Cricket : ಕುಣಿಕೆ ಸಡಿಲಿಸಿದ ಕರ್ನಾಟಕ, ಮಜುಂದಾರ್ ಶತಕದ ಆಸರೆ ಬಚಾವಾದ ಬಂಗಾಳ..
ಹಾಕಿದ ಕುಣಿಕೆಯನ್ನು ಸಡಿಲಿಸಿದ ಕರ್ನಾಟಕ ರಣಜಿ ಪ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ತಕ್ಕ ಶಾಸ್ತಿ ಅನುಭವಿಸುವಂತಾಗಿದೆ. ಹೋರಾಟದ ಶತಕ ದಾಖಲಿಸಿದ ಅನುಸ್ತೂಪ ಮಜುಂದಾರ್ ಬಮಗಾಳದ ಹೀರೋ ಎನಿಸಿದ್ದಾರೆ.

ಈಡನ್ ಮೈದಾನದಲ್ಲಿ ಶನಿವಾರ ಆರಂಭವಾದ ರಣಜಿ ಸೆಮಿಫೈನಲ್ ಪಂದ್ಯದ ಮೊದಲ ದಿನಾಟದ ಅಂತ್ಯಕ್ಕೆ ಪಶ್ಚಿಮ ಬಂಗಾಳ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿದೆ. ಒಂದು ಹಂತದಲ್ಲಿ ಬಂಗಾಳ ಕೇವಲ 67 ರನ್ನುಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು
ಟಾಸ್ ಗೆದ್ದು ಬಂಗಾಳಕ್ಕೆ ಮೊದಲ ವೀಳ್ಯ ನೀಡಿದ ಕರ್ನಾಟಕದ ನಾಯಕ ಕರುಣ್ ನಾಯರ್ ಆರಂಭದಲ್ಲಿ ಉತ್ತರ ಕುಯಿಲನ್ನೇ ಪಡೆದರು. ವೇಗದ ಬೌಲರುಗಳ ಅಟ್ಟಹಾಸಕ್ಕೆ ಬಂಗಾಳದ ಅಗ್ರಪಂಕ್ತಿಯ ಆಟಗಾರರು ನಲುಗಿಹೋದರು.

ಆದರೆ, ಕೋಟೆ ಹೋದರೂ ಕೊಳ್ಳ ಬಿಡೆ ಎಂಬಂತೆ ತಳಕಚ್ಚಿ ಹೋರಾಡಿದ ಮಜುಂದಾರ್ ಆತಿಥೇಯರನ್ನು ಅಲ್ಪ ಮೊತ್ತಕ್ಕೆ ಎಗರಿಸಿಬಿಡುವ ಕರ್ನಾಟಕದ ಮಹದಾಸೆಗೆ ತಣ್ಣಿರು ಎರಚಿದರು.
ಮೊದಲು ಏ:ನೇ ವಿಕೆಟ್ಗೆ ಶಾಬಾಜ್ ಜೊತೆ 72 ರನ್ ಸೇರಿಸಿದ ಮಜುಂದಾರ ಬಳಿಕ ಎಂಟನೇ ವಿಕೆಟ್ಗೆ ಆಕಾಶ್ ಜೊತೆ 103 ರನ್ ಜೊತೆಯಾಟ ನಿಭಾಯಿಸಿ ದಿನದ ಕೊನೆಗೆ 120 ರನ್ ಮಾಡಿ ಅಜೇರಾಗುಳಿದರು.
ಕರ್ನಾಟಕದ ಪರ ಅತ್ಯುತ್ತಮ ಫಾರಂನಲ್ಲಿರುವ ವೇಗಿ ಅಭಿಮನ್ಯು ಮಿಥೂನ್ ಮೂರು ವಿಕೆಟ್ ಪಡೆದರೇ, ಕೃಷ್ಣ, ಮೋರೆ ಮತ್ತು ಗೌತಮ್ ತಲಾ ಎರಡು ವಿಕೆಟ್ ಕಿತ್ತರು.

