Heatwave : ಬಿಸಿಗಾಳಿಗೆ ಉತ್ತರ ಭಾರತ ತತ್ತರ, ಉತ್ತರ ಕರ್ನಾಟಕದಲ್ಲೂ ಏರತ್ತಿದೆ ತಾಪಮಾನ

ಒಂದಡೆ ಕರೋನಾ ವೈರಸ್ ಸಂಕಟ, ಇನ್ನೊಂದಡೆ ಲಾಕ್ ಡೌನ್ ಇದರ ನಡುವೆ ಬಿಸಿ ಗಾಳಿ ಜನ ಜೀವನವನ್ನು ಅತಂತ್ರಗೊಳಿಸುತ್ತಿದೆ..  ಮುಂಗಾರಿನ ಲಕ್ಷಣಗಳು ಗೋಚರಿಸುತ್ತಿರುವ ಸಂದರ್ಭದಲ್ಲಿಯೇ ಉತ್ತರ ಭಾರತದಲ್ಲಿ ಬಿಸಿ ಗಾಳಿ ಬೀಸುತ್ತಿದ್ದು ಜನ ತತ್ತರಿಸಿ ಹೋಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಮತ್ತು ಮಧ್ಯ ಭಾರತ ತೀವ್ರ ಬಿಸಿಲಿನ ಝಳಕ್ಕೆ ಕುಗ್ಗಿಹೋಗಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಕೆಲ ಭಾಗಗಳಲ್ಲಿ ಸಹ ಬಿಸಿ ಅಲೆಯ ವಾತಾವರಣ ಉಂಟಾಗುವ ಸಂಭವ ಇದೆ..

ಉತ್ತರ ಕರ್ನಾಟಕದ ಒಳನಾಡಿನಲ್ಲಿ ಸಹ ತಾಪಮಾನ ಮುಂದಿನ ದಿನಗಳಲ್ಲಿ ಗಣನೀಯ ಏರಿಕೆ ದಾಖಲಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಉತ್ತರ ಭಾರತದ ನಾಲ್ಕೈದು ರಾಜ್ಯಗಳಲ್ಲಿ ತಾಪಮಾನ ಈಗಾಗಲೇ ಅಂಕೆ ಮೀರಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಇನ್ನೂ ತೀವ್ರಗೊಳ್ಳುವ ಮುನ್ಸೂಚನೆ ಇದೆ.

ಬಿಸಿಗಾಳಿಯ ತೀವ್ರತೆಯ ಹಿನ್ನೆಲೆಯಲ್ಲಿ ದಿಲ್ಲಿ, ಪಂಜಾಬ್, ಹರ್‍ಯಾಣ, ರಾಜಾಸ್ಥಾನಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದೇ ರೀತಿ ದಕ್ಷೀನ ರಾಜ್ಯಗಳಾದ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಸಹ ತಾಪಮಾನದಲ್ಲಿ ತೀವ್ರ ಏರಿಕೆಯಾಗುವ ಲಕ್ಷಣಗಳು ಗೋಚರಿಸಿವೆ ಎಂದು ಹವಾಮಾಣ ಇಲಾಖೆ ಹೇಳಿದೆ.

ಈ ರಾಜ್ಯಗಳು ಸೇರಿದಂತೆ ಉತ್ತರ ಪ್ರದೇಶದ ಈಶಾನ್ಯ ಜಿಲ್ಲೆಗಳು ಹಾಗೂ ಚಂಡೀಗಢದಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಷಿಯಸ್ ವರೆಗೆ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ.  ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ 47 ಡಿಗ್ರಿ ತಲುಪುವ ಸಾಧ್ಯತೆಯಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights