ಸರ್ಕಾರ ನೀಡಿದ ಈ ಸೈಕಲ್ ಗಳಿಗೆ ಪೆಡಲ್ ಇದ್ದರೆ ಟಾಯರ್ ಇಲ್ಲ, ಟಾಯರ್ ಸರಿ ಇದ್ದರೆ ಪೆಡಲ್‌ಗಳೇ ಇಲ್ಲ…!

ಸರ್ಕಾರ ಹಲವು ಯೋಜನೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೆ ತರುತ್ತಾರೆ, ಆದ್ರೆ ಕೆಲವು ಯೋಜನೆಗಳು ಯಾಕಾದ್ರು ಇವೆ ಅನ್ನೊ ಹಾಗಿವೆ. ಅವುಗಳಲ್ಲಿ ಒಂದಾದ 8 ನೇ ತರಗತಿಯ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ. ಈ ಸೈಕಲ್ ಸ್ಥೀತಿ ನೋಡಿದ್ರೆ ಯಾಕಾದ್ರು ಕೋಡ್ತಾರೆ ಅನ್ನೊ ಹಾಗಿದೆ. ಹೌದು ಈ ಸೈಕಲ್ ಗಳಿಗೆ ಪೆಡಲ್ ಇದ್ದರೆ ಟಾಯರ್ ಇಲ್ಲ. ಟಾಯರ್ ಸರಿ ಇದ್ದರೆ ಪೆಡಲ್‌ಗಳೇ ಇಲ್ಲ. ಇವೆರಡೂ ಸರಿ ಇದ್ದರೆ ಟಾಯರ ಒಳಗಡೆಯ ಒಳ ಟೂಬ್‌ ಗಳೇ ಮಾಯ. ಇನ್ನೂ ಬಸಿಕಲ್‌ ಗಳ ಹೆಂಡಲ್ ಸ್ಥಿತಿಯಂತೂ ಅಷ್ಟಕಷ್ಟೇ. ಹಾಗಾದ್ರೆ ಈ ಸೈಕಲ್ ಎಲ್ಲಿವೆ ಅಂತೀರಾ ಈ ಸ್ಟೋರಿ ಓದಿ….

    

ಹೀಗೆ ಪೆಡಲ್ ಇಲ್ಲದೇ ಇರೊ ಸೈಕಲ್…… ಡೊಂಕಾದ ಬಸಿಕಲ್ ಹೆಂಡಲ್…ವಿದ್ಯಾರ್ಥಿನಿಯರು ಸೈಕಲ್ ಗೆ ಬುಟ್ಟಿನೇ ಇಲ್ಲ…ಹೌದು ಇದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿ ಮುಗದ, ವಿರಾಪೂರ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳ
ಶಾಲೆಗಳ್ಲಿ ಮಕ್ಕಳಿಗೆ ನೀಡಿದ ಸೈಕ್ ಸ್ಥೀತಿ ಇದು. ಸರ್ಕಾರ ಗ್ರಾಮೀಣ ಭಾಗದ 8 ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ವಿತರಣೆ ಮಾಡುತ್ತಿದೆ. ಆದ್ರೆ ನೀಡಿರೊ ಸೈಕಲ್ ಗಳು ಗುಣಮಟ್ಟದಿಂದ ಕೂಡಿಲ್ಲ. ಅಲ್ಲದೇ ಸರಿಯಾಗಿ ಜೋಡಣೆಯನ್ನೂ ಮಾಡದೇ ಹಾಗೇ ಸೈಕಲ್ ಪೂರೈಸಲಾಗಿದೆ. ಸೈಕಲ್ ಗಳಿಗೆ ಪೆಡಲ್ ಇಲ್ಲ, ಇನ್ನೂ ಕೆಲವುಗಳಿಗೆ ಟಾಯರ್ ಇದ್ರೆ ಒಳಗೆ ಟೂಬ್ ಇಲ್ಲ, ಟೂಬ್ ಇದ್ರೆ ವಾಲ್ ಟೂಬ್ ಇಲ್ಲ, ಇನ್ನೂ ಹೆಂಡಲ್ ಅಂತೂ ನೆಟ್ಟಗಿಲ್ಲ, ಇಂತಹ ಬಸಿಕಲ್ ಪಡೆದ ಮಕ್ಕಳು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಆದ್ರೆ ಸೈಕಲ್ ಕಳಪೆ ಬಗ್ಗೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗಿಲ್ಲ.

ಸರ್ಕಾರ ಈಗಾಗಲೇ ಎಲ್ಲ ಶಾಲೆಗಳಿಗೆ ಮಕ್ಕಳಿಗೆ ನೀಡಬೇಕಿದ್ದ ಸೈಕಲ್ ನೀಡಲಾಗಿದೆ. ಇದರಿಂದ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಬಸಿಕಲ್ ವಿತರಣೆ ಮಾಡಲಾಗುತ್ತಿದೆ. ಈ ವೇಳೆ ಸೈಕಲ್ ನೋಡಿದ ಮಕ್ಕಳು ಹಾಗೂ ಪಾಲಕರು ಕಳಪೆ ಗುಣಮಟ್ಟ ದಿಂದ ಕೂಡಿವೆ ಎಂದು ಆರೋಪ ಮಾಡುತ್ತಿದ್ದಂತೆ ವಿರಾಪೂರ ಶಾಲೆಯಲ್ಲಿ ಸೈಕಲ್ ವಿತರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಕಳಪೆ ಗುಣಮಟ್ಟದ ಸೈಕಲ್ ವಾಪಸ್ ಮಾಡುವಂತೆ ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪೂರೈಕೆ ಆಗಿರುವ ಬಹುತೇಕ ಬಸಿಕಲ್‌ಗಳ ದುಸ್ಥಿತಿಯ ಕಥೆಯೂ ಇದರಿಂದ ಹೊರತಾಗಿಲ್ಲ. ಇದಲ್ಲದೇ ಬಳಸಲು ಯೋಗ್ಯವಲ್ಲದ ಬಸಿಕಲ್ ಪಡೆದ ವಿದ್ಯಾರ್ಥಿಗಳು ನಿಯಂತ್ರಣ ತಪ್ಪಿ ಬಸಿಕಲ್‌ ನಿಂದ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ ಎಂದು ಪೋಷಕರು ಹೇಳುತ್ತಾರೆ.

ಜಿಲ್ಲೆಯಲ್ಲಿ 5370 ವಿದ್ಯಾರ್ಥಿನಿಯರು ಹಾಗೂ 5293 ವಿದ್ಯಾರ್ಥಿಗಳಿಗೆ ಸರ್ಕಾರ ದಿಂದ ನೀಡಲಾಗುತ್ತಿರೊ ಉಚಿತ ಬಸಿಕಲ್ ವಿತರಣೆ ಮಾಡಲಾಗಿದೆ. ಆದ್ರೆ ಉಚಿತವಾಗಿ ನೀಡಲಾಗುತ್ತಿರೊ ಬಸಿಕಲ್ ನೋಡಿದ್ರೆ ಹೇಗಪ್ಪ ಸವಾರಿ ಮಾಡೊದು ಎಂಬ ಪ್ರಶ್ನೆ ಮಕ್ಕಳಲ್ಲಿ ಮೂಡುವಂತೆ ಇವೆ ಇಲ್ಲಿನ ಸೈಕಲ್ ಗಳು. ಸಧ್ಯ ನೀಡಿರೊ ಕಳಪೆ ಗುಣಮಟ್ಟದ ಸೈಕಲ್ ವಾಪಸ್ ಪಡೆದು ಉತ್ತಮ ಬಸಿಕಲ್ ನೀಡಲು ಮುಂದಾಗ್ತಾರೆ ಎಂಬುದನ್ನ ಕಾದು ನೋಡಿಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights