ಹಿಂದೂ ಧರ್ಮದ ಉಳಿವಿಗಾಗಿ ಒಬ್ಬೊಬ್ಬರು 12 ಮಕ್ಕಳನ್ನ ಹೇರಬೇಕು-ಸಿದ್ದಲಿಂಗ ಸ್ವಾಮಿ

ಹಿಂದು ಸಮಾಜದ ಜನಸಂಖ್ಯೆ ಕುಸಿದು ಹೋಗುತ್ತಿದೆ. ಹಿಂದೂ ಧರ್ಮದ ಉಳಿವಿಗಾಗಿ ಒಬ್ಬೊಬ್ಬರು 12 ಮಕ್ಕಳನ್ನ ಹೆರಬೇಕು ಎಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲನಾದ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ರಾಕಂಗೇರಾದ ವಗ್ಗರಾಯಣ್ಣ ದೇವಸ್ಥಾನದ ಆವರಣದಲ್ಲಿ ದರ್ಶನಾಪುರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿವಾದಾತ್ಮಕ ಹೇಳಿಕೆ ನೀಡಿ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.

ನೀವು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಆದರ್ಶ ಮಕ್ಕಳನ್ನು ಜನ್ಮ ನೀಡಬೇಕು. ನಮ್ಮ ದೇಶದ ಸರಕಾರದ ಕಾನೂನು ಹೇಳುತ್ತೆ. ಎರಡು ಮಕ್ಕಳು ಹೊಂದಬೇಕೆಂದು. ಒಂದು ಆರತಿಗೆ ಮತ್ತೊಂದು ಕೀರ್ತಿಗೆ. ಒಂದು ಆರತಿ ಹಾಗೂ ಕೀರ್ತಿಗೆ ಮಕ್ಕಳಾದ್ರೆ ಈ ಕಾನೂನು ಒಂದು ಧರ್ಮದವರಿಗೆ ಅನ್ವಯವಾಗುತ್ತದೆ ಎಂದು ನವಜೋಡಿಗಳನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights