Under19 cricket : ಪ್ರಶಸ್ತಿ ಗೆದ್ದ ಬಾಂಗ್ಲಾ ನಾಯಕ ಹೊಡೆದಾಡಿಕೊಂಡ್ಡಿದ್ದಕ್ಕಾಗಿ ಕ್ಷಮೆ ಕೇಳಿದ

ಅಂಡರ್19 ವಿಶ್ವಕಪ್ ಫೈನಲ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಆಟಗಾರರು ಮೈದಾನದಲ್ಲೇ ಹೊಡೆದಾಡಿಕೊಂಡಿದ್ದಾರೆ. ವಿಶ್ವಕಪ್ ಫೈನಲ್ ನಲ್ಲಿ ಬಾಂಗ್ಲಾದೇಶವು 3 ವಿಕೆಟುಗಳಿಂದ ಪಂದ್ಯವನ್ನು ಗೆದ್ದುಕೊಂದಿತ್ತು. ಕೂಡಲೇ ಆಟಗಾರು ಮೈದಾನದಲ್ಲೇ ಹೊಡೆದಾಡಿಕೊಂಡಿದ್ದಾರೆ.

ಬಾಂಗ್ಲಾದೇಶವು ಇದೇ ಮೊದಲ ಬಾರಿಗೆ ಅಂಡರ್19 ವಿಶ್ವಕಪ್ ಅನ್ನು ಗೆದ್ದುಕೊಂಡಿದೆ. ಕ್ರಿಕೆಟಿಗರ ನಡುವೆ ವಾಗ್ವಾದಕ್ಕೆ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ.

ಹೊಡೆದಾಟ ಪ್ರಾರಂಭವಾದ ಕೂಡಲೆ ಫೀಲ್ಡ್ ಅಂಪೈರ್‌ಗಳು ಮತ್ತು ಎರಡೂ ಕಡೆಯ ಸಿಬ್ಬಂದಿಗಳು ಕ್ರಿಕೆಟಿಗರನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಆದರೂ ಸುಮಾರು 40-50 ಸೆಕೆಂಡುಗಳ ಕಾಲ ತಳ್ಳುವಿಕೆಯು ಮುಂದುವರೆಯಿತು. ಕೊನೆಯಲ್ಲಿ ಭಾರತದ ಅಂಡರ್19 ಕೋಚ್ ಪ್ಯಾರಾಸ್ ಮಾಂಬ್ರೆ ಆಟಗಾರರನ್ನು ಶಾಂತಗೊಳಿಸಿ, ಡ್ರೆಸ್ಸಿಂಗ್ ಕೋಣೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು.

ಅಂಡರ್ -19 ವಿಶ್ವಕಪ್ ಫೈನಲ್ ಪಂದ್ಯದ ನಂತರ ಘಟನೆಗೆ ಭಾರತದ ಕ್ಯಾಪ್ಟನ್ ಪ್ರಿಯಮ್ ಗರ್ಗ್ ಬಾಂಗ್ಲಾದೇಶದ ವಿರುದ್ಧ ಕಿಡಿಕಾರಿದ್ದಾರೆ. “ನಾವು ಸುಮ್ಮನಿದ್ದೆವು. ಗೆಲುವು ಮತ್ತು ಸೋಲು ಆಟದ ಒಂದು ಭಾಗವಾಗಿದೆ. ಆದರೆ ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ಕೆಟ್ಟದಾಗಿತ್ತು. ಅದು ಸಂಭವಿಸಬಾರದು” ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಭಾರತದ ನಾಯಕ ಪ್ರಿಯಮ್ ಗರ್ಗ್ ಹೇಳಿದ್ದಾರೆ.

“ಕೆಲವೊಮ್ಮೆ ಈ ಸಂಗತಿಗಳು ಸಂಭವಿಸುತ್ತವೆ. ಆಟಗಾರರು ಕೆಲವೊಮ್ಮೆ ತುಂಬಾ ಭಾವುಕರಾಗಬಹುದು. ಆದರೆ ನಿನ್ನೆ ಏನಾಯಿತು ಅದು ಕ್ರಿಕೆಟ್‌ಗೆ ಒಳ್ಳೆಯದಲ್ಲ. ಭವಿಷ್ಯದಲ್ಲಿ ನೀವು ಈ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಭಾರತದ ಕೋಚ್ ಪರಾಸ್ ಮಾಂಬ್ರೆ ಹೇಳಿದ್ದಾರೆ.

ಬಾಂಗ್ಲಾದೇಶ ನಾಯಕ ಅಕ್ಬರ್ ಅಲಿ ತಮ್ಮ ತಂಡದ ಪರವಾಗಿ ಕ್ಷಮೆಯಾಚಿಸಿದ್ದಾರೆ ಮತ್ತು ಅವರ ತಂಡದ ಕೆಲವು ಆಟಗಾರರಲ್ಲಿ ಭಾವನೆಗಳು ಉತ್ತಮಗೊಂಡಿವೆ ಎಂದು ಒಪ್ಪಿಕೊಂಡಿದ್ದಾರೆ.

“ಘಟನೆಯ ಬಗ್ಗೆ ನನಗೆ ನಿಖರವಾಗಿ ತಿಳಿದಿಲ್ಲ. ಆದರೆ ಏನಾಯಿತು ಅದು ನಡೆಯಬಾರದಿತ್ತು. ನಮ್ಮ ಎದುರಾಳಿಗಳಿಗೆ ಗೌರವವನ್ನು ತೋರಿಸಬೇಕು ಮತ್ತು ನಾವು ಆಟದ ಬಗ್ಗೆ ಗೌರವವನ್ನು ಹೊಂದಿರಬೇಕು. ಏಕೆಂದರೆ ಕ್ರಿಕೆಟ್ ಅನ್ನು ಸಜ್ಜನರ ಆಟ ಎಂದು ಕರೆಯಲಾಗುತ್ತದೆ. ಆದ್ದರಿಂದ ನನ್ನ ತಂಡದ ಪರವಾಗಿ ನಾನು ವಿಷಾದಿಸುತ್ತೇನೆ ಎಂದು ಅಕ್ಬರ್ ಅಲಿ ಹೇಳಿದ್ದಾರೆ.

ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ ನಾವು ಭಾರತದ ಎದುರು ಏಷ್ಯಾಕಪ್ ಫೈನಲ್‌ನಲ್ಲಿ ಸೋತಿದ್ದೆವು. ಆದ್ದರಿಂದ ಹುಡುಗರು ತುಂಬಾ ಸಿಟ್ಟಿನಲ್ಲಿದ್ದು, ಸೇಡು ತೀರಿಸಿಕೊಳ್ಳಲು ಬಯಸಿದ್ದರು. ಆದರೆ ಅದು ಆಗಬೇಕಿತ್ತು ಎಂದು ನಾನು ಹೇಳುವುದಿಲ್ಲ. ನನ್ನ ಕಡೆಯಿಂದ ಕ್ಷಮಿಸಿ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights