ಸಾಕು ಪ್ರಾಣಿಗಳಿಗೂ ಕೊರೊನಾ ಸೋಂಕು ತಗುಲಬಲ್ಲದೇ? ಸಂಶೋಧನೆ

ಚೈನಾದ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಈ ಹೊಸ ಕೊರೊನಾ ವೈರಸ್ ಬೆಕ್ಕುಗಳಿಗೆ ಹರಡುವ ಸಾಧ್ಯತೆ ಇದೆ ಮತ್ತು ಬೆಕ್ಕುಗಳು ಅವುಗಳ ನಡುವೆ ಈ ಸೋಂಕನ್ನು ಹಬ್ಬಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.

ಹರ್ಬಿನ್ ಪಶುವೈದ್ಯ ಸಂಶೋಧನಾ ಸಂಸ್ಥೆಯ ಸಂಶೋಧಕರು ಬೆಕ್ಕುಗಳು ಕೊರೊನ ಸೋಂಕಿಗೆ ಒಳಗಾಗುವ ಸಾಧ್ಯತೆ ಇದು ಎಂದು ತಿಳಿಸಿದ್ದರಲ್ಲದೆ, ನಾಯಿಗಳು, ಕೋಳಿಗಳು ಮತ್ತು ಹಂದಿಗಳು ಈ ರೋಗಕ್ಕೆ ಒಳಗಾಗುವ ಸಾಧ್ಯತೆ ಇಲ್ಲ ಎಂದು ಅಧ್ಯಯನ ತಿಳಿಸುತ್ತದೆ ಎಂದಿದ್ದರು.

ಬೆಕ್ಕುಗಳು ಕೂಡ ಕೊರೊನಾ ಸೋಂಕಿಗೆ ಗುರಿಯಾದರೆ ತಮ್ಮ ಸಂತತಿ ನಡುವೆ ಈ ಸೋಂಕನ್ನು ಹಬ್ಬುವುದಕ್ಕೆ ಅಧ್ಯಯನ ಫಲಿತಾಂಶ ನೀಡಿದೆ ಹೊರತು ಬೆಕ್ಕುಗಳಿಂದ ಮನುಷ್ಯರಿಗೆ ಸೋಂಕು ಹಬ್ಬುವುದರ ಬಗ್ಗೆ ಯಾವುದೇ ನೇರ ಸಾಕ್ಷ್ಯ ದೊರೆತಿಲ್ಲ ಎಂದು ಚೈನಾ ಕೃಷಿ ವಿಜ್ಞಾನಗಳ ಪ್ರಾಧಿಕಾರ ಹೇಳಿತ್ತು.

ಬೆಲ್ಜಿಯಂನಲ್ಲಿ ಇತ್ತೀಚೆಗಷ್ಟೇ ಬೆಕ್ಕೊಂದು ತನ್ನ ಮಾಲೀಕನಿಂದ ಕೊರೊನಾ ಸೋಂಕಿಗೆ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಅಧ್ಯಯನಗಳು ನಡೆಯುತ್ತಿವೆ.

ಈ ಹಿಂದೆ ನಾಯಿಗಳು ಮತ್ತು ಬೆಕ್ಕುಗಳು ಸಾರ್ಸ್ ಸೋಂಕಿಗೆ ಗುರಿಯಾಗುವುದನ್ನು ಗುರುತಿಸಲಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights