ದನ ತುಂಬುವ ಗೂಡ್ಸ್ ಗಾಡಿಯಲ್ಲಿ ಮಕ್ಕಳನ್ನು ತುಂಬಿದ ಶಿಕ್ಷಕರು…

ಶಿಕ್ಷಕರು ಶಾಲಾ ಮಕ್ಕಳನ್ನು ದನ ತುಂಬುವ ಗೂಡ್ಸ್ ಗಾಡಿಯಲ್ಲಿ  ತುಂಬಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಕಳುಹಿಸಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲೂಕಿನ ಸೋಮಲಾಪುರ ಮತ್ತು ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಹೌದು…. ಕನಿಷ ಜ್ಞಾನವನ್ನು ತಿಳಿಯದ ಪ್ರಾಥಮಿಕ ಶಾಲಾ ಶಿಕ್ಷಕರು 20 ಕ್ಕೂ ಹೆಚ್ಚು ಮಕ್ಕಳನ್ನು ದನಗಳಂತೆ ಗೂಡ್ಸ್ ಗಾಡಿಯಲ್ಲಿ ತುಂಬಿಸಿ ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ನಡೆಯುತ್ತಿರುವ ವಲಯಮಟ್ಟದ ಪ್ರತಿಭಾ ಕಾರಂಜಿಗೆ ಕಳುಹಿಸಿದ್ದಾರೆ.

ದನ, ಕುರಿಗಳನ್ನು ತುಂಬುವ ವಾಹನದಲ್ಲಿ ಮಕ್ಕಳನ್ನು ಒಬ್ಬರ…ಮೇಲೆ…ಒಬ್ಬರನ್ನು ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿಂಬಂಧನೆಗಳ ಅರಿವು ಇಲ್ಲದಾಯಿತೆ ಯಾವುದೇ ಸುರಕ್ಷತೆ ಇಲ್ಲದ ಗೂಡ್ಸ್ ವಾಹನದಲ್ಲಿ ಕರೆದೊಯ್ಯಲಾಗಿದೆ.

ಮತ್ತೊಂದು ವಿಚಾರ ಅಂದ್ರೆ ಈ ಗೂಡ್ಸ ವಾಹನಕ್ಕೆ ಪರವಾನಿಗೆ ಕೂಡ ಇಲ್ಲ. ನಿರ್ಲಕ್ಷ್ಯದಿಂದ ಸಾಮಾನ್ಯ ಜ್ಞಾನವಿಲ್ಲದೇ ಮಕ್ಕಳನ್ನು ಪ್ರಾಣಿಗಳಂತೆ ಬಿಂಬಿಸಿದ ಶಿಕ್ಷಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಯಾಗಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights