Made in India : ಅರೆಸೇನಾ ಕ್ಯಾಂಟೀನುಗಳಲ್ಲಿ ಸ್ವದೇಶೀಗೆ ಮಣೆ – ಆದೇಶ ವಾಪಸ್..

ಸ್ವದೇಶಿ ಘೋಷಣೆಯಿಂದ ಹಿಂದೆ ಸರೀತಾ ಮೋದಿ ಸರಕಾರ, ಯಾಕೆ ಈ ಪ್ರಶ್ನೆ ಅನ್ನುತ್ತಿರಾ, ಅದಕ್ಕೆ ಕಾರಣ ಅರೆಸೇನಾ ಕ್ಯಾಂಟೀನುಗಳಲ್ಲಿ ಸ್ವದೇಶೀಗೆ ಮಣೆ ಹಾಕಿ,  ಕೇವಲ ಲೋಕಲ್ ನಲ್ಲಿ ತಯಾರಾದ ವಸ್ತುಗಳನ್ನು ಮಾರಾಟ ಮಾಡಬೇಕ್ಕೆಂದು ನೀಡಿದ್ದ ಆದೇಶವನ್ನು  ಗೃಹ ಸಚಿವಾಲಯ ಹಿಂಪಡೆದಿದೆ..

ಕೊರೋನಾ ಸಂಕಷ್ಟವನ್ನು ಮುಂದಿಟ್ಟುಕೊಂಡು ಸ್ವದಶಿ ವಸ್ತುಗಳಿಗೆ ಪ್ರಧಾನ್ಯ ನೀಡುವ ತನ್ನ ಘೋಷವಾಕ್ಯದಿಂದ ಮೋದಿ ಸರಕಾರ ಹಿಂದೆ ಸರಿದಂತಿದೆ. ಲಾಕ್‌ಡೌನ್ ಸಂದರ್ಭ ದೇಶವನ್ನು ಉದ್ದೇಶಿಸಿ ನಾಲ್ಕನೇ ಬಾರಿ ಭಾಷಣ ಮಾಡುವ ಸಂದರ್ಭದಲ್ಲಿ ಮೋದಿ ಸ್ವದೇಶಿ ವಸ್ತುಗಳ ಉತ್ತೇಜನಕ್ಕೆ ಕರೆ ನೀಡಿದ್ದರು. ಲೋಕಲ್ ಬಗ್ಗೆ ವೋಕಲ್ ಆಗಬೇಕು ಅಂತ PM  ನರೇಂದ್ರ ಮೋದಿ ಹೇಳಿದ್ದರು..

ಇದರ ಬೆನ್ನಲ್ಲಿಯೇ ಗೃಹ ಸಚಿವಾಲಯವು ತನ್ನ ಅಧೀನದಲ್ಲಿ ಬರುವ ಎಲ್ಲ ಅರೆ ಸೇನಾ ಕ್ಯಾಂಟೀನುಗಳಲ್ಲಿ ಸ್ವದೇಶಿ ವಸ್ತುಗಳನ್ನೇ ಮಾರಾಟ ಮಾಡುವುದಾಗಿ ಘೋಷಿಸಿತ್ತು. ಸ್ವತಃ ಗೃಹ ಮಂತ್ರಿ ಅಮಿತ್ ಶಾ ಈ ಬಗ್ಗೆ ಹೇಳಿಕೊಂಡಿದ್ದರು. ಇದರನ್ವಯ ದೇಶಾದ್ಯಂತ ಕ್ಯಾಂಟೀನುಗಳು ಬೇರೆ ವಸ್ತುಗಳಿಗೆ ತಾನು ನೀಡಿದ್ದ ಖರೀದೆ ಆದೇಶವನ್ನು ಹಿಂಪಡೆಯಲು ಮುಂದಾದವು.

ಆದರೆ ಇದೀಗ ಉಲ್ಟಾ ಹೊಡೆದಿರುವ ಗೃಹ ಇಲಾಖೆ ಸ್ವದೇಶಿ ವಸ್ತುಗಳನ್ನಷ್ಟೇ ಖರಿದಿಸಬೇಕು ಎಂಬ ಫರ್ಮಾನನ್ನು ವಾಪಸ್ ಪಡೆದಿದೆ. ಸುಮಾರು 10 ಲಕ್ಷ ಅರೆ ಸೇನಾ ಯೋಧರ ಕುಟುಂಬಗಳು (ಸುಮಾರು 50 ಲಕ್ಷ ಮಂದಿ) ಈ ಕ್ಯಾಂಟೀನುಗಳಲ್ಲಿ ವಹಿವಾಟು ನಡೆಸುತ್ತಾರೆ.

ದೇಶಾದ್ಯಂತ ಸುಮಾರು 1700 ಇಂತಹ ಕ್ಯಾಂಟೀನುಗಳಿದ್ದು ಇವುಗಳ ಒಟ್ಟು ವಾರ್ಷಿಕ ವಹಿವಾಟು 2800 ಕೋಟಿ ರೂಗಳೆಂದು ಅಂದಾಜು ಮಾಡಲಾಗಿದೆ.  ಈ ರೀತಿ ನೀಡಿದ ಕರೆಯನ್ನು ಹಿಂಪಡೆದಿದ್ದು ಇದೆ ಮೊದಲೇನಲ್ಲ… ಕರೋನಾ ವೈರಸ್ ಹಾವಳಿಯಿಂದ ಹಾಕಿದ ಲಾಕ ಡೌನ್ ನಲ್ಲಿ PM ನರೇಂದ್ರ ಮೋದಿ ಅನೇಕ ಘೋಷಣೆಗಳನ್ನು ಮಾಡಿ ನಂತರ ಯೂ ಟರ್ನ್ ತೆಗೆದುಕೊಂಡಿದ್ದು ಹಲವಾರು ಬಾರಿ….

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights