FactCheck: ಪತ್ರಿಕೋದ್ಯಮವನ್ನು ಬಿಜೆಪಿ ಮುಖಾವಣಿಯನ್ನಾಗಿಸಿದೆ ಎಂಬ ವಿಶ್ವೇಶ್ವರಭಟ್ಟರ ಪೋಸ್ಟ್ ಫೇಕ್‌!

ವಿಶ್ವವಾಣಿ ದಿನ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟ ಅವರು ರಾಜ್ಯಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಅದಕ್ಕಾಗಿ ಅವರ ಪತ್ರಿಕೋದ್ಯಮವನ್ನು ಬಿಜೆಪಿಯ ಮುಖವಾಣಿ ಅಗಿಸಿದ್ದೆ. ಅದರೆ, ಬಿಜೆಪಿಯವರು ಅವರ ವಿಶ್ವಾಸಕ್ಕೆ ಮೋಸ ಮಾಡಿ, ಟಿಕೆಟ್‌ ಕೊಡಲು ನಿರಾಕರಿಸಿದ್ದಾರೆ ಎಂದು ಸ್ವತಃ ವಿಶ್ವೇಶ್ವರ ಭಟ್ಟ ಅವರೇ ಟ್ವೀಟ್‌ ಮಾಡಿರುವುದಾಗಿ ಒಂದು ಸ್ಕ್ರೀನ್‌ ಶಾಟ್‌ ಹರಿದಾಡುತ್ತಿದೆ.

ಆ ಸ್ಕ್ರೀನ್‌ ಶಾಟ್‌ಗಳನ್ನು ಹಲವಾರು ಜಾಲತಾಣಿಗರು ಅಂತೂ ಭಟ್ಟರೆ ತಮ್ಮ ಬಿಜೆಪಿ ಪರವಾದ ಭಟ್ಟಂಗಿತನವನ್ನು ಒಪ್ಪಿಕೊಂಡಿದ್ದಾರೆ ಎಂದು ಟ್ರೋಲ್‌ ಮಾಡಿದ್ದರು.

Fack Check:

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಶ್ವೇಶ್ವರ ಭಟ್ಟರ ಸ್ಕ್ರೀನ್‌ ಶಾಟ್‌ನ ಪೋಸ್ಟ್‌ ವಿಶ್ವೇಶ್ವರ ಭಟ್ಟರ ಟ್ವಿಟರ್‌ ಖಾತೆಯದ್ದಲ್ಲ. ವಿಶ್ವೇಶ್ವರ ಭಟ್ಟರ ಹೆಸರಿನಲ್ಲಿ ಬೇರೆ ಯಾರೋ ಮಾಡಿರುವ ಫೇಕ್‌ ಅಕೌಂಟ್‌ನಿಂದ ಟ್ವೀಟ್‌ ಮಾಡಲಾಗಿದ್ದು, ಆ ಅಕೌಂಟ್‌ನ ಸ್ಕ್ರೀನ್ ಶಾಟ್‌ ಎಲ್ಲೆಡೆ ಹರಿದಾಡಿದೆ.

ಈಗ ಟ್ರೋಲ್‌ ಆಗುತ್ತಿರುವ ಸ್ಕ್ರೀನ್‌ ಶಾಟ್‌ನಲ್ಲಿರುವ ಖಾತೆಯ ಟ್ವಿಟರ್‌ ಐಡಿ @abhiman72841083 ಎಂದಿದೆ. ಆದರೆ, ವಿಶ್ವೇಶ್ವರ ಭಟ್ಟರ ಅಧೀಕೃತ ಖಾತೆಯ ಐಡಿಯು @VishweshwarBhat ಎಂದು ಇದೆ. ಹಾಗಾಗಿ ಟ್ರೋಲ್‌ ಆಗಿರುವ ಪೋಸ್ಟ್‌ ಫೇಕ್‌ ಅಕೌಂಟಿನದ್ದಾಗಿದೆ. ಈ ಬಗ್ಗೆ ವಿಶ್ವೇಶ್ವರಭಟ್ಟರೇ ಟ್ವೀಟಿಸಿ ಖಾತ್ರಿಪಡಿಸಿದ್ದಾರೆ.

ವಿಶ್ವೇಶ್ವರ ಭಟ್ಟರು ಬಿಜೆಪಿ ರಾಜ್ಯಸಭಾ ಟಿಕೆಟ್‌ ಆಕಾಂಕ್ಷಿಯಾಗಿದ್ದಾಗಿ, ಬಿಜೆಪಿ ಪರ ತಾವು ಪತ್ರಿಕೋದ್ಯಮ ನಡೆಸಿದ್ದಾಗಿ ಎಲ್ಲೂ ಹೇಳಿಕೊಂಡಿಲ್ಲ. ಅಲ್ಲದೆ, ಟ್ವೀಟ್‌ ಕೂಡ ಮಾಡಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights