ಸುಳ್ಳು ಸುದ್ದಿ : ಇದ್ದಕ್ಕಿದ್ದಂತೆ ಒಂದೇ ಊರಿನ 50 ಜನರಿಗೆ ಜ್ವರ ಹಾಗೂ ಕೆಮ್ಮು..!

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ ಇದ್ದಕ್ಕಿದ್ದಂತೆ 50 ಮಂದಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿದೆ ಎನ್ನುವುದು ಸುಳ್ಳು ಸುದ್ದಿ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಜನ ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಧೈರ್ಯ ತುಂಬಿದ್ದಾರೆ,

ಹೌದು…  ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ದೊಡ್ಡಹಾರನಹಳ್ಳಿಯಲ್ಲಿ ನೂರು ಕುಟುಂಬಗಳು ವಾಸವಾಗಿವೆ. ಇದರಲ್ಲಿ ಬಹುತೇಕ ಕುಟುಂಬದ ಸದಸ್ಯರಿಗೆ ಕೆಮ್ಮು ಹಾಗೂ ಜ್ವರ ಕೆಲ ದಿನಗಳ ಮುಂಚೆ ಕಾಣಿಸಿಕೊಂಡಿದೆ. ಆದರೂ ಈ ಗ್ರಾಮದ ಜನ ಆಸ್ಪತ್ರೆಗೆ ಹೋಗಿಲ್ಲ. ಯಾವುದೇ ವೈದ್ಯರ ಸಂಪರ್ಕ ಮಾಡಿಲ್ಲ. ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವುದರಿಂದ ಜನ ಆಸ್ಪತ್ರೆಯತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಆಸ್ಪತ್ರೆ ಹೋದರೆ ಕ್ವಾರಂಟೈನಮ್ ನಲ್ಲಿಡುವ ಭೀತಿಯಿಂದ ಇಲ್ಲಿನ ಜನ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುತ್ತಿಲ್ಲ ಎಂದು ಸುಳ್ಳು ಸುದ್ದಿಯನ್ನು ಹರಿಬಿಡಲಾಗಿದೆ.

ಸಾಲದಕ್ಕೆ ಈ ಗ್ರಾಮಕ್ಕೆ ದುಬೈ, ಮುಂಬೈ ಹಾಗೂ ಬೆಂಗಳೂರಿನಿಂದಲೂ ಜನ ಆಗಮಿಸಿದ್ದಾರೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎನ್ನುವ ಆತಂಕಕಾರಿಯಾದ ವಿಚಾರವನ್ನು ಹರಿಬಿಡಲಾಗಿತ್ತು.

ಜೊತೆಗೆ ಈ ಗ್ರಾಮದ ಅವರಿವರ ಸಹಾಯದಿಂದ ಮಾತ್ರೆ ತರಿಸಿಕೊಂಡು ಜನ ನುಂಗುತ್ತಿದ್ದಾರೆ. ಆದರೂ ಪರಿಸ್ಥಿತಿ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಊರಲ್ಲಿ ಏನಿಲ್ಲಾ ಅಂದ್ರು 50 ಜನರಿಗಾದ್ರು ಜ್ವರ , ಕೆಮ್ಮು ಇದೆ ಎಂದು ಅಂದಾಜಿಸಲಾಗುತ್ತಿದೆ. ಇಷ್ಟಾದರೂ ಆರೋಗ್ಯ ಅಧಿಕಾರಿಗಳು ಈ ಗ್ರಾಮದ ಕಡೆ ತಲೆ ಹಾಕಿಲ್ಲ. ಕೇವಲ ಆಶಾ ಕಾರ್ಯಕರ್ತೆಯರು ಫೋನ್‍ನಲ್ಲಿ ಆರೋಗ್ಯ ವಿಚಾರಣೆ ಮಾಡುತ್ತಿದ್ದಾರೆ. ಪತ್ರಕರ್ತರ ಸಹಾಯದಿಂದ ಜನರು ಮಾತ್ರೆ ತರಿಸಿಕೊಂಡು ತೆಗೆದುಕೊಳ್ಳುತ್ತಿದ್ದಾರೆ ವದಂತಿಗಳು ಕೇಳಿ ಬಂದಿವೆ.

ಇಂಥ ವದಂತಿಗಳಿಗೆ ತೆರೆ ಎಳೆದ ಆರೋಗ್ಯ ಇಲಾಖೆ ಸಿಬ್ಬಂದಿಗಳು. ಇದು ಸುಳ್ಳು ಸುದ್ದಿ. ನಾವು ಗ್ರಾಮಕ್ಕೆ ಭೆಟಿ ನೀಡಿ ಪರಿಶೀಲಿಸಿದ್ದೇವೆ ಆದರೆ ಕೊರೊನಾ ಲಕ್ಷಣಗಳು ನಮಗೆ ಕಂಡುಬಂದಿಲ್ಲ. ಸುಳ್ಳು ವದಂತಿಯನ್ನು ಹಬ್ಬಿಸಿದ್ದಾರೆಂದು ಮಾಹಿತಿ ನೀಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights