ಉದ್ಯೋಗವಿಲ್ಲದೆ 3 ಲಕ್ಷ ಲೈಂಗಿಕ ಕಾರ್ಯಕರ್ತರು ಆಹಾರಕ್ಕಾಗಿ ಪರಿತಪಿಸುತ್ತಿದ್ದಾರೆ
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಲವಾರು ದೇಶಗಳು ಲಾಕ್ಡೌನ್ ಘೋಷಿಸಿವೆ. ಆಷ್ಟ್ರೇಲಿಯಾವು 06 ತಿಂಗಳವರೆಗೆ ಲಾಕ್ಡೌನ್ ವಿಸ್ತರಿಸಿದೆ. ಅಂತೆಯೇ ಥಾಯ್ಲೆಂಡ್ ಕೂಡ ದೇಶಾದ್ಯಂತ ಕರ್ಫ್ಯೂ ವಿಧಿಸಿದೆ. ಇದರಿಂದಾಗಿ ಲೈಂಗಿಕ ಕಾರ್ಯಕರ್ತೆಯರು ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಏಜೆನ್ಸ್ ಫ್ರಾನ್ಸ್ ಪ್ರೆಸ್ ವರದಿ ಮಾಡಿದೆ.
ಲೈಂಗಿಕ ಕಾರ್ಯಕರ್ತರು ಆರೋಗ್ಯದ ದೃಷ್ಠಿಯಿಂದ ವೈರಸ್ಗೆ ಹೆದರುತ್ತಿದ್ದಾರೆ. ಆದರೆ, ಅವರ ಆಹಾರ ಮತ್ತು ಮನೆಯ ಬಾಡಿಗೆಗಾಗಿ ಗಿರಾಕಿಗಳನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಥಾಯ್ಲೆಂಡ್ನ ಬ್ಯಾಂಕಾಕ್ನಿಂದ ಪಟ್ಟಾಯದವರೆಗೆ ಎಲ್ಲಾ ರೆಡ್-ಲೈಟ್ ಏರಿಯಾಗಳು, ನೈಟ್ ಕ್ಲಬ್ಗಳು ಮತ್ತು ಮಸಾಜ್ ಪಾರ್ಲರ್ಗಳನ್ನು ಮುಚ್ಚಿ ಪ್ರವಾಸಿಗರು ದೇಶಕ್ಕೆ ಪ್ರವೇಶಿಸದಂತೆ ದೇಶಾದ್ಯಂತ ನಿರ್ಬಂಧಿಸಲಾಗಿದೆ.
ಇದರಿಂದಾಗಿ ಅಂದಾಜು 3,00,000 ಲೈಂಗಿಕ ಕಾರ್ಯಕರ್ತರನ್ನು ಕೆಲಸದಿಂದ ಹೊರಗುಳಿದಿದ್ದಾರೆ. “ನಾನು ವೈರಸ್ಗೆ ಹೆದರುತ್ತಿದ್ದೇನೆ. ಆದರೆ, ನಾನು ನನ್ನ ಮನೆ ಮತ್ತು ಆಹಾರಕ್ಕಾಗಿ ಹಣ ಸಂಪಾದಿಸಬೇಕಾಗಿದೆ. ಆದ್ದರಿಂದ ಗ್ರಾಹಕರನ್ನು ಹುಡುಕಬೇಕಾಗಿದೆ” ಎಂದು 32 ವರ್ಷದ ಟ್ರಾನ್ಸ್ಜೆಂಡರ್ ಲೈಂಗಿಕ ಕಾರ್ಯಕರ್ತೆ ಪಿಮ್ ಹೇಳಿದ್ದಾರೆ.
ಅಂಕಿಅಂಶಗಳ ಪ್ರಕಾರ, 2,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ 20 ಜನರನ್ನು ಕೊಂದ ವೈರಸನ್ನು ನಿಯಂತ್ರಿಸಲು ಅಗತ್ಯವಿದ್ದರೆ 24 ಗಂಟೆಗಳ ಕರ್ಫ್ಯೂ ಜಾರಿಗೊಳಿಸಲು ಸಿದ್ಧರಿದ್ದೇವೆ ಎಂದಿರುವ ಸರ್ಕಾರ, ಶುಕ್ರವಾರದಿಂದ ಥಾಯ್ಲೆಂಡ್ನಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಬಾರ್ಗಳು ಮತ್ತು ಈಟ್-ಇನ್ ರೆಸ್ಟೋರೆಂಟ್ಗಳು ಹಲವಾರು ದಿನಗಳ ಹಿಂದೆ ಮುಚ್ಚಲ್ಪಟ್ಟಿವೆ.
ಹಾಗಾಗಿ ಕೆಲಸ ಸ್ಥಳಗಳು ಇದ್ದಕ್ಕಿದ್ದಂತೆ ಮುಚ್ಚಿದ್ದರಿಂದಾಗಿ ಕೆಲವು ಲೈಂಗಿಕ ಕಾರ್ಯಕರ್ತರು ತಮ್ಮ ಊರುಗಳಿಗೆ ಮರಳಿದ್ದಾರೆ. ಆದರೆ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುತ್ತಿದ್ದ ಪಿಮ್ ನಂತರ ಕೆಲವರು ತಮ್ಮ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬೀದಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
“ನಾವು ಬಡವರಾಗಿರುವ ಕಾರಣ ಈ ವೃತ್ತಿ ಮಾಡುತ್ತಿದ್ದೇವೆ.ನಾನು ವಾರಕ್ಕೆ 300-600 ಡಾಲರ್ಗಳಷ್ಟು ಹಣವನ್ನು ಸಂಪಾದಿಸುತ್ತಿದ್ದೆ. ಆದರೆ ವ್ಯವಹಾರಗಳು ಸ್ಥಗಿತಗೊಂಡಿದ್ದರಿಂದಾಗಿ ನನ್ನ ಆದಾಯವೂ ನಿಂತುಹೋಗಿದೆ. ನಮ್ಮ ಹೋಟೆಲ್ಗೆ ಹಣ ಪಾವತಿಸಲು ಸಾಧ್ಯವಾಗದಿದ್ದರೆ ಅವರು ನಮ್ಮನ್ನು ಹೊರಹಾಕುತ್ತಾರೆ.” ಎಂದು ಅಲೀಸ್ ಆತಂಕ ವ್ಯಕ್ತಪಡಿಸಿದ್ದಾರೆ.
ವೈರಸ್ ಪ್ರಭಾವ ತಿಂಗಳುಗಳವರೆಗೆ ಉಳಿಯಬಹುದೆಂಬ ಆತಂಕಗಳಿವೆ, ಆರ್ಥಿಕತೆಯಿಂದ ಶತಕೋಟಿ ಡಾಲರ್ಗಳಷ್ಟು ಕುಸಿತಗೊಳ್ಳಲಿದೆ ಮತ್ತು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವವರನ್ನು ನಿರ್ಗತಿಕರನ್ನಾಗಿ ಮಾಡುತ್ತದೆ. ಅವರಲ್ಲಿ ಲೈಂಗಿಕ ಕಾರ್ಯಕರ್ತರೂ ಸೇರಿದ್ದಾರೆ. ಮುಂದಿನ ಮೂರು ತಿಂಗಳುಗಳ ಕಾಲ ಉದ್ಯೋಗವಿಲ್ಲದವರಿಗೆ 5,000 Baht ($ 150) ನೀಡುವ ಥೈಲ್ಯಾಂಡ್ ಸರ್ಕಾರದ ತುರ್ತು ಯೋಜನೆಯು ಲೈಂಗಿಕ ಕಾರ್ಯಕರ್ತರನ್ನು ಹೊರಗಿಡುತ್ತದೆ ಎಂಬ ಕಳವಳವಿದೆ. ಏಕೆಂದರೆ ಅವರು ಔಪಚಾರಿಕ ಉದ್ಯೋಗವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ.
ಲೈಂಗಿಕ ಕಾರ್ಯಕರ್ತರ ಗುಂಪು ಸರ್ಕಾರಕ್ಕೆ ಮುಕ್ತ ಪತ್ರವೊಂದನ್ನು ಬರೆದಿದ್ದು, “ತಮ್ಮ ಆದಾಯವನ್ನು ಕಳೆದುಕೊಂಡಿರುವ ಎಲ್ಲ ಕಾರ್ಮಿಕರಿಗೆ ನೆರವು ನೀಡುವ ಮಾರ್ಗವನ್ನು ಕಂಡುಕೊಳ್ಳಬೇಕು” ಎಂದು ಒತ್ತಾಯಿಸಿದೆ. “ವೈರಸ್ಗಿಂತ ತಿನ್ನಲು ಏನೂ ಇಲ್ಲ ಎಂಬ ಭಯ ನಮಗಿದೆ” ಎಂದು ಆಲಿಸ್ ಹೇಳಿದ್ದಾರೆ.