ಸಿಹಿ ಸುದ್ದಿ : ನವಜಾತು ಶಿಶುಗಳಿಗೆ ರೊಟಾ ವೈರಸ್ ಲಸಿಗೆ ಉಚಿತವಾಗಿ ಲಭ್ಯ- ಶ್ರೀರಾಮುಲು ಘೋಷಣೆ

ನವಜಾತು ಶಿಶುಗಳಿಗೆ ರೂ. 4500 ಬೆಲೆಯ ರೊಟಾ ವೈರಸ್ ಲಸಿಗೆ ಇನ್ಮುಂದೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯ ಎಂದು ಶ್ರೀರಾಮುಲು ಘೋಷಣೆ ಮಾಡಿದ್ದಾರೆ.

ಮೊದಲು ಆರೋಗ್ಯ ಸಚಿವರಾಗಿದ್ದಾಗ ಆರೋಗ್ಯ ಕವಚ 108 ಆ್ಯಂಬುಲನ್ ಸೌಲಭ್ಯ, ಈಗ ಆರೋಗ್ಯ ಸಚಿವರಾಗಿ ಉಚಿತ ರೋಟೋ ವೈರಸ್ ಲಸಿಕೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿಲು ಮುಂದಾದ ಸಚಿವ ಶ್ರೀರಾಮುಲು.ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಸರಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಆರೋಗ್ಯ ಇಲಾಖೆಯನ್ನು ಮತ್ತಷ್ಟು ಜನಪರವಾಗಿಸಲು ಮುಂದಾಗಿದ್ದಾರೆ.

ವಿಜಯಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸಿದ ಶ್ರೀರಾಮುಲು, ನವಜಾತು ಶಿಶುಗಳಿಗೆ ನೀಡಲಾಗುವ ರೂ. 4500 ಮೊತ್ತದ ಲಸಿಕೆಯನ್ನು ಉಚಿತವಾಗಿ ಒದಗಿಸಲು ಹಾಗೂ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಆರಂಭಿಸಲು ಸೂಚನೆ ನೀಡಿದ್ದಾರೆ.

ಹೌದು.. ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಆರೋಗ್ಯ ಕವಚ ಯೋಜನೆಯಡಿ 108 ಆ್ಯಂಬುಲನ್ಸ್‌ ಸೇವೆ ಆರಂಭಿಸುವ ಮೂಲಕ ಕರ್ನಾಟಕವಷ್ಟೇ ಅಲ್ಲ, ದೇಶಾದ್ಯಂತ ಹೆಸರು ಮಾಡಿದ್ದ ಬಿ. ಶ್ರೀರಾಮುಲು ಈಗ ಮತ್ತೆ ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ಆರೋಗ್ಯ ಇಲಾಖೆಯನ್ನು ಜನರ ಹತ್ತಿರ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

ನಂತರ ವಾರ್ಡಿಗೆ ತೆರಳಿ ನವಜಾತ ಶಿಶುವನ್ನು ಕೈಯಲ್ಲಿ ಎತ್ತಿಕೊಂಡು ಆರೋಗ್ಯ ವಿಚಾರಿಸಿದರು. ನನಗೂ ನಾಲ್ಕು ಜನ ಮಕ್ಕಳಿದ್ದಾರೆ ಎಂದು ಹೇಳಿ ಮಕ್ಕಳ ಆರೋಗ್ಯದ ಸಚಿವರು ಗಮನ ಸೆಳೆದರು.
ಸರಕಾರಿ ಆಸ್ಪತ್ರೆಗಳಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿರುವುದಾಗಿ ತಿಳಿಸಿದ ಅವರು, ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಜೊತೆಗೆ ಬರುವ ಸಂಬಂಧಿಕರಿಗಾಗಿ ವಸತಿ, ಬಿಸಿ ನೀರಿನ ವ್ಯವಸ್ಥೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕ್ಯಾಂಟಿನ್ ಆರಂಭಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ಆರೋಗ್ಯ ಸಚಿವರ ಬಡ ಜನರೆಗೆಡಿಗನ ಈ ನಡೆ ಮುಂಬರುವ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವುದರಲ್ಲಿ ಸಂಶಯವಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights