Cricket : ಶ್ರೇಷ್ಠ ನಾಯಕನಾರು? ಧೋನಿನಾ ಇಲ್ಲಾ ಕುಂಬ್ಳೆನಾ, ಗೌತಮ್ ಆಯ್ಕೆ ಯಾರು…

ಕ್ರಿಕೆಟ್ ಅಂದ್ರೆ ಹುಚ್ಚುರ ತರ ಆಡುವ ದೇಶದಲ್ಲಿ ಶ್ರೇಷ್ಠ ನಾಯಕನಾರು ಅನ್ನುವ ಚರ್ಚೆ ಯಾವಾಗಲು ಇದ್ದದ್ದೆ. ಯುವರಾಜ್ ಪ್ರಕಾರ ದಾದಾ ಸೌರವ್ ಗಂಗೂಲಿ, ಮಾಜಿ ಆರಂಭ ಆಟಗಾರ ಗೌತಮ್ ಗಂಭೀರ್‍ ಪ್ರಕಾರ ತೀರಾ ಅಲ್ಪಾವಧಿಗೆ ಕ್ರಿಕಟ್ ತಂಡದ ನಾಯಕತ್ವ ವಹಿಸಿದ್ದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ದೇಶ ಕಂಡ ಬೆಸ್ಟ್ ಕ್ಯಾಪ್ಟನ್.

ಇತ್ತೀಚಿನ ದಶಕಗಳಲ್ಲಿ ಅಂಕಿ ಸಂಖ್ಯೆ ಮತ್ತು ಗೆಲುವನ ಲೆಕ್ಕಾಚಾರದ ಆಧಾರದಲ್ಲಿ ದಾದಾ (ಸೌರವ್ ಗಂಗೂಲಿ) ಮತ್ತು ಮಹೇಂದ್ರ ಧೋನಿ ಅತ್ಯುತ್ತಮ ನಾಯಕರೆನಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅನಿಲ್ ಕುಂಬ್ಳೆ ನಾನು ಕಂಡ ಬೆಸ್ಟ್ ಕ್ಯಾಪ್ಟನ್ ಎಂದು ಸದ್ಯ ಬಿಜೆಪಿಯ ಟಿಕೆಟ್ ಮೇಲೆ ಆರಿಸಿಬಂದು ಸಂಸತ್ ಸದಸ್ಯರಾಗಿರುವ ಗೌತಮ್ ಗಂಭಿರ್‍ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಎಲ್ಲ ಮಾದರಿಯಗಳಲ್ಲಿ ದೇಶವನ್ನು ನಂ.1 ಮಾಡಿದ್ದಾರೆ ಹಾಗಾಗಿ ಅವರು ಶ್ರೇಷ್ಠರ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಕುಂಬ್ಳೆ ಕೈಕೆಳಗೆ ಆಡಿದ ಮೇಲೆ ಅವರೇ ಬೆಸ್ಟ್ ಎನಿಸುತ್ತರೆ. ದೇಶ ಕಂಡ ಅದ್ವಿತೀಯ ಸ್ಪಿನ್ ಬೌಲರ್‍ ಅನಿಲ್ ಕುಂಬ್ಳೆ ಕೇವಲ 14 ತಿಂಗಳು ತಂಡದ ನಾಯಕತ್ವದ ಹೊಣೆಯನ್ನು ಹೊತ್ತಿದ್ದರು.

ಒಂದು ವೇಳೆ ಅವರೇನಾದರೂ ದೀರ್ಘ ಸಮಯಕ್ಕೆ ನಾಯಕರಾಗಿ ಮುಂದುವರಿದಿದ್ದರೇ ಭಾರತದ ಯಶಸ್ಸಿನ ಗ್ರಾಫು ಬೇರೆಯದ್ದೇ ಇರುತ್ತಿತ್ತು ಎಂಬುದು ಗಂಭೀರ್‍ ಅಭಿಪ್ರಾಯ. 2007 ವಿಶ್ವಕಪ್ ಹೀನಾಯ ಸೋಲಿನ ನಂತರ ರಾಹುಲ್ ದ್ರಾವಿಡ್ ನಾಯಕತ್ವ ತ್ಯಜಿಸಿದಾಗ ಅನಿಲ್ ಕುಂಬ್ಳೆ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು..

ನಿವೃತ್ತಿಗೆ ಮುನ್ನ ಅನಿಲ್ ಕುಂಬೆ 14 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು, ಈ ಪೈಕಿ ಮೂರರಲ್ಲಿ ಗೆದ್ದು ಆರು ಸೋತು ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರು. ಆದರೆ ನಾಯಕರಾಗಿ ಅವರು ತೋರಿದ ಕೆಚ್ಚು, ಧೀರತ್ವ ಅದರಲ್ಲಿಯೂ ಕುಖ್ಯಾತ ಮಂಕಿಗೇಟ್ ಸಂದರ್ಭದಲ್ಲಿ ಅವರು ತೋರಿದ ಸ್ಥರ್ಯ ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿತ್ತು.

ಕುಂಬ್ಳೆ ನಿವೃತ್ತರಾಗುವ ವೇಳೆ ಭಾರತ ಟೆಸ್ಟ ಕ್ರಿಕೆಟ್‌ನಲ್ಲಿ ನಂ.1 ದೇಶವಾಗಲು ಏನು ಮಾಡಬೇಕು ಎಂಬ ಮಾರ್ಗಸೂಚಿ ಹಾಕಿದ್ದರು, ಅದರಂತೆಯೇ ಸಾಗಿದ ಧೋನಿ ಪಡೆ ಆ ಗುರಿಯನ್ನು ಸಾಧಿಸಿ ತೋರಿಸಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights