ಶಬರಿಮಲೆನಲ್ಲಿ ಮಹಿಳೆಯರಿಗೆ ಪ್ರವೇಶ ಅರ್ಜಿ ವರ್ಗಾವಣೆ ವಿಚಾರ – ಪೇಜಾವರ ಶ್ರೀಗಳು ಹೇಳಿದ್ದು ಹೀಗೆ…
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರ, ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಮೇಲ್ಮನವಿ ಅರ್ಜಿ ವರ್ಗಾವಣೆ ಬಗ್ಗೆ ಪೇಜಾವರ ಶ್ರೀಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇದು ಬಹಳ ಸೂಕದಷ್ಮವಾದ ವಿಚಾರ. ಒಂದು ಕಡೆ ಸಾಂಪ್ರದಾಯ ಹಾಗೂ ಮಹಿಳೆಯರ ಹಕ್ಕಿನ ವಿಚಾರ ಇದಾಗಿದೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ, ಏನೇ ಹೇಳಿದ್ರೂ ಅಸಮಾಧಾನಕ್ಕೆ ಕಾರಣವಾಗುತ್ತೆ,ತೀರ್ಪಿನ ಬಗ್ಗೆ ಕಾದು ನೋಡಿ. ವೇಟ್ ಆಂಡ್ ಸಿ ಎಂದು ಶ್ರೀಗಳು ಹೇಳಿದರು.
ಇದೇ ವೇಳೆ ಮಾತನಾಡಿದ ಪೇಜಾವರ ಶ್ರೀಗಳು ರಾಮಮಂದಿರವಷ್ಟೆ ಅಲ್ಲಾ ಎಲ್ಲಾ ಮಂದಿರಗಳು ರಾಷ್ಟ್ರ ಮಂದಿರಗಳು, ಮಂದಿರಗಳಿಗೆ ಎಲ್ಲಾ ಧರ್ಮಿಯರು ಪ್ರವೇಶಿಸಬೇಕು. ಮಂದಿರಗಳು ಒಂದೇ ಧರ್ಮ ಹಾಗು ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಸುಪ್ರೀಂ ಕೋರ್ಟು ನೀಡಿರುವ ತೀರ್ಪು ರಾಷ್ಟ್ರದ ಲ್ಲಿ ಸಾಮರಸ್ಯಕ್ಕೆ ನಾಂದಿಯಾಗಿದೆ. ಮಸೀದಿ ಕಟ್ಟಲು ನೀಡಿರುವ ಜಾಗೆಯ ಬಗ್ಗೆ ಒಂದಿಬ್ಬರು ವಿರೋಧಿಸಿರಬಹುದು. ಕೇಂದ್ರ ಸರಕಾರ ಮೂರು ತಿಂಗಳಳೊಗಾಗಿ ಟ್ರಸ್ಟ್ ಸ್ಥಾಪಿಸಲು ಸೂಚಿಸಿದೆ. ರಾಮಮಂದಿರ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು. ಪೇಜಾವರ ಸ್ವಾಮೀಜಿ ರಾಯಚೂರಿನಲ್ಲಿ ಹೇಳಿದ್ದಾರೆ.

