CM vs DCM: ಪರಿಹಾರ ಘೋಷಣೆ – ತಾಳತಪ್ಪಿದ BSY, ಡಾ.ಅಶ್ವಥನಾರಾಯಣ ಹೇಳಿಕೆ..

ಇನ್ನು ಯಾವುದೇ ಸಮುದಾಯಕ್ಕೆ ಹೊಸದಾಗಿ ಪರಿಹಾರ ಘೋಷಣೆ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ, ಉಳಿದ ಸಮುದಾಯಗಳಿಗೆ ಅನ್ಯಾಯ ಆಗಲು ಬಿಡಲ್ಲ. ಅವರ ಕಷ್ಟಕ್ಕೆ ನೆರವು ಕೊಡಿಸಲು ಪ್ರಯತ್ನ ಪಡ್ತೇವೆ ಎಂದು ಡಿಸಿಎಂ ಡಾ.ಅಶ್ವಥನಾರಾಯಣ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಸರ್ಕಾರದಿಂದ ಇನ್ನು ಯಾವುದೇ ಸಮುದಾಯಕ್ಕೆ ಹೊಸದಾಗಿ ಪರಿಹಾರ ಘೋಷಣೆ ಮಾಡಲ್ಲ. ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಸಮುದಾಯಗಳಿಗೆ ಪರಿಹಾರ ಘೋಷಿಸಿದೆ. ಈಗಾಗಲೇ ಘೋಷಿಸಿದ ಪರಿಹಾರಗಳನ್ನು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇವುಗಳನ್ನು ಹಂತಹಂತವಾಗಿ ಬಿಡುಗಡೆ ಮಾಡ್ತೇವೆ ಎಂದು ಸ್ಪಷ್ಟ ಪಡಿಸಿದರು.
ಈ ಹೇಳಿಕೆ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಅವರನ್ನು, ಸರಕಾರ ಈಗಾಗಲೇ ಘೋಷಿಸಿದ ಪರಿಹಾರಗಳು ಜನತೆಗೆ ಇನ್ನೂ ತಲುಪದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು.

ಆಗ, ಕೆಲವು ಸಮುದಾಯಗಳಿಗೆ ಸರಕಾರ ಪರಿಹಾರ ಘೋಷಿಸಿದೆ. ಈ ಸಮುದಾಯಗಳಿಗೆ ಆದಷ್ಟು ಬೇಗ ಪರಿಹಾರ ತಲುಪಿಸುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಲಿ. ಅಧಿಕಾರಿಗಳಿಗೆ ನಾನು ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ ಅಂತ ಒತ್ತಾಯಿಸುತ್ತೇನೆ. ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಯವರ ಜೊತೆ ನಾನು ಈ‌ ಕುರಿತು ಚರ್ಚಿಸಿದ್ದೇನೆ ಎಂದರು.

ಮುಂದುವರಿದು, ಉಳಿದ ಸಮುದಾಯಗಳೂ ಸಹ ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ ಮಾಡಿವೆ. ಇದನ್ನು ಸಹ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರ್ತೇನೆ. ಯಾವುದೇ ಸಮುದಾಯಗಳಿಗೂ ಅನ್ಯಾಯ ಆಗಲು ಬಿಡಲ್ಲ. ಅವರ ಕಷ್ಟಕ್ಕೆ ನೆರವು ಕೊಡಿಸಲು ಪ್ರಯತ್ನ ಪಡ್ತೇವೆ ಎಂದರು.

ಕೆಲವು ವಲಯಗಳಿಂದ ಹೆಚ್ಚುವರಿ ಸೆಸ್ ಸಂಗ್ರಹ ಮಾಡುವ ಮೂಲಕ ಕೈಬಿಟ್ಟ ಸಮಯದಾಯಗಳಿಗೆ ಪರಿಹಾರ ಕೊಡಿಸಲು ಪ್ರಯತ್ನ ಪಡ್ತೇವೆ. ಸೆಸ್ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತಗೋತೇವೆ. ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights