಟ್ ಬಿಟ್ಟು ಹೊರಹೋಗುವ ಔಟ್ ಸ್ವಿಂಗರ್ ಎಸೆತವನ್ನು ಕರಗತ ಮಾಡಿಕೊಂಡಿದ್ದಾರೆ. ಇದು ದಾಂಡಿಗರನ್ನು ಚಕಿತಗೊಳಿಸಿ ಅವರಿಂದ ತಪ್ಪು ಹೊಡೆತ ಬರುವಂತೆ ಪ್ರೇರಿಪಿಸುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ಪ್ರವಾಸದ ವೇಳೆ ಮೊದಲಿಗೆ ಔಟ್ ಸ್ವಿಂಗರ್ ಎಸೆಯಲು ಶುರು ಮಾಡಿದ ಬುಮ್ರಾ ಅದನ್ನು ಪಕ್ವಗೊಳಿಸಿಕೊಳ್ಳಲು ಸಾಖಷ್ಟು ಸಮಯ ತೆಗೆದುಕೊಂಡರು. ಕಡೆಗೆ ಗಯಾನಾದಲ್ಲಿ ವಿಂಡೀಸ್ ತಂಡದ ಎರಡನೇ ಸರದಿಯಲ್ಲಿ ಬುಮ್ರಾ ಅವರ ಹೊಸ ಅಸ್ತ್ರದ ಮಾರಕಾಂಶ ಪರಿಣಾಮಕಾರಿಯಾಗಿ ಪ್ರದರ್ಶನಗೊಂಡಿತು.

ಇನ್ನೂ 25 ವರ್ಷ ವಯಸ್ಸಿನ ಬುಮ್ರಾ ಕಳೆದ 12 ತಿಂಗಳ ವೃತ್ತಿ ಜೀವನದಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ದು 55 ವಿಕೆಟ್ ಕಬಳೀಸಿ ತಂಡದ ಪ್ರಮುಖ ಬೌಲರ್ ಎನಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights