12 ವರ್ಷದ ಮಗಳ ಅತ್ಯಾಚಾರಕ್ಕೆ ತಂದೆಯಿಂದಲೇ 30 ಕಾಮುಕರಿಗೆ ಸಹಕಾರ…!
12 ವರ್ಷದ ಮಗಳ ಅತ್ಯಾಚಾರಕ್ಕೆ ಪಾಪಿ ತಂದೆಯೊಬ್ಬ 30 ಕಾಮುಕರಿಗೆ ಸಹಕಾರ ನೀಡಿದ ಅಘಾತಕಾರಿ ಘಟನೆ ಮಲಪ್ಪುರಂನ ಚೆಲರಿ ಪ್ರದೇಶದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಹೌದು… 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂತ್ರಸ್ತ ಬಾಲಕಿ ಮೇಲೆ 2 ವರ್ಷಗಳಿಂದ ಕಾಮುಕರು ಕೃತ್ಯವೆಸಗಿದ್ದಾರೆ. ಬಾಲಕಿ ಶಾಲೆ ಪದೇ ಪದೇ ಗೈರಾಗುತ್ತಿದ್ದನ್ನು ಪ್ರಶ್ನಿಸಿದ ಶಿಕ್ಷಕರಿಗೆ ಈ ವಿಚಾರ ತಿಳಿದು ಬಂದಿದೆ. ತಂದೆಯೇ ಆಕೆಯ ಮೇಲೆ ಅತ್ಯಾಚಾರ ವೆಸಗಲು ಸಹಕಾರು ನೀಡುತ್ತಿದ್ದನ್ನು ಬಾಲಕಿ ಹೇಳಿಕೊಂಡಿದ್ದಾಳೆ.
ಸಂತ್ರಸ್ತೆ ಅವರ ಕುಟುಂಬದಲ್ಲಿದ್ದ ಏಕೈಕ ಹೆಣ್ಣು ಮಗಳಾಗಿದ್ದು, ಕುಟುಂಬಸ್ಥರೊಂದಿಗೆ ಆಕೆ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದಳು. ಕಳೆದ ಎರಡು ವರ್ಷಗಳಿಂದ ತಂದೆಯ ಸ್ನೇಹಿತರು ಆಗಾಗ ಮನೆಗೆ ಬರುತ್ತಿದ್ದರು. ಅವರು ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದರು. ಇದಕ್ಕೆ ತಂದೆ ಕೂಡ ಬೆಂಬಲ ನೀಡುತ್ತಿದ್ದರು. ಸ್ನೇಹಿತರು ಮನೆಗೆ ಬಂದಾಗಲೆಲ್ಲಾ ತಂದೆ ನನಗೆ ಶಾಲೆಗೆ ಹೋಗಬೇಡ ಎಂದು ತಡೆಯುತ್ತಿದ್ದರು ಎಂದು ಬಾಲಕಿ ಹೇಳಿರುವುದಾಗಿ ಮಕ್ಕಳ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯನ್ನು ಮಲಪ್ಪುರಂನ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ ಬಳಿಕ ಅಲ್ಲಿಂದ ಆಕೆಯನ್ನು ಆಶ್ರಯ ನಿವಾಸಕ್ಕೆ ಕರೆದೊಯ್ಯಲಾಯಿತು. ಈ ಸಂಬಂಧ ತಿರುರಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ತಂದೆ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳ ಮೇಲೆ ಪೋಸ್ಕೋ ಕಾಯ್ದೆ ಅಡಿಯಲ್ಲಿ ಹಲವು ಕೇಸ್‍ಗಳನ್ನು ದಾಖಲಿಸಲಾಗಿದೆ. ಅಲ್ಲದೆ ಉಳಿದ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.