ಉತ್ತರಪ್ರದೇಶ ಸ್ಥಳೀಯ ಮತದಾನ ವೇಳೆ ವರದಿಗಾರನ ಮೇಲೆ ಹಲ್ಲೆ ಮಾಡಿದ ಐಎಎಸ್ ಅಧಿಕಾರಿ!

ಉತ್ತರಪ್ರದೇಶದ ಸ್ಥಳೀಯ ಮತದಾನದ ಸಮಯದಲ್ಲಿ ಐಎಎಸ್ ಅಧಿಕಾರಿಯೊಬ್ಬರು ವರದಿಗಾರನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾರೆ.

ಉನ್ನಾವೊದ ಮುಖ್ಯ ಅಭಿವೃದ್ಧಿ ಅಧಿಕಾರಿ ಅಥವಾ ಸಿಡಿಒ ದಿವ್ಯಾಂಶು ಪಟೇಲ್ ಅವರು ದೂರದರ್ಶನ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಶನಿವಾರ ನಡೆದ ಉತ್ತರಪ್ರದೇಶದ ಸ್ಥಳೀಯ ಚುನಾವಣೆಯಲ್ಲಿ ದೃಶ್ಯವೊಂದರಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಟಿವಿ ವರದಿಗಾರನನ್ನು ಸಾರ್ವಜನಿಕವಾಗಿ ಬೆನ್ನಟ್ಟಿ ಕೆಟ್ಟದಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಐಎಎಸ್ ಅಧಿಕಾರಿ ಮತ ಚಲಾಯಿಸುವುದನ್ನು ತಡೆಯಲು ಸ್ಥಳೀಯ ಕೌನ್ಸಿಲ್ ಸದಸ್ಯರನ್ನು ಅಪಹರಿಸಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಕ್ಯಾಮಾರಾದಲ್ಲಿ ದಿವ್ಯಾಂಶು ಪಟೇಲ್ ಸಿಕ್ಕಿಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಅಧಿಕಾರಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಖಂಡನೆಗೆ ಕಾರಣವಾಗಿದೆ.

“ನಾವು ಎಲ್ಲಾ ಪತ್ರಕರ್ತರೊಂದಿಗೆ ಮಾತುಕತೆ ನಡೆಸಿದ್ದೇವೆ. ಹಲ್ಲೆಗೊಳಗಾದ ಪತ್ರಕರ್ತನಿಂದ ನಮಗೆ ಲಿಖಿತ ದೂರು ಬಂದಿದೆ. ಪ್ರಕರಣದಲ್ಲಿ ನ್ಯಾಯಯುತ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ” ಎಂದು ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕನಿಷ್ಠ 17 ಜಿಲ್ಲೆಗಳಲ್ಲಿ ಬ್ಲಾಕ್ ಪಂಚಾಯತ್ ಮುಖ್ಯಸ್ಥರನ್ನು ಆಯ್ಕೆ ಮಾಡಲು ಮತದಾನವನ್ನು ಗುರುತಿಸಿದ ದಿನದಲ್ಲಿ ಈ ದಾಳಿ ನಡೆದಿದೆ. ಮತದಾನದಲ್ಲಿ ಮತ ಚಲಾಯಿಸುವುದನ್ನು ತಡೆಯುವ ಬ್ಲಾಕ್ ಕೌನ್ಸಿಲ್ ಸದಸ್ಯರನ್ನು ತಮ್ಮತ್ತ ಸೆಳೆಯುವ ಪ್ರಕರಣಗಳು ರಾಜ್ಯದ ಹಲವಾರು ಭಾಗಗಳಿಂದ ಕಂಡು ಬಂದಿವೆ. ಆದರೆ ಬಿಜೆಪಿ ಇದನ್ನ “ಐತಿಹಾಸಿಕ ವಿಜಯ” ಎಂದು ಹೇಳಿಕೊಂಡಿದೆ.

ಹಿಂಸಾಚಾರದ ಇತರ ವೀಡಿಯೊಗಳಲ್ಲಿ ಎಟಾವಾ ಜಿಲ್ಲೆಯ ಹಿರಿಯರೊಬ್ಬರನ್ನು ಬಿಜೆಪಿಯ ಬೆಂಬಲಿಗರು ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights