SSLC Result: ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ, ಯಾದಗಿರಿ ಕೊನೆ ಸ್ಥಾನ!

SSLC ಪರೀಕ್ಷೆಯಲ್ಲಿ ಈ ಬಾರಿ ಶೇ.71.80 (5, 82, 314) ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಬೆಂಗಳೂರು ಗ್ರಾಮಾಂತರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ, ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ.

ಈ ಬಾರಿಯ ಶೇಕಡಾವಾರು ಫಲಿತಾಂಶದಲ್ಲಿ ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು,  ಶೇ.77.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ.  ಶೇ.66.41 ಬಾಲಕರು ಪಾಸಾಗಿದ್ದಾರೆ. 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೆ, 11 ಮಂದಿ 625ಕ್ಕೆ 624 ಅಂಕಗಳನ್ನು ಪಡೆದಿದ್ದಾರೆ.

ಇನ್ನು ನಗರ ಪ್ರದೇಶದಲ್ಲಿ ಶೇ.73.41 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕನ್ನಡ ಮಾಧ್ಯಮದ ಶೇ. 70.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆಂಗ್ಲ ಮಾಧ್ಯಮದ ಶೇ.84.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದು ಒಟ್ಟು ವಿದ್ಯಾರ್ಥಿಗಳಲ್ಲಿ 2, 28, 734 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.

ಟಾಪರ್ಸ್:

ಈ ಬಾರಿ ಆರು ಮಂದಿ ಟಾಪ್ಟರ್​ಗಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸನ್ನಿಧಿ ಮಹಾಬಲೇಶ್ವರ್ ಹೆಗಡೆ, ಬೆಂಗಳೂರಿನ ನಾಗಸಂದ್ರದ ಚಿರಾಯು ಕೆಎಸ್, ಬೆಂಗಳೂರಿನ ಸದಾಶಿವನಗರದ ನಿಖಿಲೇಶ್ ಮರಳಿ, ಮಂಡ್ಯದ ದುದ್ದದ ಧೀರಜ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಅನುಷಾ ಎಎಲ್, ಚಿಕ್ಕಮಗಳೂರಿನ ತನ್ಮಯಿ ಅವರು ಶೇ. 100ರಷ್ಟು ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.

ಎ ಗ್ರೇಡ್ ಪಡೆದ 10 ಜಿಲ್ಲೆಗಳು:

1) ಚಿಕ್ಕಬಳ್ಳಾಪುರ
2) ಬೆಂಗಳೂರು ಗ್ರಾಮಾಂತರ
3) ಮಧುಗಿರಿ
4) ಮಂಡ್ಯ
5) ಚಿತ್ರದುರ್ಗ
6) ಕೋಲಾರ
7) ಉಡುಪಿ
8) ರಾಮನಗರ
9) ಹಾಸನ
10) ಉತ್ತರ ಕನ್ನಡ

ಬಿ ಗ್ರೇಡ್ ಪಡೆದ ಜಿಲ್ಲೆಗಳು:
1) ಚಾಮರಾಜನಗರ
2) ಮಂಗಳೂರು
3) ಬಳ್ಳಾರಿ
4) ತುಮಕೂರು
5) ಶಿರಸಿ
6) ಬೆಂಗಳೂರು ಉತ್ತರ
7) ದಾವಣಗೆರೆ
8) ಕೊಡಗು
9) ಶಿವಮೊಗ್ಗ
10) ಚಿಕ್ಕಮಗಳೂರು
11) ಮೈಸೂರು
12) ಕಲಬುರ್ಗಿ
13) ಕೊಪ್ಪಳ
14) ಬೀದರ್
15) ವಿಜಯಪುರ
16) ಬಾಗಲಕೋಟೆ
17) ಧಾರವಾಡ
18) ರಾಯಚೂರು
19) ಬೆಂಗಳೂರು ದಕ್ಷಿಣ
20) ಚಿಕ್ಕೋಡಿ

ಸಿ ಗ್ರೇಡ್ ಪಡೆದ ಜಿಲ್ಲೆಗಳು:
1) ಬೆಳಗಾವಿ
2) ಗದಗ
3) ಹಾವೇರಿ
4) ಯಾದಗಿರಿ


Read Also:  SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 71.80 ಫಲಿತಾಂಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights