24*7 ಲಭ್ಯವಿರುತ್ತೇನೆ, ಹೆಗಲಿಗೆ ಹಗಲು ಕೊಟ್ಟು ಹೋರಾಡೋಣ – ಮೋದಿ

ಕೊರೊನಾ ವೈರಸ್‌ ಆಕ್ರಮಣಕ್ಕೆ ಭಾರತದಲ್ಲಿ 239 ಮಂದಿ ಸಾವನ್ನಪ್ಪಿದ ಮತ್ತು 7,400 ಕ್ಕೂ ಹೆಚ್ಚು ಸೋಂಕಿಗೆ ತುತ್ತಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕೆ 21 ದಿನಗಳ ಲಾಕ್‌ಡೌನ್‌ ಮಾಡಲಾಗಿದ್ದು, ಇನ್ನು ಮೂರು ದಿನಗಳಲ್ಲಿ ಲಾಕ್‌ಡೌನ್‌ ಮುಗಿಯಲಿದೆ. ಆದರೆ, COVID-19 ­ವೈರಸ್‌ ನಿಯಂತ್ರಣಕ್ಕೆ ಬಂದಿಲ್ಲ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ 37 ಜನರು ಸಾವನ್ನಪ್ಪಿದ್ದು, 876 ಜನರಿಗೆ ಸೋಂಕು ಖಚಿತವಾಗಿದೆ. ಹಾಗಾಗಿ ಲಾಕ್‌ಡೌನ್‌ ಮುಂದುವರೆಸುವುದೂ ಸೇರಿದಂತೆ, ಮುಂದೇನು ಮಾಡಬಹುದು ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಸಂದರ್ಭದಲ್ಲಿ ಮೋದಿಯವರು ಮಾಸ್ಕ್‌ ಧರಿಸದೆ ತಮ್ಮ ಶಲ್ಯವನ್ನೇ ಮುಖಕ್ಕೆ ಸುತ್ತಿಕೊಂಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಮತ್ತು ಚರ್ಚೆಗಳೂ ನಡೆಯುತ್ತಿವೆ.

ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ದೇಶಕ್ಕೆ ಹೇರಲಾಗಿದ್ದ ಮೂರು ವಾರಗಳ ಲಾಕ್‌ಡೌನ್ ಮಂಗಳವಾರ ಕೊನೆಗೊಳ್ಳುತ್ತದೆಯೇ ಎಂದು ಅವರು ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆ ಪಡೆದರು. “ನಾನು 24×7 ಲಭ್ಯವಿರುತ್ತೇನೆ. ಯಾವುದೇ ಮುಖ್ಯಮಂತ್ರಿಗಳು ನನ್ನೊಂದಿಗೆ ಮಾತನಾಡಬಹುದು ಮತ್ತು ಯಾವುದೇ ಸಮಯದಲ್ಲಿ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.

ನಾವು “ಹೆಗಲಿಗೆ ಹೆಗಲು ಕೊಟ್ಟು ಒಟ್ಟಾಗಿ ನಿಲ್ಲಬೇಕು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲಾಕ್‌ಡೌನ್ ವಿಸ್ತರಿಸಲು ಚಿಂತಿಸಿದ್ದೇವೆ ಎಂದು ಅನೇಕ ರಾಜ್ಯಗಳು ತಿಳಿಸಿವೆ. ಈಗಾಗಲೇ ಒಡಿಶಾ ಮತ್ತು ಪಂಜಾಬ್ ಲಾಕ್‌ಡೌನ್‌ ವಿಸ್ತರಣೆಯನ್ನು ಘೋಷಿಸಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights