ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಕರ್ನಾಟಕದ ಧೀರ ವನಿತೆಯರ ದಿಟ್ಟ ಹೆಜ್ಜೆ ಗುರುತುಗಳು!

ಭಾರತದ ಇತಿಹಾಸದಲ್ಲಿ ಮರೆ ಮಾಚಲ್ಪಟ್ಟ ಹಲವಾರು ಸಂಗತಿಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಅದೇ ರೀತಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಓದುವಾಗ ಅಥವಾ ಹೇಳುವಾಗ ಹಲವರನ್ನು ಮರೆತೇ ಬಿಡುವುದು ಎಂದಿಗೂ ಮುಂದುವರೆದೇ ಇದೆ. ಮರೆಮಾಚಲ್ಪಟ್ಟವರಲ್ಲಿ ಧೀರ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರೂ ಹಲವರು.

ಕರ್ನಾಟಕದಲ್ಲಿ ಬಿಟ್ರಿಷ್‌ ದಾಸ್ಯವನ್ನು ಒಪ್ಪಿಕೊಳ್ಳದೆ ಸಮರ ಸಾರಿದವರಲ್ಲಿ ರಾಜರಿಗಿಂತಲೂ ರಾಣಿಯರೇ ಮುಂದಿದ್ದರು. ಕರ್ನಾಟಕ ಸ್ವಾತಂತ್ರ್ಯ ಇತಿಹಾಸದಲ್ಲಿ ಬ್ರಿಟಿಷರ ವಿರುದ್ದ ಹೋರಾಡಿ ಮಡಿದ ರಾಜ ಟಿಪ್ಪು ಮಾತ್ರ. ಟಿಪ್ಪು ಸುಲ್ತಾನ್‌ ಹೊರತು ಪಡಿಸಿದರೇ ಇನ್ನಾವುದೇ ರಾಜರೂ ಬ್ರಿಟಿಷರ ವಿರುದ್ಧ ಸಮರ ಸಾರಲಿಲ್ಲ. ಅದರೆ, ಬ್ರಿಷರನ್ನು ಎದುಗೊಂಡು ನಿಂತವರಲ್ಲಿ ರಾಣಿಯರ ಚರಿತ್ರೆ ನೆನಪಿಸಿಕೊಳ್ಳುವಂತದ್ದು.

ಬ್ರಿಟಿಷರ ದಾಸ್ಯವನ್ನು ಒಪ್ಪದೆ ಹೋರಾಡಿದ ರಾಣಿ ಕತ್ತೂರಿನ ಚೆನ್ನಮ್ಮ. ಕಿತ್ತೂರನ್ನು ಬ್ರಿಟಿಷರ ಕಪಿಮುಷ್ಠಿಗೆ ಒಳಪಡಿಸದೆ, ಕಪ್ಪವನ್ನೂ ನೀಡದೆ ಹೋರಾಡಿದ ರಾಣಿ. ಕಿತ್ತೂರಿನ ಇತಿಹಾಸ ಕರ್ನಾಟಕದ ಹೆಮ್ಮೆಯ ಮೈಲುಗಲ್ಲಾಗಿ ಉಳಿದದ್ದು ರಾಣಿ ಚೆನ್ನಮ್ಮಳಿಂದ.  1824 ರಲ್ಲಿ ಬ್ರಿಟಿಷರನ್ನು ಒಮ್ಮೆ ಸೋಲಿಸಿದ ನಂತರ, ಯುದ್ಧವು ನಿಲ್ಲುತ್ತದೆ ಎಂದು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಳು. ಆದರೆ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ದಾಳಿ ನಡೆಸಿದರು.   ಬ್ರಿಟಿಷರೊಂದಿಗಿನ ಎರಡನೇ ಯುದ್ಧದಲ್ಲಿ, ಚೆನ್ನಮ್ಮ ಧೈರ್ಯದಿಂದ ಹೋರಾಡಿದಳು ಆದರೆ ಬೈಲಾಹೊಂಗಲದಲ್ಲಿ ಸೆರೆಹಿಡಿಯಲ್ಪಟ್ಟಳು. ಅವಳು ಬಂಧನದಲ್ಲಿದ್ದಾಗಲೇ ಮರಣಹೊಂದಿದಳು. ಚನ್ನಮ್ಮ ಉತ್ತರಾಧಿಕಾರಿ ಸಂಗೊಳ್ಳಿ ರಾಯಣ್ಣ ಸೆರೆಹಿಡಿದು ಸಾಯುವವರೆಗೂ ಬ್ರಿಟಿಷರ ಜೊತೆ ಹೋರಾಡಿದರು.

ಕರವಾಳಿಯ ಕೇಸರಿ ಎಂದೇ ಹೆಸರಾದ ರಾಣಿ, ತುಳುನಾಡಿನ ಅಬ್ಬಕ್ಕ ರಾಣಿ ಅಥವಾ ‘ಅಬ್ಬಕ್ಕ ಮಹಾದೇವಿ’   ಪೋರ್ಚುಗೀಸರೊಡನೆ ಹೋರಾಡಿದ ವೀರ ವನಿತೆ. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ಹೊನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ಆಕೆಯ ರಾಜಧಾನಿಯಾಗಿದ್ದಿತು. ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿಎಂದು ಹೆಸರಾಗಿದ್ದಳು. ವಸಾಹತುಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯ ಮಹಿಳೆ ಹಾಗೂ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಹೆಗ್ಗಳಿಕೆ ರಾಣಿ ಅಬ್ಬಕ್ಕರದು.

ಕೇವಲ ರಾಣಿಯರು ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಹಲವು ಮಹಿಳೆಯರು ಭಾಗಿಯಾಗಿದ್ದರು. ಗೌರಮ್ಮ ವೆಂಕಟ ರಾಮಯ್ಯ ಅವರು ‘ತೆರಿಗೆ ರಹಿತ ಅಭಿಯಾನ’ದಲ್ಲಿ ಮುಂಚೂಣಿಯಲ್ಲಿದ್ದರು, 1938 ಏಪ್ರಿಲ್ 9 ರಂದು ನಡೆದ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಯಶೋಧರ ದಾಸಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ರಕ್ಷಣೆ ನೀಡಲು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಭಗಿನಿ ಮಂಡಳಿನ್ನು ಉಮಾಬಾಯಿ ಕುಂದಾಪುರ ಸ್ಥಾಪಿಸಿದರು. ಅದೇ ರೀತಿ ಲೀಲಾವತಿ  ಮಾಗಡಿ, ಶಕುಂತಲಾ ಕುರ್ತಕೋಟಿ, ಮತ್ತು ನಾಗಮ್ಮ ಪಾಟೀಲ್ ಮುಂತಾದ ಮಹಿಳೆಯರು ಸ್ವಾತಂತ್ರ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಂತಹ  ಧೀರ ವನಿತೆಯರಿಗೆ ಇಂದು ರಾಜ್ಯ ಸರ್ಕಾರ ಅಪಮಾನ ಮಾಡಲು ಮುಂದಾಗಿದೆ. ಶೈಕ್ಷಣಿಕ ಪಠ್ಯ ಪುಸ್ತಕಗಳಿಂದ ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮರ ಪಠ್ಯಕ್ರಮವನ್ನು ಕೊರೊನಾ ಸಂದರ್ಭವನ್ನು ಮುಂದಿಟ್ಟು ಪಠ್ಯದಿಂದ ತೆಗೆದುಹಾಕಿದೆ.


ಇದನ್ನೂ ಓದಿಹಳ್ಳಿ ಮಾತು-10: ಈಗ ಮಹಿಳೆ ಕಾಣೆ ಮಾತ್ರ ಆಗಿಲ್ಲ; ಒಂಟಿಯೂ ಕೂಡ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights