ವಿಶ್ವನಾಥ್ ಗೆದ್ದ ಮರು ದಿನವೇ ಮಂತ್ರಿಯಾಗುತ್ತಾರೆ – ಕಾಂಗ್ರೆಸ್ ಗೆ ಸವಾಲ್ ಹಾಕಿದ ಶ್ರೀರಾಮುಲು

ವಿಶ್ವನಾಥ್ ಗೆದ್ದ ಮರು ದಿನವೇ ಉನ್ನತ ಖಾತೆಯ ಮಂತ್ರಿ ಆಗುತ್ತಾರೆ ಎಂದು ಹುಣಸೂರಿನಲ್ಲಿ ಸಚಿವ ಶ್ರೀರಾಮುಲು ಹೇಳಿದ್ದು ಎಲ್ಲರ ಗಮನ ಸೆಳೆದಿದೆ.

ಮೈತ್ರಿ ಸರಕಾರದಲ್ಲಿ ದುರಾಡಳಿತ, ಭ್ರಷ್ಟಾಚಾರ ಹೆಚ್ಚಾಗಿತ್ತು. ಅದಕ್ಕೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಶಾಸಕರ ರಾಜೀನಾಮೆ ತ್ಯಾಗದಿಂದ ನಮ್ಮ ಸರಕಾರ ಬಂದಿದೆ. ಅದನ್ನು ನಾನೇನೂ ಮುಚ್ಚಿಡಲ್ಲ ವಿಶ್ವನಾಥ್ ತುಳಿಯುವ ಕೆಲಸವನ್ನು ಮಾಜಿ ಸಿದ್ದರಾಮಯ್ಯ ಮಾಡಿಲ್ವಾ? ಸಿದ್ದರಾಮಯ್ಯ ಸಿಎಂ ಆಗಿದ್ದು ವಿಶ್ವನಾಥ್ ಮಾಡಿದ ತ್ಯಾಗದಿಂದ ಅಲ್ವಾ? ಸಿದ್ದರಾಮಯ್ಯ ಪಕ್ಷಾಂತರ ಮಾಡಿಲ್ವಾ? ಯಾವ ನೈತಿಕತೆ ಇಟ್ಟುಕೊಂಡು ಪಕ್ಷಾಂತರದ ಬಗ್ಗೆ ಸಿದ್ದರಾಮಯ್ಯ ಮಾತಾಡುತ್ತಾರೆ. ಮೈತ್ರಿ ಸರಕಾರ ಕೆಡವಲು ಸಿದ್ದರಾಮಯ್ಯ ಕಾರಣ ಎಂದು ಹುಣಸೂರಿನಲ್ಲಿ ಸಚಿವ ಶ್ರೀರಾಮಲು ವಾಗ್ದಾಳಿ ಮಾಡಿದರು.

ಬಾದಾಮಿಯ ಶಾಸಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ನಾನೇ ಅವರ ಎದುರಿಗೆ ಚುನಾವಣೆಗೆ ನಿಲ್ತಿನಿ. ಇದು ಕಾಂಗ್ರೆಸ್ ಗೆ ನಾನು ಹಾಕುತ್ತಿರುವ ಸವಾಲು. ಕಾಂಗ್ರೆಸ್ ಹುಣಸೂರಿನಲ್ಲಿ ಧೂಳೀಪಟವಾಗುತ್ತೆ ಎಂದರು.

ಚುನಾವಣೆ ಎದುರಿಸುತ್ತಿರುವ 15 ಜನರು ಮಂತ್ರಿಗಳಾಗುತ್ತಾರೆ. ಹೆಚ್. ವಿಶ್ವನಾಥ್ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಸುಲಭವಲ್ಲ. ತಮಗೆ ಆದ ಅನ್ಯಾಯಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಹುಣಸೂರು ಜನ ಕೈ ಬಿಡಬಾರದು ಎಂದು ಹುಣಸೂರು ಬಿಜೆಪಿ ಸಮಾವೇಶದಲ್ಲಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights