Fact Check: ಕೊರೊನಾ ನಿಯಂತ್ರಣಕ್ಕೆ ಅಜೀಮ್ ಪ್ರೇಮ್ಜಿ 50,000 ಕೋಟಿ ರೂ ಕೊಟ್ಟಿದ್ದಾರಾ?

ಫೇಕ್‌ ನ್ಯೂಸ್‌ ಏನು:ಮಾರ್ಚ್ 27 ರಂದು ಇಂಡಿಯಾ ಟಿವಿಯ ಮೀನಾಕ್ಷಿ ಜೋಶಿ ಅವರು “ಅಜೀಮ್ ಪ್ರೇಮ್ಜಿ 50,000 ಕೋಟಿ ದೇಣಿಗೆ ನೀಡಿದ್ದಾರೆ. ಅವರು ನಿಜವಾಗಿಯೂ Golden Hearted ಮನುಷ್ಯ” ಎಂದು ಟ್ವೀಟ್‌ ಮಾಡಿದ್ದಾರೆ. ಆಕೆಯ ಟ್ವೀಟ್‌ ಪ್ರಕಾರ, ಕರೋನ ವೈರಸ್ ಸಾಂಕ್ರಾಮಿಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಲೋಕೋಪಕಾರಿ ಮತ್ತು ಕೈಗಾರಿಕೋದ್ಯಮಿ, ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷ ಅಜೀಮ್ ಪ್ರೇಮ್‌ಜಿ ಅವರು ಒಟ್ಟು 50,000 ಕೋಟಿ ರೂ. ನೀಡಿದ್ದಾರೆ.

ಇದು ಕೇವಲ ಜೋಶಿಯವರು ಒಬ್ಬರು ಮಾತ್ರ ಮಾಡಿರುವ ಟ್ವೀಟ್‌ ಅಲ್ಲ. ಹಲವಾರು ಪ್ರಮುಖ ಸಾಮಾಜಿಕ ಮಾಧ್ಯಮ ಬಳಕೆದಾರರಾದ – ಶಿಕ್ಷಣ ತಜ್ಞ ಅಶೋಕ್ ಸ್ವೈನ್, ಆಭರಣ ಡಿಸೈನರ್ ಫರಾ ಖಾನ್, ಅಂಕಣಕಾರ ಅಮೃತಾ ಭಿಂದರ್, ಮಾಜಿ ಕಾಂಗ್ರೆಸ್ ಸದಸ್ಯ ಸಲ್ಮಾನ್ ನಿಜಾಮಿ, ಟೀಮ್ ವರ್ಕ್‌ನ ಎಂಡಿ ಸಂಜಯ್ ಕೆ ರಾಯ್, ಪತ್ರಕರ್ತ ಶಿವಮ್ ವಿಜ್, ಪತ್ರಕರ್ತ ಫಾಯೆ ಡಿಸೌಜಾ ಮತ್ತು ಆರ್ಜೆ ಸಯೆಮಾ ಕೂಡ ಪ್ರೇಮ್‌ಜಿಯವರ ಲೋಕೋಪಕಾರಿ ಕಾರ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವರಲ್ಲಿ ಹಲವರು ಎನ್‌ಡಿಟಿವಿಯ 2019ರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಈ ಕುರಿತು ಬಹು ಮಾಧ್ಯಮಗಳಲ್ಲಿ ಲೇಖನಗಳನ್ನೂ ಬರೆಯಲಾಗಿದೆ. ಅವುಗಳಲ್ಲಿ – HW English, ಡೈನಿಕ್ ಜಾಗ್ರನ್ ಅವರ ಪ್ರಸ್ತುತ ವ್ಯವಹಾರಗಳ ಪೋರ್ಟಲ್ “Jagran Josh”, ಇಂಡಿಯನ್ ಎಕ್ಸ್‌ಪ್ರೆಸ್‌ನ Jansatta, Newsd  ಮತ್ತು Sentinel Assam  ನಲ್ಲಿ ಲೇಖನಗಳನ್ನು ಬರೆದಿದ್ದಾರೆ.

ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಇತರ ಹಲವಾರು ವ್ಯಕ್ತಿಗಳು ಈ ಪೋಸ್ಟನ್ನು ಶೇರ್‌ ಮಾಡಿದ್ದಾರೆ. ಇದು ಕನ್ನಡದಲ್ಲಿಯೂಈ ಕುರಿತು ಟ್ವೀಟ್‌ ಮಾಡಲಾಗಿದೆ ಕಳುಹಿಸಿದ್ದಾರೆ. 52,000 ಸಾವಿರ ಕೋಟಿಗಳ ಬೃಹತ್ ಮೊತ್ತ ದ ಕೊರೋನ ಧನ ಸಹಾಯ ಪ್ರಕಟಿಸಿದ ಮುಸ್ಲಿಂ ಉಧ್ಯಮಿ ಅರಿಂ * ಪ್ರೇಮ್ ಜೀ ಇಷ್ಟು ಬೃಹತ್ ಮೊತ್ತ ಧಾನ ಮಾಡುತ್ತಿರುವುದು ಭಾರತದ ಇತಿಹಾಸದಲ್ಲೇ ಇದೇ ಮೊದಲು.” ಎಂದು ಕನ್ನಡದಲ್ಲಿ ಟ್ವೀಟ್‌ ಮತ್ತು ಪೋಸ್ಟರ್‌ ಹರಿದಾಡಿದೆ.

 

 

ಫ್ಯಾಕ್ಟ್‌ ಚೆಕ್‌ನಿಂದ ಕಂಡ ಸತ್ಯಾಂಶ ಇದು:


ಅದು ಹಳೆಯ ಸುದ್ದಿ

ಇತ್ತೀಚೆಗಿನ ದಿನಗಳಲ್ಲಿ ಹರಿದಾಡುತ್ತಿರುವ ಸುದ್ದಿ 2019ರ ಮಾರ್ಚ್‌ನಲ್ಲಿ ಪ್ರಕಟವಾಗಿರುವ ಸುದ್ದಿಎಂದು ತಿಳಿದುಬಂದಿದೆ. ಪ್ರೇಮ್‌ಜಿ 50,000 ಕೋಟಿ ರೂ. ದೇಣಿಗೆ ನೀಡಿರುವುದು ಸತ್ಯ. ಆದರೆ, ಈ ಸುದ್ದಿ ಒಂದು ವರ್ಷ ಹಳೆಯದು.

ಅಂಕಿಅಂಶಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ 50,000 ಮತ್ತು 52,000 ಕೋಟಿ ರೂ. ಕುರಿತು  ಎನ್‌ಡಿ ಟಿವಿ ಸೇರಿದಂತೆ ಹಲವಾರು ಲೇಖನಗಳನ್ನು 2019ರ ಮಾರ್ಚ್‌ನಲ್ಲಿ ಪ್ರಕಟಿಸಿವೆ ಎಂಬುದು ತಿಳಿದುಬಂದಿದೆ. “ವಿಪ್ರೋ ಲಿಮಿಟೆಡ್‌ನ ಬಿಲಿಯನೇರ್ ಅಧ್ಯಕ್ಷರು ತಮ್ಮ ಕಂಪನಿಯಲ್ಲಿ ಶೇ 34 ರಷ್ಟು ಷೇರುಗಳನ್ನು, ಅಂದರೆ, 7.5 ಬಿಲಿಯನ್ ಡಾಲರ್ ಅಥವಾ 52,750 ಕೋಟಿ ಮೌಲ್ಯದ ಹಣವನ್ನು ನೀಡುವ ಮೂಲಕ ಅವರು ಈಗಾಗಲೇ ದೇಣಿಗೆ ನೀಡಿದ್ದಾರೆ ಎಂದು ಮಾರ್ಚ್ 15, 2019 ರಂದು ಪ್ರಕಟವಾದ ವರದಿಯನ್ನು ಪ್ರಕಟಿಸಿವೆ.

ವರದಿಯ ಪ್ರಕಾರ, ಕಳೆದ ವರ್ಷ ಈ ದೇಣಿಗೆ ಅವರ ಲೋಕೋಪಕಾರಿ ದೇಣಿಗೆಗಳ ಒಟ್ಟು ಮೌಲ್ಯವನ್ನು 14,500 ಕೋಟಿ ರೂ. “ಅಜಿಮ್ ಪ್ರೇಮ್‌ಜಿ ಫೌಂಡೇಶನ್‌ನ ಕ್ಷೇತ್ರಕಾರ್ಯವು ಸಾರ್ವಜನಿಕ (ಸರ್ಕಾರಿ) ಶಾಲಾ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಸುಧಾರಣೆಗೆ ತರುವ ಉದ್ದೇಶವನ್ನು ಹೊಂದಿದೆ. ಭಾರತದ ಕೆಲವು ಅನಾನುಕೂಲಕರ ಭಾಗಗಳಲ್ಲಿ, ವಿವಿಧ ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ, ಇವರ ಫೌಂಡೇ‍ಷನ್ ಕರ್ನಾಟಕ, ಉತ್ತರಾಖಂಡ, ರಾಜಸ್ಥಾನ, ಛತ್ತೀಸ್‌ಘಡ, ಪುದುಚೇರಿ, ತೆಲಂಗಾಣ, ಮತ್ತು ಮಧ್ಯಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಆದ್ದರಿಂದ, ಅಜೀಮ್ ಪ್ರೇಮ್‌ಜಿ ಅವರು ನೀಡಿರುವ ದೇಣಿಗೆ ಒಂದು ವರ್ಷದ ಹಳೆಯ ಸುದ್ದಿಯಾಗಿದೆ. ಅದನ್ನು ಇತ್ತಿಚೆಗೆ, ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ  ರವಾನಿಸಲಾಗಿದೆ. ಹಲವಾರು ಪ್ರಮುಖ ಸಾಮಾಜಿಕ ಮಾಧ್ಯಮ ಬಳಕೆದಾರರು, ಪತ್ರಕರ್ತರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಯನ್ನು ಯಾವುದೇ ಪುರಾವೆಯೂ ಇಲ್ಲದೆ ಪ್ರಸಾರ ಮಾಡಲು ಮುಗಿಬಿದ್ದಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights