Cricket : Lock down ನಲ್ಲಿ MS ಧೋನಿ ನೆಚ್ಚಿನ ನಾಯಿಗೆ ಫೀಲ್ಡಿಂಗ್ ಅಭ್ಯಾಸ, video viral..

ಭಾರತ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಲಾಕ್ ಡೌನ್ ಸಮಯದಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದು, ತಮ್ಮ ನೆಚ್ಚಿನ ನಾಯಿಗೆ ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಕೊರೊನಾ ವೈರಸ್ ದೇಶಾದ್ಯಂತ ಲಾಕ್ ಡೌನ್ ಆಗಿದೆ. ಇದರಿಂದ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಈ ಸಮಯದಲ್ಲಿ ಹೆಚ್ಚಿನ ಆಟಗಾರರು ತಮ್ಮ ಮನೆಗಳಲ್ಲಿ ಅಭ್ಯಾಸ ಅಥವಾ ಇತರ ಚಟುವಟಿಕೆಗಳತ್ತ ಗಮನ ಹರಿಸುತ್ತಾರೆ. ಕೆಲವು ಆಟಗಾರರು ಈ ದಿನಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

 

ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಇನ್ ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಚೆನ್ನೈ ತಂಡದ ನಾಯಕ ಧೋನಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಮಗಳು ಜೀವ ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಜೀವ ಚೆಂಡನ್ನು ನಾಯಿಗೆ ಎಸೆಯುತ್ತಿದ್ದಾರೆ. ಈ ದೃಶ್ಯ ಎಲ್ಲರ ಗಮನ ಸೆಳೆದಿದೆ.

ಈ ಸಮಯದಲ್ಲಿ, ಧೋನಿ ನಾಯಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ನಾಯಿಗೆ ಕ್ಯಾಚಿಂಗ್ ಅಭ್ಯಾಸ ಮಾಡಿಸುತ್ತಿರುವ ಮಾಹಿ, ನಾಯಿಗೆ ಮೇಲೆ ಎಸೆದರು. ನಾಯಿ ಚೆಂಡನ್ನು ಹಿಡಿಯುವ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ ಬಳಿಕ ಧೋನಿ ಮೈದಾನದಿಂದ ಹೊರಗುಳಿದಿರುವುದು ಗಮನಾರ್ಹ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights