12 ಗಂಟೆಗಳಲ್ಲಿ 8 ಆಸ್ಪತ್ರೆ ಸುತ್ತಿದ ಗರ್ಭಿಣಿ ಸಾವು : ಕುಟುಂಬಸ್ಥರಿಂದ ದೂರು…

ನೋಯ್ಡಾದ ಗರ್ಭಿಣಿ ಮಹಿಳೆಯೊಬ್ಬಳು 12 ಗಂಟೆಗಳಲ್ಲಿ 8 ಆಸ್ಪತ್ರೆಗಳನ್ನು ಸುತ್ತಿ ಸಾವನ್ನಪ್ಪಿದ ಕರುಳಾಜನಕ ಘಟನೆ ನಡೆದಿದೆ.

30 ವರ್ಷದ ಎಂಟು ತಿಂಗಳ ಗರ್ಭಿಣಿ ರಕ್ತದೊತ್ತಡ, ಉಸಿರಾಟದ ತೊಂದರೆಯಿಂದ ಸುಮಾರು 12 ಗಂಟೆಗಳ ಅವಧಿಯಲ್ಲಿ ನೋಯ್ಡಾದಾದ್ಯಂತ ಎಂಟು ಆಸ್ಪತ್ರೆಗಳಲ್ಲಿ ಪ್ರವೇಶ ಪಡೆಯಲು ವಿಫಲವಾದ ಕಾರಣ ಶುಕ್ರವಾರ ಸಾವನ್ನಪ್ಪಿರುವ ಕರುಳಾಜನಕ ಘಟನೆ ಬೆಳಕಿಗೆ ಬಂದಿದೆ.

ಗಾಜಿಯಾಬಾದ್‌ನ ಖೋರಾ ನಿವಾಸಿ ಗರ್ಭಿಣಿ ಮಹಿಳೆಗೆ, ಖಾಸಗಿ ವಲಯದ ಉದ್ಯೋಗಿ ಪತಿ ಮತ್ತು ಅವರ ಐದು ವರ್ಷದ ಮಗ ಇದ್ದಾರೆ. ಗೌತಮ್ ಬುದ್ಧ ನಗರ ಜಿಲ್ಲಾ ಆಡಳಿತವು ಆಪಾದಿತ ಘಟನೆಯ ತನಿಖೆಗೆ ಆದೇಶಿಸಿದೆ.

ಗರ್ಭಿಣಿ ಮಹಿಳೆಯ ಸಹೋದರ ಶೈಲೇಂದ್ರ ಕುಮಾರ್ ಅವರು ಸಂಡೇ ಎಕ್ಸ್‌ಪ್ರೆಸ್‌ಗೆ ತಮ್ಮ ಸಹೋದರಿ ನೀಲಂ, ಅವರ ಪತಿ ವಿಜೇಂದರ್ ಸಿಂಗ್ ಮತ್ತು ಇನ್ನೊಬ್ಬ ಕುಟುಂಬ ಸದಸ್ಯರನ್ನು ತಮ್ಮ ಆಟೋರಿಕ್ಷಾದಲ್ಲಿ ಕನಿಷ್ಠ ಆರು ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಗರ್ಭಿಗೆ ಆಮ್ಲಜನಕದ ಅವಶಕ್ಯತೆ ಹೆಚ್ಚಾದಂತೆ ಆಂಬುಲೆನ್ಸ್‌ ಗಾಗಿ ಇಬ್ಬರನ್ನು ಸಂಪರ್ಕಿಸಿದರೂ ಅಭ್ಯಲೆನ್ಸ್ ಲಭ್ಯವಾಗಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಹೆಚ್ಚಿನ ಆಸ್ಪತ್ರೆಗಳು ತಮ್ಮಲ್ಲಿ ಹಾಸಿಗೆಗಳಿಲ್ಲ ಎಂದು ಹೇಳಿರುವ ಮಾಹಿತಿ ಲಭ್ಯವಾಗಿದೆ.

ಕುಟುಂಬವು ಪಟ್ಟಿ ಮಾಡಿದ ಆಸ್ಪತ್ರೆಗಳಲ್ಲಿ ಶಾರದಾ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ, ಜೇಪೀ ಆಸ್ಪತ್ರೆ, ಶಾರದಾ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆಯ ಹೆಸರುಗಳನ್ನು ನೊಂದಾಯಿಸಿದ್ದಾರೆ.

ಮಹಿಳೆಯ ಸಹೋದರ ಕುಮಾರ್ ಅವರ ಪ್ರಕಾರ, “ಅವಳು ಉಸಿರಾಟ ಸಾಧಯವಾಗದ ಬಗ್ಗೆ ಮಾಹಿತಿ ನೀಡಿದಳು ಆದರೆ ಶ್ಪತ್ರೆ ಸಿಗಲಿಲ್ಲ. ಈ ಮೊದಲು ಅವಳು ಐದು ದಿನಗಳ ಕಾಲ ಗಾಜಿಯಾಬಾದ್‌ನ ಶಿವಾಲಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಜೂನ್ 4 ರಂದು ಬಿಡುಗಡೆಯಾಗಿದ್ದಳು. ಆದರೆ ನಾವು ನಮ್ಮ ಮನೆಯಿಂದ ನನ್ನ ಆಟೋದಿಂದ ಹೊರಟುಹೋದ ಕ್ಷಣದಿಂದ ನಮ್ಮ ಅಗ್ನಿಪರೀಕ್ಷೆ ಪ್ರಾರಂಭವಾಯಿತು. ನಮಗೆ ಯಾವ ಆಸ್ಪತ್ರೆಗಳು ಸೇರಿಸಿಕೊಳ್ಳಲಿಲ್ಲ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಅಮಾಯಕ ಜನ ಬಲಿಯಾಗುತ್ತಿದ್ದಾರೆ. ಆಸ್ಪತ್ರೆಗಳು ರೋಗಿಗಳನ್ನು ಅನುಮಾನಿಸಲು ಶುರು ಮಾಡಿವೆ. ಅನಾರೋಗ್ಯಕ್ಕೆ ಒಳಗಾದ ಜನ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆಲ್ಲಾ ಕೊನೆ ಯಾವಾಗ…? ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights