6 ತಿಂಗಳ ಹಸುಗೂಸನ್ನು ಮೋರಿಗೆ ಎಸೆದ ತಾಯಿ : ಕಂದಮ್ಮನ್ನನ್ನು ರಕ್ಷಿಸಿದ ಜನ
6 ತಿಂಗಳ ಹಸುಗೂಸನ್ನ ಪಾಪಿ ತಾಯಿಯೊಬ್ಬಳು ಮೊರಿಯಲ್ಲಿ ಬಿಸಾಡಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ಇಂದು ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ ಮಗು ಪತ್ತೆಯಾಗಿದೆ. ಮಗುವಿನ ಚಿರಾಟ ಕೇಳಿ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಮಗು ರವಾನೆ ಮಾಡಲಾಗಿತ್ತು.
ಗಂಡ ಹೆಂಡತಿ ಜಗಳವಾಗಿದ್ದ ಹಿನ್ನಲೆ ಮಗುವನ್ನು ತಾಯಿ ಮೋರಿಗೆ ಬೀಸಾಕಿದ್ದು, ಮಗು ಹುಡುಕಿಕೊಂಡು ಬಂದ ತಂದೆಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ನಿಮಗೆ ಮಗು ಸಾಕಲು ಯೋಗ್ಯತೆ ಇಲ್ಲ ಅಂದ್ರೆ ನಮಗೆ ಕೊಡಿ. ನಾವು ಆ ಮಗುವನ್ನ ಚೆನ್ನಾಗಿ ನೋಡಿಕೊಳ್ಳುತ್ತೇವೆ. ನನ್ನ ಹೆಂಡತಿ ಹೀಗೆ ಮಾಡಿದ್ದಾಳೆಂದು ಆಕೆಗೆ ಥಳಿಸಿದ್ದೇನೆಂದು ಸಾರ್ವಜನಿಕರ ಬಳಿ ಮಗು ಬೇಕೆಂದು ರೋಧಿಸಿದ್ದಾನೆ ತಂದೆ. ಬುದ್ದಿಮಾಂದ್ಯಳಂತೆ ತೋರುತ್ತಿರುವ ತಾಯಿಗೆ ಪೊಲೀಸರು ಬುದ್ಧಿ ಹೇಳಿ ತಂದೆ ತಾಯಿಗೆ ಮಗು ವಾಪಸ್ ನೀಡಿದ್ದಾರೆ.

