Delhi election : AAP 62, BJP 08, ಕಾಂಗ್ರೆಸ್ 00: ಇದು ದಿಲ್ಲಿ ಲೆಕ್ಕ…..

ಬಿಜೆಪಿಯ ಸರ್ವಪ್ರಯತ್ನದ ನಡುವೆಯೂ ಸತತ ಮೂರನೇ ಬಾರಿಗೆ ದಿಲ್ಲಿ ಜನರ ಮನ ಮತ್ತು ಮತ ಗೆಲ್ಲುವಲ್ಲಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಯಶಸ್ಸು ಸಾಧಿಸಿದೆ. ದಿಲ್ಲಿ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಆಪ್‌ ಜಯಭೇರಿ ಬಾರಿಸಿದೆ.


70 ಸ್ಥಾನಗಳಿಗೆ ಶನಿವಾರ ನಡೆದ ಮತದಾನದಲ್ಲಿ ಅರವಿಂದ ಕೇಜ್ರಿವಾಲರ ಆಪ್‌ಗೆ ಜನ 62 ಸೀಟು (ಮುನ್ನಡೆ) ನೀಡಿ ಮತ್ತೈದು ವರ್ಷಗಳಿಗೆ ಅಧಿಕಾರ ನಡೆಸಲು ಅನುಮತಿ ನೀಡಿದ್ದಾರೆ. ಆಪ್‌ ವಿರುದ್ಧ ತೊಡೆ ತಟ್ಟಿ, ತೋಳೆರಿಸಿ ನಿಂತಿದ್ದ ಬಿಜೆಪಿಗೆ ಮಾತ್ರ 8 ಸೀಟು ನೀಡಿ ಗರ್ವಭಂಗ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ.

2015ರ ಚುನಾವಣೆಯಲ್ಲಿ ದಿಲ್ಲಿ ಜನ ಆಪ್‌ಗೆ 67 ಸ್ಥಾನ ನೀಡಿ ಗೆಲ್ಲಿಸಿದ್ದರು. ಆಗ ಬಿಜೆಪಿಗೆ ಮೂರು ಸೀಟು ಬಂದಿತ್ತು. ಆದರೆ ಈ ಬಾರಿ ಕೇಜ್ರಿವಾಲರಿಗೆ ಕಡಿವಾಣ ಹಾಕಲು ಬಿಜೆಪಿ ಏನೆಲ್ಲ ಪ್ರಯತ್ನ ನಡೆಸಿದ್ದರೂ ಅದು ಜನಮನ್ನಣೆ ಗಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಆಪ್‌ ವಿರುದ್ಧ ಜನಾಭಿಪ್ರಾಯ ಕ್ರೋಢೀಕರಿಸಲು ಬಿಜೆಪಿ ತನ್ನ 300 ಸಂಸದರನ್ನು ಪ್ರಚಾರಕ್ಕಾಗಿ ರೋಡಿಗಿಳಿಸಿತ್ತು. ಅಲ್ಲದೇ ಖುದ್ದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪ್ರಖರ ಪ್ರಚಾರ ನಡೆಸಿದ್ದರು. ಆದರೆ ದಿಲ್ಲಿ ಜನ ಅದ್ಯಾವುದಕ್ಕೂ ಮಣೆ ಹಾಕಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights