ಕರುನಾಡಿನಲ್ಲಿಂದು 122 ಹೊಸ ಕೊರೊನಾ ಕೇಸ್ : 109 ಸೋಂಕಿತರಿಗೆ ಮಹಾರಾಷ್ಟ್ರ ನಂಟು..!
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಆತಂಕವನ್ನೂ ಹೆಚ್ಚಿಸುತ್ತಿದೆ. ರಾಜ್ಯದಲ್ಲಿ ಹೊಸದಾಗಿ 122 ಕೊರೊನಾ ಕೇಸ್ ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ಒಟ್ಟು 2405 ಕ್ಕೇರಿಕೆ ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ವರದಿ ನೀಡಿದೆ.
ಇಂದು ಕೊರೊನಾ ಅಘಾತವನ್ನುಂಟು ಮಾಡಿದ್ದು ಒರೋಬ್ಬರಿ 122 ಪ್ರಕರಣ ದಾಖಲಾಗಿದ್ದು, ಈ ಪೈಕಿ 109 ಜನರಿಗೆ ಮಹಾರಾಷ್ಟ್ರದ ಲಿಂಕ್ ಇದೆ. ಇದರ ಜೊತೆಗೆ ಬೇರೆ ಬೇರೆ ರಾಜ್ಯಗಳಿಂದ ವಲಸೆ ಬಂದವರಿಂದ ಸೋಂಕಿತರ ಸಂಪರ್ಕದಿಂದ ಸೋಂಕು ಹರಡಿದೆ.
ಕಲಬುರಗಿಯಲ್ಲಿ ಬುಧವಾರ ಕೊರೊನಾ ವೈರಸ್ ಸೋಂಕು ಸ್ಫೋಟಗೊಂಡಿದೆ. ಕಲಬುರಗಿ -28, ಯಾದಗಿರಿ – 16, ದಕ್ಷಿಣ ಕನ್ನಡ – 11, ಉಡುಪಿ -9, ಹಾಸನ – 14, ಬೆಂಗಳೂರು – 6, ಉತ್ತರ ಕನ್ನಡ – 4, ರಾಯಚೂರು – 5, ಬೆಳಗಾವಿ – 4, ಚಿಕ್ಕಗಮಳೂರು – 3, ಬೀದರ್ – 13, ಬಳ್ಳಾರಿ – 1, ಮಂಡ್ಯ – 1 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ಇವರಲ್ಲಿ 25 ಮಕ್ಕಳು ಸೋಂಕಿತರು ಇದ್ದಾರೆ. 1,2,3,4,5 ವರ್ಷದ ಮಕ್ಕಳಿಗೆ ಕೊರೊನಾ ಸೋಂಕು ಹರಿಡಿದೆ. ಇವರು ಬೇರೆ ರಾಜ್ಯದಿಂದ ಕುಟುಂಬದೊಂದಿಗೆ ಪ್ರಯಾಣ ಮಾಡಿ ಬಂದವರಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ 45 ಜನ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ.

