ಸೈಟೊಕಿನ್ ಚಿಕಿತ್ಸೆಗೆ ಪ್ರಯೋಗಗಳನ್ನು ನಡೆಸಲು ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಗೆ ಅನುಮತಿ

ಕೋವಿಡ್-19 ರೋಗಿಗಳಿಗೆ ಸೈಟೊಕಿನ್ ಚಿಕಿತ್ಸೆ ಪ್ರಯೋಗಗಳನ್ನು ನಡೆಸಲು ಬೆಂಗಳೂರು ಮೂಲದ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಗೆ ಅನುಮತಿ ದೊರೆತಿದೆ.

ಹೌದು… ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರೆಲ್ಲರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಯತ್ನಗಳು ಎಲ್ಲೆಡೆ ನಡೆಯುತ್ತಿವೆ. ಈ ನಡುವೆ ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆ ಮಹತ್ವದ ಹೆಜ್ಜೆ ಇಟ್ಟಿದ್ದು, ಸೈಟೊಕಿನ್ ಚಿಕಿತ್ಸೆಗೆ ಅನುಮತಿ ಪಡೆದಿದೆ.

ಹಾಗಾದ್ರೆ ಏನಿದು ಸೈಟೊಕಿನ್ ಚಿಕಿತ್ಸೆ? ಕೋವಿಡ್-19 ವಿರುದ್ಧ ಹೋರಾಡುವ ರೋಗನಿರೋಧಕ ವ್ಯವಸ್ಥೆಯಿಂದ ಬಿಡುಗಡೆಯಾಗುವ ಮಿಶ್ರಣ. ದುರಾದೃಷ್ಟವಶಾತ್ ಕೆಲ ರೋಗಿಗಳಲ್ಲಿ ಇದು ಉತ್ಪಾದನೆಯಾಗುತ್ತಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ಆರೋಗ್ಯಕರ ದಾನಿಗಳಿಂದ ಸೈಟೊಕಿನ್ ಸಂಗ್ರಹಿಸಲಾಗಿದೆ. ಇದರ ಪ್ರಯೋಗಕ್ಕೆ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ನಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಆ ಮೂಲಕ ಮೊದಲನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ಶೀಘ್ರದಲ್ಲೇ ಮೊದಲ ಚುಚ್ಚುಮದ್ದುನ್ನು ರಚಿಸಲಾಗುವುದು. ಇದಕ್ಕೆ ಬೆಂಗಳೂರು ಮೂಲದ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಗೆ ಅನುಮತಿ ದೊರೆತಿದೆ.

ಈ ಬಗ್ಗೆ ಆಸ್ಪತ್ರೆಯು ಇತ್ತೀಚೆಗೆ ಪ್ರಾಣಿಗಳ ಮೇಲೆ ಪ್ರಯೋಗಿಸಿ  ಅಧ್ಯಯನವನ್ನು ಪೂರ್ಣಗೊಳಿಸಿದೆ. “ಎಚ್‌ಸಿಜಿಯಲ್ಲಿನ ವೈದ್ಯರ ತಂಡವು (ಡಾ.ಗುರುರಾಜ್ ರಾವ್, ಡಾ.ಜೋಥ್ಸ್ನಾ ಮತ್ತು ಡಾ.ವಿಶಾಲ್ ರಾವ್) ಐಕ್ರೆಸ್ಟ್ ಜೊತೆಗೆ ಸೈಟೊಕಿನ್ ಮಧ್ಯಸ್ಥಿಕೆಯ ಆಂಟಿ-ಕೋವಿಡ್ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ” ಎಂದು ಆಸ್ಪತ್ರೆಯ ಹೇಳಿಕೆ ನೀಡಿದೆ.

ಕೋವಿಡ್-19 ರೋಗಿಗಳಿಗೆ ಅನುಕೂಲಕರ ಪ್ಲಾಸ್ಮಾ ಚಿಕಿತ್ಸೆಯಲ್ಲಿ ಹಂತ -1 ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಿದ ವೈದ್ಯರ ಅದೇ ತಂಡ ಕಾರ್ಯ ನಡೆಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights