Corona virus : ರಾಜ್ಯದಲ್ಲಿ ಬಾರ್ ಬಂದ್, ಹೋಟೆಲ್ಗಳಲ್ಲಿ ಪಾರ್ಸಲ್ ಮಾತ್ರ: BSY…
ಕೋರೋನಾ ಸೋಂಕು ವಿರುದ್ಧ ಹೋರಾಟದ ಅಂಗವಾಗಿ 21ರಿಂದ 31ರವರೆಗೆ ರಾಜ್ಯದಲ್ಲಿ ಎಲ್ಲ ಬಾರ್ ಮತ್ತು ರೆಸ್ಟೊರೆಂಟುಗಳನ್ನು ಮುಚ್ಚಲು ಸರಕಾರ ನಿರ್ಧರಿಸಿದೆ. ಹೋಟೆಲುಗಳು ಕೇವಲ ಪಾರ್ಸೆಲ್ ಸೇವೆ ಮಾತ್ರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿಈಗಾಗಲೇ ಕ್ಲಬ್ಬು, ಪಬ್ಬುಗಳನ್ನು ಮುಚ್ಚಲಾಗಿದೆ. ಹೆಚ್ಚಿನ ಜನಸಂದಸಣಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಅವರು ಶೂಕ್ರವಾರ ಹೇಳಿದರು.
ಶುಕ್ರವಾರ ಕೊರೋನಾ ಕದನದ ಭಾಗವಾಗಿ ಪಿಎಂ ಮೋದಿ ಜೊತೆ ವಿಡಿಯೋ ಸಭೆ ನಡೆಸಿದ ಬಳಿಕ ಯಡಿಯೂರಪ್ಪ ಸರಕಾರದ ಹೊಸ ನಿರ್ಧಾರ ಘೋಷಿಸಿದರು.
ಮೋದಿ ಅವರು ವಿವಿಧ ರಾಜ್ಯಗಳ ಸಿಎಂ ಜೊತೆ ಕೊರೋನಾ ಬಗ್ಗೆ ಪರಿಸ್ಥಿತಿ ವಿಚಾರಿಸಿದರು. ಈ ವೇಳೆ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.
ಇದೆಲ್ಲದರ ನಡುವೆ ಶುಕ್ರವಾರ ರಾಜ್ಯದಲ್ಲಿ ಯಾವುದೇ ಹೊಸ ಸೋಂಕು ಪ್ರಕರಣಗಳು ದಾಖಲಾಗಿಲ್ಲ. ಅಲ್ಲದೇ ಓರ್ವ ವ್ಯಕ್ತಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಹೊರಬಂದಿದ್ದಾರೆ.

