ಆನ್‌ಲೈನ್ ಕ್ಲಾಸ್: ಮೊಬೈಲ್ ಖರೀದಿಸಲು ಹಣವಿಲ್ಲದೆ ಬಾಲಕಿ ಆತ್ಮಹತ್ಯೆ
ಆನ್‌ಲೈನ್ ತರಗತಿಗೆ ಹಾಜರಾಗಲು ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ತರಗತಿಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ಮನನೊಂದ 17 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಯಗಾಂವ್ ಮೂಲದ ಬಾಲಕಿ ತನ್ನ ಮನೆಯಲ್ಲಿ ನೇಣಯ ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು 11ನೇ ತರಗತಿ ಓದುತ್ತಿದ್ದಳು. ಆಕೆಯ ತಂದೆ-ತಾಯಿ ದಿನಗೂಲಿ ನೌಕರರಾಗಿದ್ದಾರೆ. ಆನ್‌ಲೈನ್ ತರಗತಿ ಹಾಜರಾಗಲು ಮೊಬೈಲ್ ಬೇಕೆಂದು ಬಾಲಕಿ ಒತ್ತಾಯಿಸಿದ್ದಾರೆ. ಆದರೆ, ಲಾಕ್‌ಡೌನ್ ಸಮಯವಾದ್ದರಿಂದ ಸರಿಯಾಗಿ ಕೂಲಿಯೂ ಸಿಗದ ಪೋಷಕರು, ಫೋನ್ ಖರೀದಿಸಲು ಬೇಕಾಗುವಷ್ಟು ಹಣ ತಮ್ಮಲ್ಲಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಬೇಸರಗೊಂಡಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನಾ ಸ್ಥಳದಲ್ಲಿ ಆತ್ಮಹತ್ಯಾ ಪತ್ರ ದೊರೆತಿದ್ದು, ಬಾಲಕಿಯ ಸಾವಿಗೆ ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗದೇ ಇರುವುದು ಕಾರಣ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Read Also: ಕೊರೊನಾದಿಂದ ಅನಾಥರಾದ ಮಕ್ಕಳಿಗೆ ತಮ್ಮ ಪೋಷಕರಿಗೆ ಏನಾಯಿತು ಎಂಬುದರ ಅರಿವೇ ಇಲ್ಲ!