TikTokನಲ್ಲೂ ದಾಖಲೆ ಬರೆದ ದರ್ಶನ್! ಡಿಬಾಸ್‌ ಟ್ರೆಂಡ್‌ ಎಷ್ಟು ಗೊತ್ತಾ?

ಸ್ಯಾಂಡಲ್‌ವುಡ್‌ನ​​ ಸ್ಟಾರ್ ನಟ​ ದರ್ಶನ್​ ಬಗೆಗಿನ ಸುದ್ದಿಗಳು ಕ್ಷಣಾರ್ಧದಲ್ಲೇ ವೈರಲ್‌ ಅಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್‌ ಆಗಿರುವ ದರ್ಶನ್‌ ಅಭಿಮಾನಿಗಳು ದರ್ಶನ್‌ ಸುದ್ದಿಗಳನ್ನು ಟ್ರಂಡ್‌ ಮಾಡುವುದರಲ್ಲಿ ನಿರತರಾಗಿದ್ದಾರೆ. ಡಿಬಾಸ್​ ಹ್ಯಾಶ್​​ಟ್ಯಾಗ್​ ಮೂಲಕ  ದರ್ಶನ್​ ಕುರಿತಾದ ವಿಚಾರಗಳು ಟ್ರೆಡಿಂಗ್​ನಲ್ಲಿ ಕಾಣಿಸಿಕೊಳ್ಳುತ್ತದೆ. ಆದರೀಗ ಟಿಕ್​ಟಾಕ್​ನಲ್ಲೂ ಡಿಬಾಸ್​​ ಹ್ಯಾಶ್​ಟ್ಯಾಗ್​ ಅತಿ ಹೆಚ್ಚ ಟ್ರೆಂಡ್‌ ಸೃಷ್ಟಿಸಿದ್ದು ದಾಖಲೆ ಬರೆದಿದೆ.

ಅನೇಕರು ದರ್ಶನ್​ ಸಿನಿಮಾ ಡೈಲಾಗ್​, ಹಾಡುಗಳನ್ನು ಬಳಸಿಕೊಂಡು ಟಿಕ್​ಟಾಕ್​​​​ ಮಾಡುತ್ತಾರೆ. ವಿಡಿಯೋ ಅಪ್ಲೋಡ್​ ಮಾಡುವಾಗ ಡಿಬಾಸ್​ ಹ್ಯಾಶ್​ಟ್ಯಾಗ್​ ಬಳಸಿ ಅಪ್ಲೋಡ್​ ಮಾಡುತ್ತಾರೆ. ಈವರೆಗೆ ಡಿಬಾಸ್​ ಹ್ಯಾಶ್​ಟ್ಯಾಗ್​​ 3 ಬಿಲಿಯನ್​ನ್ನಷ್ಟು ಬಾರಿ ಬಳಸಲಾಗಿದೆ. ಆ ಮೂಲಕ ದರ್ಶನ್ ಹೆಸರಿಗೆ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.

ನಟ ದರ್ಶನ್​​ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ದರ್ಶನ್​ ಕೂಡ ಪ್ರಮುಖರು. ಹಾಗಾಗಿ ದರ್ಶನ್​ ಅವರ ಮಾತು, ನಟನೆ, ಸಿನಿಮಾ, ಸಹಾಯ, ಪ್ರಾಣಿ ಪ್ರೀತಿ ಎಲ್ಲವನ್ನು ಅಭಿಮಾನಿಗಳು ಇಷ್ಟಪಡುತ್ತಾರೆ.  ದರ್ಶನ್​ ಕುರಿತಾದ ಏನೇ ವಿಚಾರ ಬಂದರು ನಿಮಿಷಾರ್ಧದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿರುತ್ತದೆ.

ಇತ್ತೀಚೆಗೆ ಟಿಕ್​ ಟಾಕ್​ ಆ್ಯಪ್​ನಲ್ಲಿ ಕೆ.ಜಿ.ಎಫ್​ ಸಿನಿಮಾದ ಹೆಸರು ಕೂಡ ದಾಖಲೆ ಸೃಷ್ಠಿಸಿತ್ತು. ಬರೋಬ್ಬರಿ 3.4 ಬಿಲಿಯನ್​ನಷ್ಟು​​ ಕೆ.ಜಿ.ಎಫ್​​ ಹ್ಯಾಶ್​​ಟ್ಯಾಗ್​ ನಮೂದಿಸುವ ಮೂಲಕ ದಾಖಲೆಯನ್ನು ಬರೆದಿತ್ತು. ಭಾರತದ ಸಿನಿಮಾಗಳಲ್ಲಿ ಇಷ್ಟೊಂದು ಹ್ಯಾಶ್​ಟ್ಯಾಗ್​ ನಮೂದಿಸಿದ ಚಿತ್ರದಲ್ಲಿ ಕೆ.ಜಿ.ಎಫ್ ​ಹೆಗ್ಗಳಿಕೆ ಪಡೆದುಕೊಂಡಿತ್ತು. ಅದರಂತೆ ಇದೀಗ ನಟರ ಹೆಸರಿನಲ್ಲಿ ದರ್ಶನ್​ ಅವರ ಅಭಿಮಾನಿಗಳು ಇಟ್ಟಿರುವ ಡಿ ಬಾಸ್​ ಹೆಸರು ಹೆಚ್ಚು ಬಳಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights