ಅಂತರ್ ಜಿಲ್ಲೆಗಳ ಸಂಚಾರಕ್ಕಾಗಿ ಇ-ಪಾಸ್ ಸೌಲಭ್ಯ

ಲಾಕ್‌ಡೌನ್‌ನಿಂದಾಗಿ ಅನ್ಯ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಅಥವಾ ಅನ್ಯ ಜಿಲ್ಲೆಗಳಲ್ಲಿ ಉದ್ಯೋಗ ಮಾಡುವವರಿಗೆ ಅಂತರ್‌ಜಿಲ್ಲೆಗಳ ಸಂಚಾರಕ್ಕಾಗಿ ಆನ್‌ಲೈನ್‌ ಇ-ಪಾಸ್‌ ಸೌಲಭ್ಯ ನೀಡಲಾಗಿದೆ.

ಪೊಲೀಸ್‌ ಇಲಾಖೆಯು ಈ ಪಾಸ್‌ಗಳನ್ನು ವಿತರಿಸುತ್ತಿದೆ. ಪಾಸ್‌ ಪಡೆಯಲು ಅರ್ಹರಾಗಿರುವವರಿಗೆ ಇ-ಪಾಸ್‌ ಸೌಲಭ್ಯ ದೊರೆಯುತ್ತಿದೆ. ಪಾಸ್‌ ಪಡೆಯಲು ಅಗತ್ಯವಿರುವ ಮಾಹಿತಿಗಳು ಮತ್ತು ದಾಖಲೆಗಳನ್ನು ನೀಡಿ ಪಾಸ್‌ ಪಡೆಯಬಹುದು.

ಈ ಪಾಸ್‌ಗಳು ಒಂದು ದಿನದ, ಒಂದು ಕಡೆಯ ಹಾಗೂ ಒಂದು ಅವಧಿ ಪಾಸ್‌ ಆಗಿರಲಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಪಾಸ್‌ಗಳನ್ನು ತೋರಿಸಿ ಮತ್ತು ಆರೋಗ್ಯ ಪರೀಕ್ಷೆಗೆ ಒಳಪಟ್ಟು ಸಂಚರಿಸಬಹುದು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್ ತಿಳಿಸಿದ್ದಾರೆ.

ಪಾಸ್‌ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ:

https://kspclearpass.idp.mygate.com/otp

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights