Lock down : ತೆರವಿಗೆ PM ಗೆ ಬಹುಪಾಲು ಮುಖ್ಯಮಂತ್ರಿಗಳು ಮನವಿ…

ಪ್ರಧಾನಿ ನರೇಂದ್ರ ಮೋದಿ ಸಂಗಡ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಬಹುಪಾಲು ಮುಖ್ಯಮಂತ್ರಿಗಳು ಲಾಕ್‌ಡೌನ್ ತೆರವಿಗೆ ಪಟ್ಟು ಹಿಡಿದಿದ್ದಾರೆ. ಪ್ರಧಾನಿ ಮೋದಿ ಅವರು ಸೋಮವಾರ ಒಂಬತ್ತು ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಇದರಲ್ಲಿ ಆರೇಳು ರಾಜ್ಯಗಳ ಸಿಎಂಗಳು ಲಾಕ್‌ಡೌನ್ ಪರ ವಕಾಲತ್ತು ವಹಿಸಿದರು ಎಂದು ಮೂಲಗಳು ತಿಳಿಸಿವೆ.

ಬಿಹಾರ, ಒಡಿಶಾ, ಮಿಜೋರಾಂ, ಪುದುಚೆರಿ, ಉತ್ತರಾಖಂಡ ಮತ್ತು ಹರ್‍ಯಾಣ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್ ತೆರವಿಗೆ ಮನವಿ ಮಾಡಿದು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಸಿಎಂಗಳು ಇನ್ನಷ್ಟು ಹೆಚ್ಚಿನ ಸಡಿಲಿಕೆಗೆ ಆಗ್ರಹಿಸಿದರೇ, ಮೇಘಾಲಯವು ಲಾಕ್‌ಡೌನ್ ವಿಸ್ತರಣೆಗೆ ಒತ್ತಾಯಿಸಿತು ಎಂದು  ವರದಿಯಾಗಿದೆ..

ಲಾಕ್‌ಡೌನ್‌ನಿಂದ ಕ್ರಮೇಣ ಹೊರಬರುವುದರ ಜೊತೆಗೆ, ಆರ್ಥಿಕತೆಯ ಪುನಶ್ಚೇತನ, ವಲಸೆ ಕಾರ್ಮಿಕರ ಸಂಕಷ್ಟ, ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಮತ್ತು ಸೋಂಕು ಹರಡದಂತೆ ತಡೆಯುವ ಬಗ್ಗೆ ಮೋದಿ ಸಿಎಂಗಳು ಜೊತೆ ತಮ್ಮ ಚಿಂತನೆ ಹಂಚಿಕೊಂಡರು ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights