Cricket : ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಕಲಿಯಬೇಕಾಗುತ್ತದೆ -ಕೆವಿನ್ ಪೀಟರ್ಸನ್..

ಕೊರೊನಾ ವೈರಸ್ ‘ಕೋವಿಡ್ -19’ ಲಸಿಕೆ ದೊರೆಯುವವರೆಗೂ ಕ್ರಿಕೆಟಿಗರು ಖಾಲಿ ಕ್ರೀಡಾಂಗಣದಲ್ಲಿ ಆಡಲು ಕಲಿಯಬೇಕಾಗುತ್ತದೆ ಎಂದು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಕೊರೊನಾದ ಕಾರಣದಿಂದಾಗಿ, ವಿಶ್ವದಾದ್ಯಂತ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿವೆ ಮತ್ತು ಕ್ರೀಡಾಕೂಟ ಮತ್ತೆ ಆರಂಭವಾಗುವ ಸೂಚನೆಗಳು ಕಾಣುತ್ತಿಲ್ಲ.

“ನಮ್ಮ ಅಭಿಮಾನಿಗಳಾದ ಸಾರ್ವಜನಿಕರಿಗೆ ಹೆಚ್ಚಿನ ಮನೋಸ್ಥೈರ್ಯ ಇರಬೇಕು. ಈ ಸಮಯದಲ್ಲಿ, ಅಭಿಮಾನಿಗಳ ಸ್ಥೈರ್ಯ ಕುಸಿಯಬಾರದು. ಕ್ರೀಡೆ ಜನರಿಗೆ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರ ಸ್ಥೈರ್ಯವನ್ನು ಹೆಚ್ಚಿಸುತ್ತದೆ” ” ಎಂದು ಪೀಟರ್ಸನ್ ಹೇಳಿದರು.

“ಈ ಪರಿಸ್ಥಿತಿ ಅವಲೋಕಿಸಿದ ಮೇಲೆ ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿಯುವವರೆಗೂ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಆಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

“ಆಟಗಾರರು ಇಂತಹ ಸಂದರ್ಭಗಳಿಗೆ ಒಗ್ಗಿಕೊಳ್ಳಬೇಕು. ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಇಲ್ಲದಿದ್ದರೆ ಏನಾಗುತ್ತದೆ. ಜನರು ತಮ್ಮ ಮನೆಗಳಲ್ಲಿ ಪಂದ್ಯಗಳನ್ನು ಟಿವಿ ಮೂಲಕ ವೀಕ್ಷಿಸಬಹುದು. ಅನೇಕ ಆಟಗಾರರು ತಮ್ಮ ಆಟದ ಉತ್ತುಂಗದಲ್ಲಿದ್ದು, ಅವರು ತಮ್ಮ ಆಟ ಮುಂದುವರಿಸಬೇಕಿದೆ” ಎಂದು ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸನ್ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights