BYS cabinet : ಬೆಂಗಳೂರು ಪಾರುಪತ್ಯಕ್ಕಾಗಿ BSY ಸಂಪುಟದ ಮಂತ್ರಿಗಳಲ್ಲಿ ಗುದ್ದಾಟ..

ಬೆಂಗಳೂರಿನ ಪಾರುಪತ್ಯದ ವಿಚಾರವಾಗಿ ಬಿಜೆಪಿ ಮಂತ್ರಿಗಳಲ್ಲಿ ಮುಸುಕಿನ ಗುದ್ದಾಟ ಮುಂದುವರಿದಿದೆ. ಬೆಂಗಳೂರು ಅಭಿವೃದ್ಧಯನ್ನು ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಬಳಿಯೇ ಇರಿಸಿಕೊಂಡಿದ್ದರೂ, ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಹೆಚ್ಚಾಗಿ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ವಹಿಸುತ್ತಿರುವುದಕ್ಕೆ ರಾಜಧಾನಿಯ ಉಳಿದ ಮಂತ್ರಿಗಳಿಗೆ ಅಸಮಾಧಾನವಿದೆ.

28 ಶಾಸಕರನ್ನು ವಿಧಾನಸಭೆಗೆ ಆರಿಸಿ ಕಳುಹಿಸುವ ಬೆಂಗಳುರು ಹೊಣೆಗಾರಿಕೆ ಸಹಜವಾಗಿಯೇ ಆಯಕಟ್ಟಿನ ಸ್ವರೂಪದ್ದು. ಹೀಗಾಗಿ ಬೆಂಗಳುರಿನ ಲಗಾಮು ಹಿಡಿಯಲು ಎಲ್ಲರೂ ಹವಣಿಸುತ್ತಾರೆ. ಯಡಿಯೂರಪ್ಪ ಸಂಪುಟದಲ್ಲಿಯೂ ಅಂತಹುದೇ ಮುಸುಕಿನ ಗುದ್ದಾಟ ನಡೆಯುತ್ತಲೇ ಬಂದಿರುವುದು ಹೊಸ ವಿಚಾರವೇನಲ್ಲ.

ಬೆಂಗಳೂರಿನ ಅಭಿವೃದ್ಧಿ ಸಂಬಂಧ ಅದರಲ್ಲಿಯೂ ಹೊರವರ್ತುಲ ರಸ್ತೆ ನಿರ್ಮಾಣ ಸಂಬಂಧ ಉಪಸ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಕರೆದಿದ್ದ ಮಹತ್ವದ ಸಭೆಗೆ ಯಾರೂ ಹಾಜರಾಗಲಿಲ್ಲ.

ಆ ಮೂಲಕ ಪರೋಕ್ಷವಾಗಿ ಅಶ್ವತ್ಥ ನಾರಾಯಣ ಅವರಿಗೆ ಬೆಂಗಳುರು ಜವಾಬ್ದಾರಿ ಕೊಡುವುದಕ್ಕೆ ತಮ್ಮ ವಿರೋಧ ಇರುವುದನ್ನು ತೋರಿಸಿಕೊಟ್ಟಿದ್ದಾರೆ.

ಬೆಂಗಳುರುನ್ನು ಪ್ರತಿನಿಧಿಸುವ ಆರು ಶಾಸಕರು ಬಿಎಸ್ವೈ ಮಂತ್ರಿಮಂಡಲದಲ್ಲಿದ್ದಾರೆ ಎಂಬುದು ಗಮನಾರ್ಹ. ಆದರೆ ಇವರಲ್ಲಿ ಯಾರಿಗೇ ಉಸ್ತುವಾರಿ ಕೊಟ್ಟರೂ ಕಷ್ಟ ಎಂದರಿತೇ ಬಿಎಸ್ವೈ ಬೆಂಗಳೂರು ಅಭಿವೃದ್ಧಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಆದರೆ ಅವರ ಆಣತಿಯಂತೆಯೇ ಬೇರೆ ಯಾರಾದರೂ ಬೆಂಗಳುರಿನ ತಂಟೆಗೆ ಬಂದರೆ ಒಪ್ಪಲಾಗದು ಎಂಬ ಸಂದೇಶ ರವಾನಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights