ಕೊರೊನಾ ವಾರ್ ಸೀಕ್ರೆಟ್ : ಭಾರತವನ್ನು ಶ್ಲಾಘಿಸಿದ WHO – ಬೇರೆ ದೇಶಗಳ ಬಗ್ಗೆ ಕಳವಳ
ಕೋವಿಡ-19ಗೆ ಜಗತ್ತಿನ ದೇಶಗಳು ಶರಣಾಗಿವೆ. ಆದರೆ ಭಾರತ ಮಾತ್ರ ಸಮರ್ಥವಾಗಿ ಸಮರ ಸಾರಿದೆ. ಸೂಕ್ತ ಸಮಯದಲ್ಲಿ ಲಾಕ್ ಡೌನ್ ಘೋಷಿಸಿ 8 ಲಕ್ಷ ಜನರಿಗೆ ಸಂಜೀವಿನಿಯಾಗಿದೆ. ದೇಶದ ಈ ನಿರ್ಧರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ಶ್ಲಾಘಿಸಿದೆ.

ಹೌದು… ಬೇರೆ ದೇಶಗಳಿಗೆ ಹೋಲಿಸಿ ನೋಡಿದರೆ ಭಾರತದ ಜನಸಂಖ್ಯೆ ಹೆಚ್ಚಿದೆ. 130 ಕೋಟಿ ಜನಸಂಖ್ಯೆಯನ್ನು ಭಾರತ ಹೊಂದಿದೆ. ಬೇರೆ ದೇಶಗಳಲ್ಲಿ ಕೊರೊನಾ ಪರಿಣಾಮ ನೋಡಿದ ಭಾರತ ಮುಂಚಿತವಾಗಿಯೇ ಲಾಕ್ ಡೌನ್ ಘೋಷಣೆ ಮಾಡಿದೆ. ಇದೇ 8 ಲಕ್ಷ ಜನರ ಪ್ರಾಣ ಉಳಿಸಲು ಕಾರಣವಾಗಿದೆ. ಕೊರೊನಾ ಕಡಿವಾಣ ಹಾಕುವಲ್ಲಿ ಲಾಕ್ ಡೌನ್ ಪ್ರಮುಖ ಪಾತ್ರ ವಹಿಸಿದೆ. ಇದರಿಂದಾಗಿ ಭಾರತ ಸರ್ಕಾರ ತೋರಿದ ಭದ್ರತೆಗೆ ವಿಶ್ವ ಆರೋಗ್ಯ ಸಂಸ್ಥೆ ಶಹಭಾಸ್ ಎಂದಿದೆ. ಕೊರೊನಾ ಯುದ್ಧದ ಸಮರದಲ್ಲಿ ಭಾರತ ಕೇವಲ 8 ಲಕ್ಷ ಜನರನ್ನು ಉಳಿಸಿಲ್ಲ ದೇಶದ 130 ಕೋಟಿ ಜನರನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು WHO ಹಾಡಿ ಹೊಳಗಿದೆ.
ಐರೋಪ್ಯ ರಾಷ್ಟ್ರಗಳ ನೀತಿಯಂತೆ ಭಾರತ ಕ್ರಮ ಕೈಗೊಳ್ಳದೇ ಕುಳಿತಿದ್ದರೆ ಸಂಕಷ್ಟ ಎದುರಿಸಬೇಕಾಗುತ್ತಿತ್ತು. ಪ್ರಾರಂಭದಲ್ಲಿ ಸ್ವಯಂ ದಿಗ್ಬಂಧನ ಹಾಕಿಕೊಳ್ಳದೇ ಹೋಗಿದ್ದರೆ 8 ಲಕ್ಷ ಜನ ಕೊರೊನಾಕ್ಕೆ ಬಲಿಯಾಗ್ತಾಯಿದ್ರು. ಕೊರೊನಾಕ್ಕೆ ಲಂಗು ಲಗಾಮು ಹಾಕಿದೆ. ಒಂದು ವೇಳೆ ಲಾಕ್ ಡೌನ್ ಮಾಡದೇ ಇದ್ದಲ್ಲಿ ಭಾರತದಲ್ಲಿ ಶೇ.41 ರಷ್ಟು ಹೆಚ್ಚಾಗುತ್ತಿತ್ತು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಲಾಕ್ ಡೌನ್ ಏ.14ಕ್ಕೆ ಲಾಕ್ ಡೌನ್ ಸಡಿಲಗೊಳ್ಳುತ್ತಿತ್ತು. ಆದರೆ ದೇಶದ ಜನರ ಆರೋಗ್ಯ ದೃಷ್ಟಿಯಿಂದ ಲಾಕ್ ಡೌನ್ ಅನಿಮಾರ್ಯವಾಗಿದೆ. ಆದರೆ ಇಟಲಿ, ಫ್ರಾನ್ಸ್, ಅಮೆರಿಕಾ, ಸ್ಪೇನ್ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಲೇ ಇವೆ.
ಇಟಲಿ, ಸ್ಪೇನ್, ಫ್ರಾನ್ಸ್ ಲಾಕ್ ಡೌನ್ ತಡವಾಗಿ ಜಾರಿಗೆ ತಂದಿವೆ. ಇದರಿಂದ ಇಲ್ಲಿ ಸೋಂಕು ಹರಡುವ ಪ್ರಾಮಾಣದಲ್ಲಿ ಇಳಿಕೆಯಾಗಿ, ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ. ಹೊಸ ಕೇಸ್ ಗಳ ಸಂಖ್ಯೆ ಕಡಿಮೆಯಾಗಿವೆ. ಏಪ್ರಿಲ್ ಹೊತ್ತಿಗೆ ಈ ರಾಷ್ಟ್ರಗಳಲ್ಲಿ ಕೊರೊನಾ ಹೊಸ ಪ್ರಕರಣಗಳು ಕಡಿಮೆಯಾಗಿವೆ. ಹೀಗೆ ಲಾಕ್ ಡೌನ್ ಮೂಲಕವೇ ಅನೇಕ ದೇಶಗಳು ಸಫಲವಾಗಿವೆ.

ಆದರೆ ಕೆಲ ದೇಶಗಳು ಲಾಕ್ ಡೌನನ್ನು ಗಾಳಿಗೆ ತೂರಿ ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.ಈ ಬಗ್ಗೆ ವಿಶ್ವ ಆರೊಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಯಾವೆಲ್ಲಾ ದೇಶಗಳು ಲಾಕ್ ಡೌನ್ ಪಾಲಿಸುತ್ತಿಲ್ಲ.?
ಅಮೆರಿಕಾದಲ್ಲಿಲ್ಲಾ ಏಕರೂಪದ ಲಾಕ್ ಡೌನ್ :
ಅಮೆರಿಕ ಕೊರೊನಾ ಸೋಂಕು ಹರಡಿರುವ ದೇಶಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 22 ರಾಜ್ಯಗಳಲ್ಲಿ ಮಾತ್ರ ಲಾಕ್ ಡೌನ್ ಮಾಡಲಾಗಿದೆ. ಇನ್ನೂ ಕೆಲವೆಡೆ ಸಾಮಾಜಿಕ ಅಂತರ ಹಾಗೂ ಗುಂಪು ಸೇರದಂತೆ ಸೂಚಿಲಾಗಿದೆ. ಇಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಆಗಿಲ್ಲ. ಹೀಗಾಗಿ ಇಲ್ಲಿ ಸಾವಿನ ಸಂಖ್ಯೆ ಹಾಗೂ ಸೋಂಕಿತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾಲೆ ಇದೆ.

ಸ್ಪೇನ್ ನಲ್ಲೂ ಲಾಕ್ ಡೌನ್ ಸಡಿಲಿಕೆ. ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದ ಕಾರಣ ಸ್ಪೇನ್ ನಲ್ಲಿ ಲಾಕ್ ಡೌನ್ ಸಡಿಲಿಕೆಗೊಂಡಿದೆ. ಇಟಲಿಯಲ್ಲಿಯೂ ಕೂಡ ಲಾಡ್ ಡೌನ್ ಬ್ರೇಕ್ ಮಾಡಲಾಗಿದೆ. ಇಟಲಿಯಲ್ಲಿ ಸ್ವಲ್ಪ ದಿನ ಮಾತ್ರ ಲಾಕ್ ಡೌನ್ ಮಾಡಲಾಗಿತ್ತು. ಸೋಂಕಿನ ಪ್ರಮಾಣದಲ್ಲಿ ಕಡಿಮೆಯಾದ ಪರಿಣಾಮ ಸಡಿಲಿಕೆಗೊಳ್ಳಲಾಗಿದೆ.
ಇರಾನ್ ನಲ್ಲಿ ಲಾಕ್ ಡೌನ್ ತೆರವುಗೊಳಿಸಲಾಗಿದೆ. ರಾಜಧಾನಿ ಹೊರತುಪಡಿಸಿ ಲಾಕ್ ಡೌನ್ ಸಡಿಲಗೊಂಡಿದೆ. ಹೀಗಾಗಿ ಲಾಕ್ ಡೌನ್ ಸಡಿಲಿಕೆಗೆ WHO ಕಳವಳ ವ್ಯಕ್ತಪಡಿಸಿದೆ. ಇದರಿಂದ ಸೋಂಕು ಅಧಿಕ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಡೀ ವಿಶ್ವದಲ್ಲಿ 18.5 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್ನಿಂದ 1.14 ಲಕ್ಷ ಮಂದಿ ಅಸುನೀಗಿದ್ದಾರೆ. ಹೀಗಾಗಿ ಕೊರೋನಾ ಅಟ್ಟಹಾಸ ಸದ್ಯದ ಮಟ್ಟಿಗಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರವಾಗುತ್ತಿಲ್ಲ.
ಒಟ್ಟಿನಲ್ಲಿ ಭಾರತದಲ್ಲಿ ಕೊರೊನಾ 3ನೇ ಹಂತ ತಲುಪಿಲ್ಲ. ಪರಿಸ್ಥಿತಿ ನಿಭಾಯಿಸಲು ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಲಾಕ್ ಡೌನನ್ನು ಏ30ರ ವರೆಗೆ ಮುಂದುವರೆಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಿದರೆ ಮಾತ್ರ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯಾಗಲು ಸಾಧ್ಯ.

