‘41 ಕೋಟಿ ಬ್ಯಾಂಕ್ ಖಾತೆಗಳಿಗೆ 53,000 ಕೋಟಿ ರೂ’ ಎಂದು ಅಮಿತ್ ಶಾ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿದ ‘ಆಜ್ ತಕ್’

ಅಮಿತ್ ಶಾ ಅವರು ‘ಆಜ್ ತಕ್’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ಸ್ಕ್ರೀನ್ ಶಾಟ್ ಅನ್ನು ಫೇಸ್ಬುಕ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಸುದ್ದಿ ವಾಹಿನಿಯ ಬ್ರೇಕಿಂಗ್ ಸುದ್ದಿಯಲ್ಲಿ ‘53 ಕೋಟಿ ರೂಗಳನ್ನು 41 ಕೋಟಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ’ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ಬಿತ್ತರಿಸಲಾಗಿತ್ತು . (अमित शाह: ‘41 करोड़ लोगों के खातों में 53 करोड़ रुपए भेजें’).  ಅಮಿತ್ ಶಾ ಅವರು ‘53 ಸಾವಿರ ಕೋಟಿ ರೂಗಳನ್ನು’ ಎಂದಿದ್ದನ್ನು, ‘53 ಕೋಟಿ’ ಎಂದು ಆಜ್ ತಕ್ ತಪ್ಪು ವ್ಯಾಖ್ಯಾನ ಮಾಡಿ ಬಿತ್ತರಿಸಿದೆ ಎಂದು ಫ್ಯಾಕ್ಟ್ಲಿ ಪತ್ತೆ ಹಚ್ಚಿದೆ.

ಅಮಿತ್ ಶಾ ಅವರು 53 ಸಾವಿರ ಕೋಟಿ ರೂಗಳನ್ನು 41 ಕೋಟಿ ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಹೇಳಿದ್ದರು. ಅಮಿತ್ ಶಾ ಅವರು ಮಾಡಿದ್ದ ಟ್ವೀಟ್ ನಲ್ಲಿಯೂ ಅದೇ ಅಂಕಿಗಳನ್ನು ಕಾಣಬಹುದು. ಸ್ಕ್ರೀನ್ ಶಾಟ್ ನಲ್ಲಿರುವ, ಆಜ್ ತಕ್ ಅಂಕಿಗಳನ್ನು ತಪ್ಪು ವ್ಯಾಖ್ಯಾನಿಸಿ ಬಿತ್ತರಿಸಿದ ದೃಶ್ಯವನ್ನು 10:43:19 ಸಮಯದಲ್ಲಿ ನೋಡಬಹುದು. ಅಲ್ಲದೆ, ಆಜ್ ತಕ್ ಈ ತಪ್ಪಿನ ಬಗ್ಗೆ ತಿದ್ದುಪಡಿಯನ್ನು ಪ್ರಕಟಿಸಿದೆ.

ಮೂಲಗಳು:
ಪ್ರತಿಪಾದನೆ 
1. ಫೇಸ್ಬುಕ್ ಪೋಸ್ಟ್ (ಆರ್ಕೈವ್)
ನಿಜಾಂಶ 
1. ಆಜ್ ತಕ್ ಸಂದರ್ಶನ  – https://www.youtube.com/watch?v=IkF5aYD442M
2. ಅಮಿತ್ ಶಾ ಅವರ ಟ್ವೀಟ್ –
https://twitter.com/AmitShah/status/1266787296134610944
3. ಆಜ್ ತಕ್ ತಿದ್ದುಪಡಿ – https://www.facebook.com/aajtak/videos/279229863224012/

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights