ಫ್ಯಾಕ್ಟ್‌ಚೆಕ್: ಗುಲ್ಬರ್ಗದ ಗರುಡ ಆಕಾರದ ದೇವಸ್ಥಾನವನ್ನು ಇಂಡೋನೇಷ್ಯಾದ್ದು ಎಂದು ತಪ್ಪಾಗಿ ಹಂಚಿಕೆ

ಇಂಡೋನೇಷ್ಯಾದ ಪಕ್ಷಿಯ (ಗರುಡ) ಆಕಾರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಕೆಲವರು ಈ ದೇವಾಲಯ ಇಂಡೋನೇಷ್ಯಾದಲ್ಲಿ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಈ ಗರುಡ ಪಕ್ಷಿಯ ಆಕಾರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ನಿಜವಾಗಿಯೂ ಇಂಡೋನೇಷ್ಯಾದಲ್ಲಿ ಇದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿರುವ ಚಿತ್ರವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಚಿತ್ರದೊಂದಿಗೆ ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ. ಪೋಸ್ಟ್‌ನ ವಿವರಣೆಯು ಇಂಡೋನೇಷ್ಯಾದ ಪೆರುಮಾಳ್ ದೇವಾಲಯ ಎಂದು ಹೇಳುತ್ತದೆ. ಆದರೆ ಕಾಮೆಂಟ್ಸ್ ವಿಭಾಗದಲ್ಲಿ ಕೆಲವರು ಗುಲ್ಬರ್ಗದ ಸರ್ವೇಶ್ವರ ದೇವಸ್ಥಾನ ಎಂದು ಬರೆದಿದ್ದಾರೆ.

ಈ ಅಂತರ್ಜಾಲದ ಹುಡುಕಾಟದ ಆಧಾರದ ಮೇಲೆ ವೈರಲ್ ಪೋಸ್ಟ್‌ನಲ್ಲಿರುವ ಚಿತ್ರವು ಗುಲ್ಬರ್ಗಾದ ಸರ್ವೇಶ್ವರ ದೇವಾಲಯದ ಚಿತ್ರ ಎಂದು ಸ್ಪಷ್ಟವಾಯಿತು. ಗೂಗಲ್ ಮ್ಯಾಪ್‌ನಲ್ಲಿರುವ ಸರ್ವೇಶ್ವರ ದೇವಸ್ಥಾನದ ಫೋಟೋ ವೈರಲ್ ಪೋಸ್ಟ್‌ನಲ್ಲಿರುವ ಫೋಟೋಗೆ ಹೊಂದಿಕೆಯಾಗುತ್ತದೆ.

ಮತ್ತಷ್ಟು ಮಾಹಿತಿಗಾಗಿ ಗುಲ್ಬರ್ಗಾದ ಸ್ಥಳಿಯ ನಿವಾಸಿ ಲಿಂಗರಾಜ್‌ ಎಂಬುವವರನ್ನು ಸಂಪರ್ಕಿಸಿದಾಗ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದು, ಈ ದೇವಸ್ಥಾನ ಗುಲ್ಬರ್ಗದ, ಮಲ್ಖೇಡ್ ರಸ್ತೆಯ, ಆದಿತ್ಯ ನಗರದಲ್ಲಿ ಈ ಸರ್ವೇಶ್ವರ ದೇವಸ್ಥಾನವಿದ್ದು, ಆದಿತ್ಯ ಬಿರ್ಲಾ ಗ್ರೂಪ್‌ನ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಗುಲ್ಬರ್ಗಾದಲ್ಲಿರುವ ಸರ್ವೇಶ್ವರ ದೇವಾಲಯವನ್ನು, ಇಂಡೋನೇಷ್ಯಾದ ಗರುಡ ಆಕಾರದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಫೋಟೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಗರುಡ ಆಕಾರದ ಈ ದೇವಾಲಯವು ಗುಲ್ಬರ್ಗದ, ಮಲ್ಖೇಡ್ ರಸ್ತೆಯ, ಆದಿತ್ಯ ನಗರದಲ್ಲಿದೆ  ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಿಷಿ ಸುನಕ್ ಅರೆ ಬೆತ್ತಲಾಗಿ ನೃತ್ಯ ಮಾಡುತ್ತಿರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights